Friday, 30 May 2014

election 2014 a review



ಇತ್ತೀಚೆಗೆ ನಡೆದ ೧೬ನೆ ಲೋಕಸಭೆಯ ಮಹಾಚುನಾವಣೆ ಭಾರತದ ಚುನಾವಣಾ ಇತಿಹಾಸದಲ್ಲೇ ನಡೆದ ಅತ್ಯಂತ ವಿಶಿಷ್ಠ ಹಾಗೂ ವ್ಯಕ್ತಿ ಕೇಂದ್ರಿತ ಅಧ್ಯಕ್ಷೀಯ ಮಾದರಿಯ ಅಪಾಯಕಾರಿ ಚುನಾವಣೆ. ಚುನಾವಣೆಯಲ್ಲಿ ಬಿಜೆಪಿಗಿಂತ ಮಾಧ್ಯಮಗಳು ಹೆಚ್ಚು ವಿಜಯ ಸಾಧಿಸಿವೆ ಹಾಗಾಗಿ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ದೇಶದ ಹೆರಾಂತ ಪತ್ರಕರ್ತ ಡಾ.ಸಾಯಿನಾಥ್ ಹೇಳಿದಂತೆ ಚುನಾವಣೆಯಲ್ಲಿ ಮೀಡಿಯಾ ಸುನಾಮಿ ಸೃಷ್ಠಿಸಿತು ಎಂದು ಪತ್ರಕರ್ತ ಸತೀಶ್.ಎಚ್.ಜಿ ವಿಶ್ಲೇಷಿದರು. ಅವರು ನಿನ್ನೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಯನ ವೃತ್ತವು ಆಯೋಜಿಸಿದ್ದ ಚುನಾವಣಾ ವಿಮರ್ಷೆಯಲ್ಲಿ ವಿಷಯ ಮಂಡಿಸಿ ಮಾತನಾಡುತ್ತಿದ್ದರು.

      ಕಾಂಗ್ರೇಸ್ ನೇತೃತ್ವದ ಯು.ಪಿ.. ಸರ್ಕಾರದ ೧೦ ವರ್ಷಗಳ ಲಂಗುಲಗಾಮಿಲ್ಲದ ಮಹಾನ್ ಬ್ರಷ್ಠ ಆಡಳಿತ ಹಾಗೂ ಮೂರನೇ ರಂಗದ ನಿಷ್ಕ್ರಿಯತೆ ಹಾಗೂ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಹಿಂದೂ ಮತಗಳ ಧೃವೀಕರಣ ಬಿಜೆಪಿಯನ್ನು ಅತ್ಯಧಿಕ ಸ್ಥಾನಗಳಿಂದ ಗೆಲ್ಲಿಸುವಲ್ಲಿ ನಿಣಾಯಕ ಪಾತ್ರವಹಿಸಿದವು ಜೊತೆಗೆ ಯುವಜನತೆ, ಮಾಧ್ಯಮ ಹಾಗೂ ಬಿಜೆಪಿ ಮಾತೃ ಸಂಸ್ಥೆ ನೇರವಾಗಿ ಚುನಾವಣಾ ರಂಗಕ್ಕೆ ಇಳಿದು ಸಹಕಾರಿಯಾದವು. ಚುನಾವಣೆಯಲ್ಲಿ ಮಾಧ್ಯಮಗಳು ಜನರನ್ನು ಏಕ ವ್ಯಕ್ತಿಕಡೆ ಸಮ್ಮೋಹಿತ ಗೊಳಿಸಿದವು ಸಮ್ಮೋಹನಗೊಳಿಸುವ ಕೆಲಸದಲ್ಲಿ ಮಾಧ್ಯಮಗಳ ನೀತಿಯನ್ನು ಮೀರಿ ಮೊದಲ ಬ್ರಷ್ಟಾಚಾರಿಗಳಾದವು ದೇಶದಲ್ಲಿ ಸುಮಾರು ೩೯೦ಕ್ಕೂ ಅಧಿಕ ಮಾಧಮಗಳಿವೆ ಅದರಲ್ಲಿ ಕೇವಲ ೧೦ ರಿಂದ ೧೫ ಮುಖ್ಯವಾಹಿನಿಗಳು ಮಾತ್ರ ಮೋದಿ ಪರವಾದ ಅಲೆಯನ್ನು ಸೃಷ್ಠಿಸಿ ನೇರ ಚುನಾವಣೆ ನಡೆಸಿದವು ಅದಕ್ಕೆ ಪ್ರತಿಯಾಗಿ ಸಾವಿರಾರು ಕೋಟಿ ರೂಗಳನ್ನು ಜಾಹಿರಾತಿನ ಮೂಲಕ ಆದಾಯಗಳಿಸಿದವು ಎಂದು ತಿಳಿಸಿದ ಅವರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಬಹುದಾದ ಇನ್ನೊಂದು ವರ್ಗ ಬುದ್ದಿ ಜೀವಿಗಳದ್ದು ಅದು ತನ್ನ ಬೌಧ್ಧಿಕ ದಿವಾಳಿಕೋರತನದಿಂದ ಯುವಜನತೆಯನ್ನು ಶಿಕ್ಷಿತರಾಗಿಸುವಲ್ಲಿ ವಿಫಲಗೊಂಡಿತು ಮಾತ್ರವಲ್ಲ ಕಾಂಗ್ರೆಸ್ಸಿನ ಏಜೆಂಟರಂತೆ ವರ್ತಿಸಲಾರಂಬಿಸಿದರು ಎಂದರು.

      ಆರ್.ಎಸ್.ಎಸ್. ಪ್ರಚಾರಕ ಮೋಹನ್ ಭಾಗವತ್ ಬಾರಿ ಬಿಜೆಪಿ ಗೆಲ್ಲದಿದ್ದರೆ ಇನ್ನು ನೂರು ವರ್ಷ ಗೆಲ್ಲಲಾರದು ಹಾಗಾಗಿ ಯಾವ ಮಾನದಂಡವಾದರು ಬಳಸಿ, ಯಾವ ಬೆಲೆಯನ್ನಾದರೂ ತೆತ್ತಿ ಚುನಾವಣೆ ಗೆಲ್ಲಲೇ ಬೇಕು ಎಂದು ಕರೆ ನೀಡಿದ ಪರಿಣಾಮ ಇಡೀ ಚುನಾವಣೆಯನ್ನು ನಿಷ್ಪಕ್ಷಗೊಳಿಸಿ ಗುಜರಾತನ್ನು ಕೇವಲ ಹಿಂದೂ ರಾಜ್ಯವನ್ನಾಗಿ ಪರಿವರ್ತಿಸಿ ಹಿಂದೂ ಹೃದಯ ಸಾಮ್ರಾಟ ಎಂದು ಬಿರುದು ಪಡೆದ, ಕಾರ್ಪೊರೇಟರುಗಳಿಗೆ ಇಡೀ ಗುಜರಾತಿನ ನೆಲವನ್ನು ಧಾರೆ ಎರೆದು ಸುಧೀರ್ಘ ಹಿಡಿತ ಸಾಧಿಸಿದ ನರೇಂದ್ರ ಮೋದಿಯವರನ್ನು ಮುಂದಿನ ಭಾರತದ ನಾಯಕ ಎಂದು ಬಿಂಬಿಸಿ ಪ್ರಚಾರಂಭವನ್ನು ಬಹಳ ಶಿಸ್ತು ಬದ್ಧವಾಗಿ ನಡೆಸಿದರು. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಮಾಧ್ಯಮಗಳು ಅಧಿಕಾರಕ್ಕೆ ತರುವಲ್ಲಿ ವಹಿಸಿದ ಪಾತ್ರವನ್ನು ಮನಗಂಡ ಬಿಜೆಪಿ ಮಾಧ್ಯಮಗಳನ್ನು ತನ್ನ ಪರವಾಗಿ ಬಳಸಿಕೊಳ್ಳುವಲ್ಲಿ ಯೋಜನಾಬದ್ಧ ತಂತ್ರಗಾರಿಕೆಯನ್ನು ಸಾಧಿಸಿದವು ಚುನಾವಣಾರಂಭದಲ್ಲಿ ಭಾರತದ ಭರವಸೆಯ ನಾಯಕನ ಸ್ಥಾನದಲ್ಲಿ ಕೇಜ್ರಿವಾಲ್ ರಾರಾಜಿಸುತ್ತಿದ್ದರೆ ನಂತರದ ದಿನಗಳಲ್ಲಿ ಮೋದಿ ರಾರಾಜಿಸಿದರು ಮಾತ್ರವಲ್ಲ ಭಾರತದ ಯುವಜನರ ಬಾಳಿನ ಭರವಸೆಯಾಗಿ ಹೀರೋ ಆಗಿದ್ದ ಕೇಜ್ರಿವಾಲ್ ತಮ್ಮ ಮೊಂಡುತನದಿಂದ ಬಾಲಿಷ ರಾಜಕೀಯ ನಡೆ ನಡೆಸಿದ್ದರಿಂದ ಬ್ರಮನೀರಸಗೊಂಡ ಯುವಜನ, ಮಧ್ಯಮ ವರ್ಗ ಸಹಜವಾಗಿ ಮೋದಿಯಕಡೆ ವಾಲಿಸುವಲ್ಲಿ ಮಾಧ್ಯಮಗಳನ್ನು ನರೇಂದ್ರಮೋದಿ ಬಳಸಿಕೊಂಡರು. ಹಾಗೂ ಇಡೀ ಚುನಾವಣೆಯಲ್ಲಿ ಮೋದಿ ಕೇಂದ್ರಿತ ಚುನಾವಣೆಯಾಯಿತು ಮೋದಿಯ ಭಾವನಾತ್ಮಕ ಬಾಷಣದ ನಡುವೆ ರಾಹುಲ್ ಮತ್ತು ಇತರೆ ಪಕ್ಷದ ಮುಖಂಡರುಗಳು ಪೇಲವಾವಗಿ ಕಂಡು ಬಂದರು ಮಾತ್ರವಲ್ಲ ಮಾಧ್ಯಮಗಳು ಅವರನ್ನು ದೂರವೇ ಇರಿಸಿತು ಎಂದು ವಿವರಿಸಿದರು.

ವಿಜ್ಞಾನ ಲೇಖಕ ಕೆ.ಎಸ್.ರವಿಕುಮಾರ್ ಮಾತನಾಡಿ ಉತ್ತರ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಗೋಸುಂಬೆತನ, ಜಾತ್ಯಾತೀತ ನಿಲುವನ್ನು ಗಟ್ಟಿಗೊಳಿಸದ ಕಾರಣ ಬಿಜೆಪಿ ಕಡೆ ಧೃವೀಕರಿಸುವಲ್ಲಿ ಮೋದಿ ಅಲೆ ಸೃಷ್ಠಿಸಿತು ಆದರೆ .ಬಂಗಾಳ, ತಮಿಳುನಾಡು, ಒರಿಸ್ಸಾ ಹಾಗೂ ಕೇರಳಗಳಲ್ಲಿ ಮೋದಿ ಅಲೆ ನಡೆಯಲಿಲ್ಲ ಎಂದು ವಿವರಿಸಿದ ಅವರು ಭಾರತದ ಚುನಾವಣೆ ಯಾವಾಗಲೂ ಬರೀ ಭಾವನಾತ್ಮಕ ಭಾಷಣದ ನೆಲೆಗಟ್ಟನಲ್ಲೇ ನಡೆಯುವುದನ್ನು ನಾವು ನೋಡಿದ್ದೇವೆ ಹಾಗಾಗಿ ಬಾರಿ ಕಾಂಗ್ರೇಸ್ ಭಾವನಾತ್ಮಕ ನೆಲೆಗಟ್ಟನ್ನೂ ಕಳೆದು ಕೊಂಡು ನೈತಿಕ ದಿವಾಳಿಕೋರತನ ಅನುಭವಿಸಿ ಇಡೀ ಚುನಾವಣೆಯನ್ನು ಬಿಜೆಪಿಗೆ ಧಾರೆ ಎರೆಯಿತು ಮಾತ್ರವಲ್ಲ ಗೆಲವು ಸಾಧಿಸಿದ ಪಕ್ಷಗಳು ಸಹಜವಾಗಿ ಸರ್ವಾಧಿಕಾರಿ ಮನೋಧರ್ಮದವರು ಜನತೆ ಸರ್ವಾಧಿಕಾರಿ ಧೋರಣೆಗೆ ಬೆಂಬಲ ನೀಡಿದಂತಿದೆ ಎಂದರು.

      ಬಿಜಿವಿಎಸ್ ಅಹಮದ್ ಪ್ರತಿಕ್ರಯಿಸಿ ಬಾರಿಯ ಚುನಾವಣೆಯಲ್ಲಿ ಅಂಕೆ-ಸಂಖ್ಯೆಗಳ ರೂಪದಲ್ಲಿ ಬಿಜೆಪಿಗೆ ಬೃಹತ್ ಮುನ್ನಡೆ ಲಭಿಸಿದೆ ತಾವು ನಿಲ್ಲಿಸಿದ ೪೨೭ ಕ್ಷೇತ್ರಗಳಲ್ಲಿ ೨೮೨ ಕ್ಷೇತ್ರಗಳಲ್ಲಿ ಅಂದರೆ ೬೬% ಕ್ಷೇತ್ರಗಳಲ್ಲಿ ಜಯಗಳಿಸಿದೆ ಆದರೆ ತಾವು ಪಡೆದ ಒಟ್ಟು ಮತ ಕೇವಲ ೩೧ ಶೇಖಡ ಮಾತ್ರ ಇದು ವಾಜಪೇಯಿಯವರು ಗಳಿಸಿದ ಶೇಖಡವಾರು ಮತಗಳಿಗಿಂತ ಕಡಿಮೆ ಇದೊಂದು ವಿಪರ್ಯಾಸ ಎರಡನೆಯದಾಗಿ ಮತಗಳಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್‌ನ ನಂತರದ ಸ್ಥಾನ ಬಿ.ಎಸ್.ಪಿಯದು ಅದು . ಶೇಕಡ ಮತಗಳಿಸಿ ಮೂರನೆ ಸ್ಥಾನದಲ್ಲಿದೆ ಆದರೆ ಪ್ರತಿನಿಧಿಗಳ ಸಂಖ್ಯೆ ಸೊನ್ನೆ . ಶೇಖಡ ಮತಗಳಿಸಿ ೯ನೇ ಸ್ಥಾನದಲ್ಲಿರುವ ವೈ.ಎಸ್.ಆರ್. ಪಕ್ಷ ಸ್ಥಾನಗಳಿಸಿದೆ ಇದು ಜನಾಭೀಪ್ರಾಯವಲ್ಲ ಕೇವಲ ಅಂಕೆ-ಸಂಕೆಯ ಲೆಕ್ಕಾಚಾರದ ತಂತ್ರಗಾರಿಕೆ ತಂತ್ರಗಾರಿಕೆಯಲ್ಲಿ ನರೇಂದ್ರಮೋದಿ ನಿಪುಣರು ಅದನ್ನು ಸಾಧಿಸಿದ ಪರಿಣಾಮ ಫಲಿತಾಂಶ ಎಂದು ತಿಳಿಸಿದರು.

ಡಾ.ಜಯಚಂದ್ರಗುಪ್ತ ಮಾತನಾಡಿ ಪ್ರಾದೇಶಿಕ ಪಕ್ಷಗಳ ಆಷಾಡಭೂತಿತನ, ವಂಶಪಾರಂಪರ್ಯ ಆಡಳಿತ, ಬ್ರಷ್ಟಾಚಾರ, ಸ್ವಜನಪಕ್ಷಪಾvಗಳಿಂದ ಬೇಸತ್ತ ಜನ ಗುಜರಾತನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯುತ್ತಿದ್ದಾರೆ ಎಂದು ತಿಳಿದೊ ಅಥವ ಬ್ರಮೆಗೊಳಪಟ್ಟೋ ಅಥವ ಅಂದುಕೊಂಡೂ ಯುವಜನತೆ ಮತ್ತು ಜನ ನರೇಂದ್ರಮೋದಿಯನ್ನು ಪ್ರಧಾನಿ ಸ್ಥಾನನದಲ್ಲಿ ನೋಡಲು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಎಲ್ಲ ಪಕ್ಷಗನ್ನೂ ತಿರಸ್ಕರಿಸಿದ್ದಾರೆ ಎಂದರು.

ಲೇಖಕಿ ರೂಪ ಹಾಸನ ಮಾತನಾಡಿ ಗುಜರಾತಿನ ಕಾರ್ಪೊರೇಟ್ ಮಾದರಿಯ ಅಭಿವೃದ್ಧಿ ಹೊಸ ಮತದಾರರಾದ ೧೫ಕೋಟಿ ಯುವಜನರನ್ನು ನರೇಂದ್ರಮೋದಿಯವರ ಕಡೆ ಸೆಳೆಯಿತು ಹಾಗಾಗಿ ಇಡೀ ಚುನಾವಣೆ ಮೋದಿ ಮತ್ತು ರಾಹುಲ್ ಗಾಂಧಿ ನಡುವಣ ಚುನಾವಣೆ ಎಂದು ಪರೋಕ್ಷವಾಗಿ ಅಧ್ಯಕ್ಷ ಮಾದರಿಯ ಚುನಾವಣಾ ರೀತಿ ಮಾಧ್ಯಮಗಳು ಬಿಂಬಿಸಿದವು ಸಹಜವಾಗಿ ವ್ಯಕ್ತಿತ್ವದಲ್ಲಿ ಪ್ರಭಾವಶಾಲಿಯಾಗಿದ್ದ ಮೋದಿಯ ಯುವಜನರು ಮತಚಲಾಯಿಸಿದರು ಮಾತ್ರವಲ್ಲ ಸಾಮೂಹಿಕ ಮಾಧ್ಯಮಗಳ ಮೂಲಕವೂ ಪ್ರಚಾರ ಮಾಡಿದರು ಎಂದರು.

.ಸಾ. ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಜನಾರ್ಧನ ಮಾತನಾಡಿ ಚುನಾವಣೆಗೆ ಮೊದಲು ಗುಜರಾತಿನ ಅಭಿವೃದ್ಧಿ, ಕಾಂಗ್ರೇಸಿನ ದುರಾಡಳಿತ, ಬೆಲೆ ಏರಿಕೆಯಿಂದ ಬೇಸತ್ತ ಜನ ಹಿಂದೆಂದೂ ಯಾರಮೇಲೂ ಇಡದ ನಂಬಿಕೆಯನ್ನು ನರೇಂದ್ರ ಮೋದಿಯವರ ಮೇಲೆ ಕುರುಡಾಗಿ ನಂಬಿ ಗೆಲ್ಲಿಸಿದ್ದಾರೆ ಮುಂದಿನ ನಡಾವಳಿ ಬಡತನ ನಿವಾರಣೆ, ಉದ್ಯೋಗ ಸೃಷ್ಠಿ ಮೇಲೆ ಅಪಾರ ಭರವಸೆ ಹೊಂದಿದ್ದಾರೆ ಕಾದು ನೋಡಿದರೆ ಗೊತ್ತಾಗಲಿದೆ ಎಂದರು.

ಕಾರ್ಮಿಕ ಮುಖಂಡ ಧರ್ಮೇಶ್ ಪ್ರತಿಕ್ರಯಿಸಿ ಭಾರತದ ಚುನಾವಣಾ ಪದ್ಧತಿಯ ದೋಷ ಕೇವಲ ವ್ಯಕ್ತಿಗಳನ್ನು ಕೇಂದ್ರಿಕರಿಸಿ ನಡೆಸುವ ಪ್ರಜಾಪ್ರಭುತ್ವವನ್ನು ಕಳೆಗುಂದಿಸುವ ಕೆಲಸ. ಅಣ್ಣಾ ಹಜಾರೆ ಹೋರಾಟ ಕಾಂಗ್ರೇಸನ್ನು ಹೇಗೆ ಮೂಲೆಗುಂಪು ಮಾಡಿತೋ ಹಾಗೆಯೇ ದೆಹಲಿ ಚುನಾವಣೆ, ಕಾಂಗ್ರೇಸು ಮತ್ತು ಬಿಜೆಪಿಯನ್ನು ವಿಚಲಿತಗೊಳಿಸಿತು ಪರೋಕ್ಷವಾಗಿ ಬಿಜೆಪಿಯನ್ನು ಮಾಧ್ಯಮಗಳ ನಾಯಕನನ್ನಾಗಿ ಪರಿವರ್ತಿಸಲು ಸಹಾಯಕವಾಯಿತು ನಿಟ್ಟಿನಲ್ಲೇ ಮಹಾ ಚುನಾವಣೆ ಆರಂಭಗೊಂಡ ತಕ್ಷಣ ಮೋದಿ ಮತ್ತು ರಾಹುಲ್ ನಡುವೆ ಆಕರ್ಷಕ ಶಿರೋನಾಮೆ ನೀಡುವ ಮೂಲಕ ಜನರನ್ನು ಮರಳು ಮಾಡಲಾಯಿತು ಅಬ್ ಕಿ ಬಾರ್ ಮೋದಿ ಸರ್ಕಾರ್, ಒನ್ ಲೀಡರ್ ಒನ್ ನೇಷನ್, ಮೆರೆ ಸಾಥ್ ಸಬ್ ಕಿ ವಿಶ್ವಾಸ್ ೧೫ಕೋಟಿ ಯುವ ಮತದಾರರನ್ನು ಸೆಳೆಯಿತು ಆದರೆ ಮೂರರಲ್ಲೊಬ್ಬ ಮಾತ್ರ ಮೋದಿಯನ್ನು ಆಯ್ಕೆ ಮಾಡಿದ್ದಾನೆ, ೬೯ ಶೇಖಡ ಭಾರತದ ಜನತೆ ಬಾಜಪ ಮತ್ತು ಮೋದಿಯನ್ನು ತಿರಸ್ಕರಿಸಿದ್ದಾರೆ ಆದರೆ ಭಾರತದ ಚುನಾವಣ ಪದ್ಧತಿಯಂತೆ ಮಿಕ್ಕವರಿಗಿಂತ ಹೆಚ್ಚು ಸ್ಥಾನ ಗಳಿಸಿದ ಕಾರಣ ಅಧಿಕಾರ ನಡೆಸಲೇ ಬೇಕಿದೆ ಇದೇ ಪರ್ವ ಭಾರತದ ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಎಂದರು.

ರೈತ ಮುಖಂಡ ನವೀನ್ ಕುಮಾರ್ ಮಾತನಾಡಿ ಚುನಾವಣೆಯನ್ನು ಭಾವನಾತ್ಮಕವಾಗಿ ಗೆಲ್ಲಲು ಮೊದಲ ಕಾರಣ ಯು.ಪಿ.. ಹಗರಣ ಹಾಗೂ ದುರಾಡಳಿತ, ಮನಮೋಹನ ಸಿಂಗರನ್ನು ಬಫೂನ್ ರೀತಿಯಲ್ಲಿ ಬಿಂಬಿಸಿದ್ದು, ಧರ್ಮದ ಧೃವೀಕರಣ, ಹಿಂದಿನ ಗುಜರಾತ್ ಹತ್ಯಾಕಾಂಡದಿಂದ ಉದ್ಭವಿಸಿದ ಸರ್ವಾಧಿಕಾರಿ ನಾಯಕತ್ವದ ಮೇಲಿನ ಭರವಸೆ ಪ್ರಮಾಣದ ಗೆಲುವು ತಂದು ಕೊಟ್ಟಿದೆ ಎಂದರು.

ಸಾಹಿತಿ .ಹೊ.ನಾ, ಉಪನ್ಯಾಸಕ ಡಾ.ಯತೀಶ್ವರ್, ವಕೀಲ ಯೋಗೇಶ್, ಪ್ರಕಾಶ್, ಶಿವಣ್ಣ, ಕೃಷ್ಣೇಗೌಡ, ಜಯದೇವಪ್ಪ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು