Wednesday, 18 June 2014

world Earth day & Resourse center inaguration

 ಬಿಜಿವಿಎಸ್ ಸಂಪನ್ಮೂಲ ಕೇಂದ್ರ ಉದ್ಘಾಟನೆ ಹಾಗೂ ವಿಶ್ವ ಭೂದಿನಾಚರಣೆ.

ಜಾಗತೀಕರಣದ ಶಕೆಯಿಂದ ಮೂಲವಿಜ್ಞಾನದ ಕಲಿಕೆ ಮೂಲೆಗುಂಪಾಗಿ ಕೇವಲ ಅನ್ವಯಿಕ ವಿಜ್ಞಾನಕ್ಕೆ ಮಾತ್ರ ಕಲಿಕಾ ಮಹತ್ವ ನೀಡಲಾಗುತ್ತಿದೆ. ಹಾಗಾಗಿ ಕೇವಲ ಇಂಜಿನೀಯರು ಮತ್ತು ಡಾಕ್ಟರುಗಳೇ ದೇಶದಲ್ಲಿ ಉತ್ಪತ್ತಿಯಾಗಿ ನಿರುದ್ಯೋಗ ಕುಂಡದಲ್ಲಿ ಸೇರಿಸಲಾಗುತ್ತಿದೆ. ನೈಜ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಬ್ಯುದಯಕ್ಕೆ ಬೇಕಾದ ಸಂಶೋಧನೆ, ಮಾನವಿಕ ವಿಜ್ಞಾನ ಹಾಗೂ ಜ್ಞಾನ ಸಂಪನ್ಮೂಲ ಸೃಷ್ಠಿಯಾಗುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಧರ್ಮೆಶ್ ಅಭಿಪ್ರಾಯ ಪಟ್ಟರು. ಅವರು ಇತ್ತೀಚೆಗೆ ನಗರದ ಎಸ್.ಜಿ.ಆರ್.ಶಾಲಾವರಣದಲ್ಲಿನ ಬಿಜಿವಿಎಸ್ ಕಚೇರಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನ ಜಿಲ್ಲ್ಲಾ ಸಮಿತಿಯು ಆಯೋಜಿಸಿದ್ದ ಬಿಜಿವಿಎಸ್ ಸಂಪನ್ಮೂಲ ಕೇಂದ್ರ ಹಾಗೂ ವಿಶ್ವ ಭೂದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
   
ಹಾಸನ ಜಿಲ್ಲೆಯ ಬೆಳೆ ಹಾಗೂ ಮಳೆಯ ಪ್ರಮಾಣ, ಅಂತರ್ಜಲ, ಪರಿಸರ, ನೈರ್ಮಲ್ಯ ಹಾಗೂ ಶೈಕ್ಷಣಿಕ ಸ್ಥಿಗತಿಗಳ ಕುರಿತು ಸಂಪನ್ಮೂಲ ಕೇಂದ್ರ ಅಧ್ಯಯನ ಮಾಡಬೇಕು ಹಾಗೂ ಜಿಲ್ಲೆಯ ಸಮಗ್ರ ಸಂಪನ್ಮೂಲ ನಕಾಷೆಯನ್ನು ಸಿದ್ಧಪಡಿಸುವ ಯೋಜನೆ ರೂಪಿಸಬೇಕು ಹಾಗೂ ಹಾಸನ ಜಿಲ್ಲೆಯ ವಿದ್ಯಾರ್ಥಿಗಳ ಬೋಧನಾ ಸಾಮರ್ಥ್ಯಕ್ಕೆ ಒತ್ತಾಸೆಯಾಗಿ ಸಂಪನ್ಮೂಲ ಕೇಂದ್ರ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದರು.

    ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಲೆನಾಡು ಜನಪರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್ ಮಾತನಾಡಿ ಜಾಗತಿಕ ತಾಪಮಾನ ಏರಿಕೆಯಿಂದ ಭೂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ನಮ್ಮ ಅರಿವಿಗೆ ಬರುತ್ತಿದೆ. ಈ ಜಾಗತಿಕ ತಾಪಮಾನ ಹಾಸನ ಜಿಲ್ಲೆಯ ಕೃಷಿ, ಮಳೆ ಹಾಗೂ ಬದುಕಿನ ಮೇಲೆ ಬೀರಿರುವ ಪರಿಣಾಮದ ಕುರಿತು ಅಧ್ಯಯನ ನಡೆಯಬೇಕಿದೆ ಈ ಕಾರ್ಯವನ್ನು ಬಿಜಿವಿಎಸ್‌ನಂತಹ ಸಂಘಟನೆಗಳು ಹಾಸನದಲ್ಲಿರುವ ವಿವಿಧ ವಿಷಯ ಪರಿಣಿತರ ಸಹಕಾರದಿಂದ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಸಂಪನ್ಮೂಲ ಕೇಂದ್ರ ವಿವಿಧ ಜನಪರ ಸಂಘಟನೆಗಳ ವಿಶಾಲ ಸಂಪನ್ಮೂಲ ಕೇಂದ್ರವನ್ನು ಕಟ್ಟಬೇಕು ಎಂದು ತಿಳಿಸಿದ ಅವರು ಬಿಜಿವಿಎಸ್‌ನ ಮುತುವರ್ಜಿಯಿಂದ ಅಧ್ಯಯನ ವೃತ್ತ, ಅನಿಸಿಕೆ-ಅಭಿವ್ಯಕ್ತಿ, ಸಾಂಸ್ಕೃತಿಕ ಸಂವಹನದಂತಹ ನಿಗಧಿತ ಚಟುವಟಿಕೆಗಳು ನಿರಂತರವಾಗಿ ನಗರದಲ್ಲಿ ನಡೆಯುತ್ತಿದೆ ಈ ಚಟುವಟಿಕೆ ತಾಲೋಕು ಕೇಂದ್ರಗಳಿಗೂ ವಿಸ್ತರಿಸಬೇಕು ಆಗ ಜನರಲ್ಲಿ ವಿಮರ್ಷಾಗುಣ, ಮಾತನಾಡುವ ಕಲೆ ಹಾಗೂ ಸಂಪನ್ಮೂಲ ವ್ಯಕ್ತಿಗಳ ಸೃಷ್ಠಿಗೆ ಕಾರಣವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು ಮಾತನಾಡಿ. ಇಂದು ಜನರಿಗೆ ವಿಜ್ಞಾನದ ಆವಿಷ್ಕಾರಗಳು ಅವರ ಬದುಕನ್ನು ಸಾಗಿಸಲು ಅನಿವಾರ್ಯವಾಗಿ ಬೇಕಾಗಿದೆ ಆದರೆ ಈ ಆವಿಷ್ಕಾರಗಳು ದುಬಾರಿ ಹಣಕೊಟ್ಟು ಕೊಂಡುಕೊಂಡ ಫಾರ್ಮುಲ ಮತ್ತು ಪೇಟೆಂಟುಗಳಾಗಿವೆ ಇದು ಭಾರತದಂತಹ ದೇಶಕ್ಕೆ ಅತ್ಯಂತ ಕಷ್ಟದಾಯಕ ಹಾಗಾಗಿ ಭಾರತದಲ್ಲಿಯೇ ಆವಿಷ್ಕಾರಗಳು ಆಗಬೇಕೆಂದರೆ ವಿಜ್ಞಾನ ಇಲ್ಲಿಯೇ ಅರಳಬೇಕು ಹಾಗಾಗಲು ಮೊದಲು ಜ್ಞಾನ ಸಂಪಾದನೆ ನಂತರ ಆ ಜ್ಞಾನ ವೈಜ್ಞಾನಿಕ ಮನೋಧರ್ಮದಲ್ಲಿ ವಿಕಾಸಿಸಬೇಕು ಈ ಕೆಲಸವನ್ನು ನಮ್ಮ ಯಾವ ಶಿಕ್ಷಣ ಪ್ರಾಕಾರವೂ ಮಾಡುತ್ತಿಲ್ಲ ಹಾಗಾಗಿ ಸಂಪನ್ಮೂಲ ಕೇಂದ್ರ ಶಾಲಾಹಂತದಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸಲು ಪ್ರೇರೇಪಿಸುವ ಸಲುವಾಗಿ ಸಂಪನ್ಮೂಲ ಕೇಂದ್ರ ತರೆದಿದೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ವಿಜ್ಞಾನ ಸಂವಹನ ಜಿಲ್ಲಾ ಸಂಚಾಲಕ ಅಹಮದ್‌ಹಗರೆ ಮಾತನಾಡಿ ಈಗಾಗಲೆ ನಗರದಲ್ಲಿ ಬಾಲವಿಜ್ಞಾನಿ, ಅನಿಸಿಕೆ-ಅಭಿವ್ಯಕ್ತಿ, ಅಧ್ಯಯನವೃತ್ತ ಚಟುವಟಿಕೆಗಳು ಜ್ಞಾನಾಬ್ಯುದಯದ ನೆಲೆಗಟ್ಟಿನಲ್ಲಿ ನಡೆಯುತ್ತಿದೆ ಈ ಚಟುವಟಿಕೆಗಳ ಸಮಗ್ರ ರೂಪದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಜಿಲ್ಲೆಯಲ್ಲಿ ಸೃಷ್ಠಿಸಲು ಹಾಗೂ ಜಿಲ್ಲೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಮಾಹಿತಿಯನ್ನು ಹೊಸ ಪೀಳಿಗೆಗೆ ವರ್ಗಾಯಿಸಲು ಈ ಕೇಂದ್ರ ತೆರೆಯಲಾಗಿದೆ ಇದರ ಭಾಗವಾಗಿ ಭೂದಿನಾಚರಣೆಯ ಮಹತ್ವ ಹಾಗೂ ಭೂಗ್ರಹವನ್ನು ಜನಸಾಮಾನ್ಯರೂ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ತಿಳಿಸಿ ಭೂಮಿಯ ವಿಕಾಸ, ಬೆಳವಣಿಗೆ, ಕ್ರಿಯಾತ್ಮಕತೆಯನ್ನು ವಿವರಿಸುವ ವಸುಂಧರೆಯ ವೈಭವ ಕುರಿತು ಪಿ.ಪಿ.ಟಿ. ವಿವರಣೆ ನೀಡಿದರು.

ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಬಿಜಿವಿಎಸ್ ಜಿಲ್ಲಾ ಸಹಕಾರ್ಯದರ್ಶಿ ಮಮತಶಿವು ವಂದಿಸಿದರು.

Tuesday, 17 June 2014

APPLICATION FOR ATTENDING ENV W/S AT Hassan

ಮಾನ್ಯರೆ,
   ವಿಷಯ: ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಹವಾಮಾನ ಬದಲಾವಣೆ ಪರಿಸರ ಅಧ್ಯಯನ ಶಿಬಿರಕ್ಕೆ ಆಹ್ವಾನಿಸಿ

    ಗಣನೀಯ ಪ್ರಮಾಣದಲ್ಲಿ ಭೂಮಿಯ ತಾಪಮಾನ ಏರುತ್ತಿರುವುದರಿಂದ ಭೂಮಿಯ ಮೇಲೆ ಜೀವಿಗಳ ಅಸ್ತಿತ್ವದ ಮೇಲೆ ಕರಾಳ ಪರಿಸ್ಥಿತಿ ಸಂಭವಿಸುವ ಅಪಾಯದ ಕರೆಗಂಟೆ ದೊರೆತಿದೆ ಎಂಬುದು ಸಂಶೋಧನೆ ಹಾಗೂ ಅನುಭವಗಳಿಂದ ರುಜುವಾತಾಗಿದೆ. ಮಾನವ ಹಾಗೂ ಇತರೆ ಸಹ ಜೀವಿಗಳ ಅಸ್ತಿತ್ವದ ಪ್ರಶ್ನೆ ಮತ್ತು ಅನಿವಾರ್ಯತೆಯಿಂದ ಭೂತಾಪಮಾನದ ಮಿತಿಯನ್ನು ಕಾಯ್ದುಕೊಳ್ಳಲು ಜಾಗತಿಕ ಸಮುದಾಯ ಎಚ್ಚರಗೊಂಡಿರುವುದು ಸರಿ ಈ ಹಿನ್ನಲೆಯಲ್ಲಿ ಸಾಕಷ್ಟು ರಾಜತಾಂತ್ರಿಕ ಚರ್ಚೆ, ಸಲಹೆ ಹಾಗೂ ಮುಂದಿನ ಹೆಜ್ಜೆಗಳನ್ನು ಇಡಲು ಭಿನ್ನ ಭಿನ್ನ ಅಭಿಪ್ರಾಯಗಳು ಬಂದಿವೆ.
    ಈ ಹಿನ್ನಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ದೇಶಾದ್ಯಂತ ವಿವಿಧ ಸ್ಥರಗಳಲ್ಲಿ ಈ ಕುರಿತು ಸ್ಥಳಿಯ ಅಧ್ಯಯನ ಹಾಗೂ ಜನಜಾಗೃತಿ ಮೂಡಿಸಲು ಶ್ರಮಿಸುತ್ತಿದೆ, ಈ ಸಂಬಂಧ ಹಾಸನ ತಾಲೋಕು ಸಮಿತಿಯು ಪರಿಸರ ಕಾಳಜಿ ಉಳ್ಳ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಲೋಕಿನ ಯುವಜನರಿಗಾಗಿ ಹವಾಮಾನ ಬದಲಾವಣೆ ಮತ್ತು ಪರಿಸರ ಅಧ್ಯಯನ ಕುರಿತ ಕಾರ್ಯಾಗಾರವನ್ನು ದಿನಾಂಕ:೨೫/೦೬/೨೦೧೪ರ ಬೆಳಗ್ಗೆ ೯ಗಂಟೆಯಿಂದ ಸಂಜೆ ೫ ಗಂಟೆಯವರಗೆ ಹಾಸನದಲ್ಲಿ ಹಮ್ಮಿಕೊಂಡಿದೆ. ಸದರಿ ಕಾರ್ಯಾಗಾರದಲ್ಲಿ ಪರಿಸರ, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ, ಹವಾಮಾನ ಬದಲಾವಣೆ, ಶಕ್ತಿ ನಿರ್ವಹಣೆ, ಇಕೋ ಕ್ಲಬ್ ಚಟುವಟಿಕೆ ವಿಷಯಗಳನ್ನು ಪಿಪಿಟಿ, ಆಟ-ಹಾಡು ಹಾಗೂ ಸಂಶೋಧನಾ ಚಟುವಟಿಕೆಗಳ ರೂಪದಲ್ಲಿ ತರಬೇತಿ ನೀಡಲಾಗುವುದು.
 ಈ ಕಾರ್ಯಗಾರಕ್ಕೆ ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಆಸಕ್ತ ಯುವಜನ ಅರ್ಜಿಯನ್ನು ಭರ್ತಿಮಾಡಿ ದಿನಾಂಕ:೨೨/೦೬/೨೦೧೪ರೊಳಗೆ ಕಾರ್ಯದರ್ಶಿ ಭಾರತ ಜ್ಞಾನ ವಿಜ್ಞಾನ ಸಮಿತಿ,  ಎಸ್.ಜಿ.ಆರ್ ಶಾಲಾವರಣ ಹೊಸಲೈನ್ ರಸ್ತೆ, ಉತ್ತರ ಬಡಾವಣೆ, ಹಾಸನ-೫೭೩೨೦೧ ಅಂಚೆ, ಈಮೇಲ್ ಅಥವ ಮುದ್ದಾಂ ಕಳುಹಿಸಿಕೊಡಲು ಕೋರಿದೆ.
v    ಈ ಶಿಬಿರವು ಉಚಿತವಾಗಿದ್ದು ಪರಿಸರ ಆಸಕ್ತರಿಗೆ ಮಾತ್ರವಾಗಿರುತ್ತದೆ ಹಾಗೂ ಕೇವಲ ೪೦ಜನರಿಗೆಮಾತ್ರ ಸೀಮಿತಗೊಳಿಸಲಾಗಿದೆ.
v    ನಿಗದಿತ ಅರ್ಜಿನಮೂನೆ ಮೆಲ್ಕಾಣಿಸಿದ ವಿಳಾಸದಲ್ಲಿ ದೊರೆಯಲಿದೆ ಮತ್ತು
sciencemessenger.blogspot.in bgvshassandistrict.blogspot.in ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು ಅಥವ ಮಾದರಿಯಲ್ಲಿ ಭರ್ತಿಮಾಡಿ ಈ ಮೇಲ್ ಮೂಲಕವೂ ಸಲ್ಲಿಸಬಹುದು, ಈ ಮೇಲ್ ವಿಳಾಸ
bgvs.hsn@rediffmail.com

v    ಹೆಚ್ಚಿನ ವಿವರಕ್ಕಾಗಿ ಮೇಲಿನ ವಿಳಾಸ ಅಥವ ಈ ನಂಬರುಗಳಿಗೆ

9844097010, 9481492407, 9448346828    ಕರೆಮಾಡಿ ಪಡೆದುಕೊಳ್ಳಬಹುದು.


ಗುರಿಗಳು
೧.    ವಿದ್ಯಾರ್ಥಿ/ಯುವಜನರಲ್ಲಿ ಪರಿಸರದ ಬಗ್ಗೆ ಪ್ರೀತಿ ಬೆಳೆಸುವುದು ಹಾಗೂ ಪರಿಸರ ತಜ್ಞರನ್ನಾಗಿ ರೂಪಿಸುವುದು.
೨.    ಶಾಲೆಗಳ ವಿಜ್ಞಾನ ಹಾಗೂ ಪರಿಸರ ಸಂಘಗಳನ್ನು ಬಲಪಡಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವುದು, ಹಾಗೂ ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗುವ ವ್ಯತಿರಿಕ್ತ ಪರಿಣಾಮಗಳ ಮಾಹಿತಿ ಹಾಗೂ ಮಿತ ಬಳಕೆಯ ಕುರಿತು ಪ್ರಚಾರೋಂದಲನ ನಡೆಸುವುದು.
೩.    ಹವಾಮಾನ ಬದಲಾವಣೆಯಲ್ಲಿ ಪರಿಸರ ಮಲಿನತೆಯ ಪಾತ್ರ ಹಾಗೂ ಭಾರತ ಸರ್ಕಾರವು ಹಾಕಿಕೊಂಡಿರುವ ಯೋಜನೆಗಳ ಪರಿಚಯವನ್ನು ಜನತೆಗೆ ಮಾಡಿಸುವುದು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇಪಿಸುವುದು.
೪.    ಪಕ್ಷಿ ಹಾಗೂ ನಿಸರ್ಗ ವೀಕ್ಷಣಾ ಮತ್ತು ಅಧ್ಯಯನ ತಂಡದಲ್ಲಿ ಸಂಪನ್ಮೂಲವ್ಯಕ್ತಿ/ಅಧ್ಯಯನಕಾರರನ್ನಾಗಿ ರೂಪಿಸುವುದು.

                                                                   (ಜಯಪ್ರಕಾಶ) 
                                                                    ಕಾರ್ಯದರ್