Wednesday, 21 January 2015

bgvshassandistrict: ಭಾರತ ಜ್ಞಾನ ವಿಜ್ಞಾನ ಸಮಿತಿ, ಕೃಷ್ಣಾ ನಗರ ಘಟಕ, ಹಾಸನ ತಾಬ...

bgvshassandistrict: ಭಾರತ ಜ್ಞಾನ ವಿಜ್ಞಾನ ಸಮಿತಿ, ಕೃಷ್ಣಾ ನಗರ ಘಟಕ, ಹಾಸನ ತಾಬ...: ಭಾರತ ಜ್ಞಾನ ವಿಜ್ಞಾನ ಸಮಿತಿ, ಕೃಷ್ಣಾ ನಗರ ಘಟಕ, ಹಾಸನ ತಾ ಬಡತನ ನಿರ್ಮೂಲನ ಆಗದೆ ಸ್ವಚ್ಛ ಭಾರತ ಅಸಾಧ್ಯ: ಗುರುರಾಜ್ ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ವಸತಿ, ವಿದ್...
ಭಾರತ ಜ್ಞಾನ ವಿಜ್ಞಾನ ಸಮಿತಿ, ಕೃಷ್ಣಾ ನಗರ ಘಟಕ, ಹಾಸನ ತಾ
ಬಡತನ ನಿರ್ಮೂಲನ ಆಗದೆ ಸ್ವಚ್ಛ ಭಾರತ ಅಸಾಧ್ಯ: ಗುರುರಾಜ್
ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ವಸತಿ, ವಿದ್ಯೆ, ಉದ್ಯೋಗ ಹೇಗೋ ಹಾಗೆಯೆ ಉತ್ತಮ ಆರೋಗ್ಯ, ನೈರ್ಮಲ್ಯ ಹಾಗೂ ಆಹಾರಕೂಡ ಆಗಿದೆ ಆದರೆ ಭಾರತದ ಬಹುಸಂಖ್ಯಾತ ಜನ ಬಡತನ ರೇಖೆಗಿಂತ ಕೆಳಸ್ಥರದಲ್ಲಿ ಬದುಕುತ್ತಿದ್ದಾರೆ ಅವರ ಅನಕ್ಷರತೆ, ಅನಾರೋಗ್ಯ ಹಾಗೂ ಅನೈರ್ಮಲ್ಯವನ್ನು ನಿರ್ಮೂಲನಗೊಳಿಸಲು ಬಡತನÀ ನಿರ್ಮೂಲನೆ ಅಗತ್ಯವಾಗಿ ಆಗಬೇಕು ಹಾಗಾಗಿ ಬಡತನ ನಿರ್ಮೂಲನೆÀ ಆಗದೆ ಸ್ವಚ್ಛಭಾರತ ಅಸಾಧ್ಯ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಎಚ್.ಟಿ.ಗುರುರಾಜು ಅಭಿಪ್ರಾಯ ಪಟ್ಟಿದ್ದಾರೆ. ಅವರು ಇಂದು ಹಾಸನ ತಾಲೋಕಿನ ಕೃಷ್ಣಾನಗರದಲ್ಲಿ ಇಲ್ಲಿನ ಭಾರತ ಜ್ಞಾನ ವಿಜ್ಞಾನ ಸಮಿತಿ ಘಟಕವು ನಗರದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಪುಷ್ಕರಣಿ ರೋಟರಾಕ್ ಮಿಡ್‍ಟೌನಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಹಾಗೂ ನೈರ್ಮಲ್ಯ ವಿಚಾಋ ಸಂಕಿರಣ ಹಾಗೂ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಜವಾರಲಾಲ ನೆಹರು ಭಾರತ ಕಂಡ ಏಕೈಕ ವೈಜ್ಞಾನಿಕ ಮನೋಧರ್ಮ ಗಟ್ಟಿಯಾಗಿ ಹೊಂದಿದ್ದ ಪ್ರಧಾನಿ ಮಾತ್ರವಲ್ಲ ಮಕ್ಕಳನ್ನು ವೈಚಾರಿಕವಾಗಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಬೆಳೆಸಿದಾಗ ಮಾತ್ರ ಭವಿಷ್ಯದ ಭಾರತ ಕಟ್ಟಲು ಸಾಧ್ಯ ಎಂದು ನಂಬಿದ್ದರು ಹಾಗಾಗಿ ಮಕ್ಕಳ ಜೊತೆ ಹೆಚ್ಚಾಗಿ ಬೆರೆಯುತ್ತಿದ್ದರು ಎಂದರು.

ಉತ್ತಮ ಆರೋಗ್ಯಕ್ಕಾಗಿ ನಿತ್ಯ ಸ್ಚಛ್ಛತೆ ನಡೆಸಬೇಕು: ಡಾ.ದಿನೇಶ್

ಮಕ್ಕಳ ದಿನಾಚರಣೆಯಲ್ಲಿ ಆರೋಗ್ಯ ಹಾಗೂ ನೈರ್ಮಲ್ಯದ ಕುರಿತು ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ದಿನೇಶ್ ಮಾತನಾಡಿ ಮಕ್ಕಳು ಪ್ರತಿ ನಿತ್ಯ ಶುಚಿತ್ವದಿಂದ ಇದ್ದರೆ ಖಾಯಿಲೆ ಬರುವುದು ಕಡಿಮೆ ಹಾಗಾಗಿ ಮಕ್ಕಳು ಸೋಪು ಹಾಕಿ ಪ್ರತಿ ನಿತ್ಯ ಕೈ ತೊಳೆಯಬೇಕು, ದಿನಕ್ಕೆರೆಡು ಬಾರಿ ಹಲ್ಲುಜ್ಜಬೇಕು ಹಾಗೂ ಹಣ್ಣು ತರಕಾರಿ ಹೆಚ್ಚು ತಿನ್ನ ಬೇಕು ಪಾಣಿಪುರಿ, ಹೊಟೆಲ್ ತಿನಿಸುಗಳು ಅನಾರೋಗ್ಯವನ್ನು ಉಂಟು ಮಾಡುವುದು ಎಂದ ಅವರು ಪೋಷಕರು ಮಕ್ಕಳ ಆರೋಗ್ಯ ಸಂರಕ್ಷಣೆ ಮಾಡಲು ಬೀದಿಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಬಡಾವಣೆಯ ಯುವಕರು ಸ್ವಚ್ಚತಾ ಕಾರ್ಯಕ್ರಮವನ್ನು ಪ್ರತಿ ದಿನ ನಡೆಸುವ ಮೂಲಕ ಬೀದಿಗಳನ್ನು ಶುಚಿಯಾಗಿ ಇಟ್ಟುಕೊಳ್ಳ ಬೇಕು ಎಂದರು. ನಂತರ ದಿನೇಶ್ ಮತ್ತು ಮಣಿ ಆಸ್ಪತ್ರೆಯ ವೈದ್ಯರ ತಂಡ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಔಷದವನ್ನು ಉಚಿತವಾಗಿ ವಿತರಿಸಿದರು.

ದೇಹ ಹಾಗೂ ಮಾನಸಿಕ ನೈರ್ಮಲ್ಯ ಭೌತಿಕ ನೈರ್ಮಲ್ಯಕ್ಕಿಂತ ಪ್ರಮುಖ: ಗೋಪಾಲಕೃಷ್ಣ

ನರೇಂದ್ರ ಮೋದಿಯ ಸ್ವಚ್ಛತಾ ಆಂದೋಲನ ಕೇವಲ ಬೀದಿ ಗುಡಿಸುವುದರಿಂದ ಯಶಕಾಣುವುದಿಲ್ಲ ನಿಜವಾಗಿಯೂ ಸ್ವಚ್ಚತಾ ಆಂದೋಲನದ ನಿಜವಾಧ ರೂವಾರಿಗಳು ಪೌರಕಾರ್ಮಿಕರು ಆ ಕಾರ್ಮಿಕರು ಕೆಲಸದ ಭದ್ರತೆ ಇಲ್ಲದೆ, ಸೂಕ್ತ ಸಂಬಳವಿಲ್ಲದೆ ಕಡೆಗಣಿಸಲ್ಪಟ್ಟಿದ್ದಾರೆ ಇವರ ಕುರಿತು ಒಂದು ಸೊಲ್ಲೂ ಎತ್ತದ ಮೋದಿಯ ಸ್ವಚ್ಛತಾ ಆಂದೋಲನ ಒಂದು ಘೋಷಣೆ ಮಾತ್ರ ಎಂದ ಅವರು ಗಾಂಧಿ ಮಾನವನ ಮಾನಸಿಕ ನೈರ್ಮಲ್ಯ ಮೊದಲು ಆಗಬೇಕು ನಂತರ ಏನಿದ್ದರೂ ಭೌತಿಕ ನೈರ್ಮಲ್ಯ ಸಾಧ್ಯ ಎಂದು ಅವರು ಜನತೆಯಲ್ಲಿ ಬ್ರಾತೃತ್ವ, ಮಾನವೀಯತೆ, ಸಹೋದರತೆ, ಜಾತ್ಯಾತೀತತೆ ಬೆಳೆಸಲು ತಮ್ಮ ಇಡೀ ಜೀವಮಾನ ಮುಡಿಪಾಗಿದ್ದರು ಎಂದು ತಿಳಿಸಿ ಗಾಂದಿಯ ಸ್ವಚ್ಚತಾ ಆಂದೋಲನಕ್ಕೂ ಮೋದಿಯ ಸ್ವಚ್ಚತಾ ಆಂದೋಲನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಬದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ವಿವಿಧ ಸ್ಪಧೆಗಳಲ್ಲಿ ಭಾಗವಹಿಸಿ ಬಹುಮಾಣ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಅತಿಥಿಗಳು ವಿತರಿಸಿದರು. ನಂತರ ಪುಷ್ಕರಣಿ ರೋಟರಾಕ್ ಮಿಡ್‍ಟೌನಗಳ ಸಹಯೋಗದಲಿ ನಾಗರೀಕರು ಬಡಾವಣೆಯನ್ನು ಸ್ವಚ್ಛಗೊಳಿಸಿದರು.

ಬಿಜಿವಿಎಸ್ ಕೃಷ್ಣ ನಗರದ ಉಪಾದ್ಯಕ್ಷ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು ಬಿಜಿವಿಎಸ್ ತಾಲೋಕು ಅಧ್ಯಕ್ಷೆ ಮಮತಶಿವು, ಗ್ರಾ.ಪಂ.ಸದಸ್ಯೆ ಶಶಿಕಲ, ಡಿವೈಎಫೈ ಜಿಲ್ಲಾ ಕಾರ್ಯದರ್ಶಿ ಪೃಥ್ವಿ, ರೋಟರಿ ಮಿಡ್ಟೌನ್‍ನ ಪ್ರತಿನಿಧಿಗಳು ಉಪಸ್ತಿತರಿದ್ದರು, ಬಿಜಿವಿಎಸ್ ಕೃಷ್ಣಾ ನಗರ ಘಟಕ ಕಾರ್ಯದರ್ಶಿ ಕಿರಣ್ ಪ್ರಾಸ್ತವಿಕವಾಗಿ ಮಾತನಾಡಿದರು. ಕವಿತ ಸ್ವಾಗತಿಸಿದರು.
                                                        ಕಿರಣ್
                                                     ಘಟಕ ಕಾರ್ಯದರ್ಶಿ  
























              

Tuesday, 20 January 2015

ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲೆ
ದಿನಾಂಕ: 19-01-2014
ಮೂರು ದಿನಗಳ ವಿಜ್ಞಾನ ಕಾರ್ಯಕರ್ತರ ಜಿಲ್ಲಾ ಮಟ್ಟದ ಕಾರ್ಯಾಗಾರದ ವರದಿ




ಸತ್ಯೇಂದ್ರನಾಥ ಬೋಸ್ ಜೆ.ಡಿ.ಬರ್ನಾಲ್, ಜೆ.ಎಚ್.ಹಾರ್ಡ್ಲಿ ಭಾರತದಲ್ಲಿ ಸ್ವಾತಂತ್ರ್ಯಾನಂತರ ವಿಜ್ಞಾನದ ಅಭಿವೃದ್ಧಿ ಮಾನವ ಆಭಿವೃದ್ಧಿಯ ನೆಲೆಗಟ್ಟಿನಲ್ಲಿ ಬೆಳೆಯಬೇಕಾದರೆ ಭಾರತದ ಜನಸಮೂಹದ ವಿಜ್ಞಾನವನು ಜನಪ್ರಿಯಗೊಳಿಸಬೇಕು ಮತ್ತು ಈ ನಿಟ್ಟಿನಲ್ಲಿ ಜನವಿಜ್ಞಾನ ಚಳುವಳಿಯನ್ನು ಕಟ್ಟಬೇಕು ಎಂದು ಮನಗಂಡು ಭಾರತದ ಉದ್ದಗಲಕ್ಕೂ ವಿಜ್ಞಾನ ಪ್ರಸಾರ ಮಾಡುವ ಸಂಘಟನೆಗಳನ್ನು, ಶಿಕ್ಷಣ ಕೇಂದ್ರಗಳನ್ನು ಅಂದಿನ ಪ್ರಧಾನಿ ನೆಹರುರವರ ಸಹಕಾರದಿಂದ ಭಾರತ ಸರ್ಕಾರದ ಜೊತೆ ನಿರ್ಮಿಸಲಾಯಿತು. 1984ರ ಡಿಸೆಂಬರ್3ರಂದು ಸಂಭವಿಸಿದ ಭೂಪಾಲ್ ಅನಿಲ ದುರಂತದ ಕಾರಣ ಮತ್ತು ಅದರ ನಂತರದ ಪರಿಣಾಗಳನ್ನು ವೈಜÐನಿಕ ನೆಲೆಗಟ್ಟಿನಲ್ಲಿ ಜನತೆಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಈ ಎಲ್ಲಾ ಸಂಘಟನೆಗಳು ಜನ ಜ್ಞಾನ ವಿಜ್ಞಾನ ಜಾಥಾವನ್ನು ಕೇರಳದ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು ಅದರ ಫಲಿತಾಂಶ ಭಾರತದಲ್ಲಿ ಸಾಕ್ಷರತಾ ಆಂದೋಲನವನ್ನು ಹುಟ್ಟಿ ಹಾಕಲೇ ಬೇಕಾದಂತಹ ಅನಿವಾರ್ಯತೆ ಭಾರತ ಜ್ಞಾನ ವಿಜ್ಞಾನ ಸಮಿತಿಗೆ ಜನ್ಮ ನೀಡಲಾಯಿತು ಎಂದು ಅಖಿ¯ಭಾರತ ಜನವಿಜ್ಞಾನ ಚಳುವಳಿಗಳ ಜಾಲಾದ  ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಟಿ.ಗಂಗಾಧರನ್ ಹೇಳಿದರು ಅವರು ಇತ್ತೀಚೆಗೆ ಆಲೂರು ತಾಲೋಕು ತಾಳೂರು ಗ್ರಾಮದ ಪ್ರವಾಸಿ ಮಂದಿರದಲ್ಲಿ ನಡೆದ ವಿಜ್ಞಾನ ಕಾರ್ಯಕರ್ತರ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಭಾರತದ ಸಾಕ್ಷರ ಮಿಷನ್ ಜೊತೆ ಸಾಕ್ಷರತಾ ಆಂದೋಲನದಲ್ಲಿ ಪಾಲ್ಗೊಂಡ ಬಿಜಿವಿಎಸ್ ಪ್ರಾಥಮಿಕ ಶಿಕ್ಷಣ, ಜನಾರೋಗ್ಯ, ಮಹಿಳಾ ಸಶಕ್ತತೆಯ ಕಾರ್ಯಕ್ರಮಗಳನ್ನು ಜನತೆಯೊಂದಿಗೆ ಮತ್ತು ಶಿಕ್ಷಣ ಸಂಸ್ಥಗಳೊಂದಿಗೆ ಕೊಂಡೊಯ್ಯಲು ಯುವಜನರನ್ನು ಪ್ರೇರೇಪಿಸಬೇಕು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದ ಅವರು ಶಿಕ್ಷಕರು ಈ ಸಮುದಾಯದ ಸಂವಾಹಕರಾಗಬೇಕು ಈ ನಿಟ್ಟಿನಲ್ಲಿ ಬಿಜಿವಿಎಸ್ ಮಧ್ಯ ಪ್ರವೇಶಿಸಬೇಕು ಎಂದರು.
ಶಿಬಿರವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಸದಸ್ಯ ಜಿ.ಕೆ.ವೆಂಕಟೇಶ ಮಾತನಾಡಿ ಶಿಕ್ಷಣದಲ್ಲಿ ಅತಿ ಹೆಚ್ಚು ಮೌಢ್ಯ ತುಂಬಿರುವುದರಿಂದ ಅಲ್ಲಿಂದಲೇ ವಿಜ್ಞಾನದ ತಿಳುವಳಿಕೆ ಬೆಳೆಯಬೇಕು ತಮ್ಮ ಬೋದನೆಯಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಲಲು ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಘವಹಿಸಿದ್ದ ತಾಲೂರು ಪ್ರಾಥಮಿಶಾಲಾ ಮುಖ್ಯ ಶಿಕ್ಷಕ ಪರಾಶರಮೂರ್ತಿ ಮಾತನಾಡಿ ಇಂದು ಶಿಕ್ಷಣ, ಜನತೆ ಹಾಗೂ ಸಂಘಟನೆಗಳು ಏಕಮುಖಿಯಾಗಿ ಚಿಂತಿಸಬೇಕಿದೆ. ಭಾರತ ಅತಿ ಹೆಚ್ಚು ಮೌಢ್ಯದತ್ತ ಮನೆ ಮಾಡುತ್ತಾ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿದೆ ವೈಜ್ಞಾನಿಕ ಮನೋಧರ್ಮ ಮಾತ್ರವೇ ದೇಶವನ್ನು ಮುನ್ನಡೆಸಬಲ್ಲದು ಹಾಗಾಗಿ ಜನತೆಯಲ್ಲಿ ವೈಚಾಋಇಕತೆ ಮತ್ತು ವೈಜ್ಞಾನಿಕತೆ ಬಿತ್ತುವಲ್ಲಿ ಬಿಜಿವಿಎಸ್ ಕಳೆದ 25ವರ್ಷಗಳಿಂದಲೂ ಶ್ರಮಿಸುತ್ತಿರುವುದು ಸ್ವಾಗತಾರ್ಹ ಹಳ್ಳ ಹಳ್ಳಿಗಳಲ್ಲಿ ಯುವಜನತೆಯನ್ನು ಇದರಲ್ಲಿ ಪಾಲ್ಗೊಳಿಸಬೇಕು ಎಂದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಆಲೂರು ತಾಲೋಕು ಅಧ್ಯಕ್ಷ ಆರ್.ಶಿವರಾಂ ಮಾತನಾಡಿ ಬಿಜಿವಿಎಸ್ ಕಳೆದ 25ವರ್ಷಗಳಿಂದಲೂ ಜನತೆಯಲ್ಲಿ ವೈಜ್ಞಾನಿಕ ಮನೋಧರ್ಮ ಬಿತ್ತುವಲ್ಲಿ ನಿರತವಾಗಿದ್ದು ವಿಶೇಷವಾಗಿ ಶಿಕ್ಷಣ ರಂಗದಲ್ಲಿ ಹಲವಾರು ನೈಜ ಪ್ರಯೋಗಗಳನ್ನು ನಡೆಸಿದೆ ನಲಿ-ಕಲಿ, ದೇಶ ತಿಳಿಯೋಣ-ದೇಶ ಬದಲಿಸೋಣ, ಖಗೋಳಯಾನ, ಪರಿಸರ ಪಯಣದಂತಹ ಚಟುವಟಿಕೆಗಳ ಮೂಲಕ ಶಿಕ್ಷಕರ ಬೋಧನಾ ಸಾಮಥ್ರ್ಯ ವೃದ್ದಿಸುವಲ್ಲಿ ಸ್ವಯಂ ಸೇವಾ ನೆಲೆಯಲ್ಲಿ ನಿರಂತರವಾಗ ತರಬೇತಿ ನೀಡು ಮೂಲಕ ಶಿಕ್ಷಣ ಇಲಾಖೆಯ ಅಂಗಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಮಾರಂಭದಲ್ಲಿ ಬಿಜಿವಿಎಸ್ ಜಿಲ್ಲಾಧ್ಯಕ್ಷ ಗುರುರಾಜು, ಕಾರ್ಯದರ್ಶಿ ಗೋಪಾಲಕೃಷ್ಣ, ಆಲೂರು ತಾಲೋಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವರದರಾಜು, ಆಲೂರು ತಾಲೋಕು ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಮೋಹನ ಕುಮಾರ್, ಜಿಲ್ಲಾ ಜಂಟಿ ಕಾರ್ಯದರ್ಶಿ ಅಣ್ಣಪ್ಪ.ಸಿ.ಎಸ್, ತಾಲೋಕು ಪ್ರಾಥಮಿಕ ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಮೀನಾಕ್ಷಿ, ಮೈಮುನ, ಆಂಜನೇಯಸ್ವಾಮಿ ದೇವಸ್ತಾನ ಟ್ರಸ್ಟಿನ ಟ್ರಸ್ಟಿ ಲಕ್ಕೇಗೌಡ ಉಪಸ್ಥಿತರಿದ್ದರು.
ಆಲೂರು ತಾಲೋಕು ಬಿಜಿವಿಎಸ್ ಕಾರ್ಯಕಾರಿ ಮಂಡಳಿ ಸದಸ್ಯೆ ರೇಷ್ಮ ಕಾರ್ಯಕ್ರಮ ನಿರೂಪಿಸಿದರು, ತಾಲೋಕು ಬಿಜಿವಿಎಸ್ ಕಾರ್ಯದರ್ಶಿ ಸ್ವಾಗತಿಸಿ ಕಡೆಯಲ್ಲಿ ತಾಲೋಕು ಬಿಜಿವಿಎಸ್ ಸದಸ್ಯ ಕೊಟ್ರೇಶ್ ಉಪಾರ್ ವಂದಿಸಿದರು.

ನಂತರ ಅಖಿಲಾ ಭಾರತ ಜನವಿಜ್ಞಾನ ಚಳುವಳಿಗಳ ಜಾಲಾದ ರಾಷ್ಟ್ರ ಪ್ರಧಾನ ಕಾರ್ಯದರ್ಶಿ ಟಿ.ಗಂಗಾಧರನ್ ಜನವಿಜ್ಞಾನ ಚಳುವಳಿಗಳ ಇತಿಹಾಸ ಕುರಿತು ಮಾತನಾಡಿ ಶಿಕ್ಷಕರು, ಪ್ರಗತಿಪರ ವಿಜ್ಞಾನಿಗಳು ಸಾಹಿತಿಗಳು ಭಾರತವನ್ನು ವೈಜ್ಞಾನಿಕವಾಗಿ ಗಟ್ಟಿಗೊಳಿಸಲು ವಿಜ್ಞಾನ ಸಂಘಟನೆಗಳನ್ನು ಹುಟ್ಟು ಹಾಕಲಾಯಿತು ಆ ಎಲ್ಲಾ ಸಂಘಟನೆಗಳ ಏಕಿಕೃತ ಜಾಲವೇ ಜನವಿಜ್ಞಾನ ಚಳುವಳಿಗಳ ಜಾಲ ಇವುಗಳ ಗುರಿ ಶಿಕ್ಷಣ, ಪರಿಸರ, ಅಭಿವೃದ್ಧಿಯನ್ನು ಜನತೆಯ ಜೊತೆ ಕೊಂಡೊಯ್ಯುವುದು ಈ ನಿಟ್ಟಿನಲ್ಲಿ ಜನತೆಗಾಗಿ ವಿಜ್ಞಾನ, ಪ್ರಗತಿಗಾಗಿ ವಿಜ್ಞಾನ ಹಾಗೂ ಶಾಂತಿಗಾಗಿ ವಿಜ್ಞಾನದ ಘೋಷಣೆ ಇಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದರು.
ಮಧ್ಯಾಹ್ನದ ಅವಧಿಯಲ್ಲಿ ವೈಜ್ಞಾನಿಕ ಮನೋಧರ್ಮದ ತಿರುಳು ಹಾಗೂ ಅದನ್ನು ಹರಡಲು ಇರುವ ಸವಾಲುಗಳು ಕುರಿತು ಸಮಾಜ ವಿಜ್ಞಾನಿ ಜಿ.ಎನ್.ನಾಗರಾಜ್ ಪಾಠಮಾಡಿ ಭಾರದೊಳಗಿನ ಪ್ರತಿಯೊಂದು ಆಚರಣೆಯೊಳಗೆ ವಿಜ್ಞಾನ ಇದೆ ಆದರೆ ಕಾಳದ ಸವೆತದೊಂದಿಗೆ ಅದರೋಮದಿಗೆ ವ್ಯಾಪಾರಿ ಹಿನ್ನಲೆಯಲ್ಲಿ ಮೌಢ್ಯ ಮತ್ತು ಕಂದಾಚಾರ ತುಂಬಿದೆ ಹಾಗಾಗಿ ಪರಂಪಾರನುಗತವಾಗಿ ನಡೆದುಕೊಂಡು ಬರುತ್ತಿರುವ ಆಚರಣೆಗಳ ಹಿನ್ನಲೆ ತಿಳಿಯಲು ಪ್ರಯತ್ನಿಸುವುದೇ ವೈಜ್ಞಾನಿಕ ಮನೋಧರ್ಮದ ತಿರುಳು ಅದಕ್ಕಾಗಿ ಪ್ರಶ್ನೆಗಳನ್ನ ನಿರಂತರ ಹಾಕಿ ಕೋಮಡು ಸತ್ಯದ ಹುಡುಕಾಟ ನಡೆಸ ಬೇಕು ಅದಕ್ಕಾಗಿ ಉತ್ತಮ ಓದು, ವಿಮರ್ಷೆ, ನಡೆಸುವ ಮೂಲಕ ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳಬಹುದು ಎಂದು ವಿವರಿಸಿ ಸಂಕ್ರಾಂತಿ, ಯುಗಾಧಿ, ಯಲ್ಲಮ್ಮ, ರೇಣುಕೆ, ಗಣೇಶ ಕಥಾನಕದ ಹಿಂದಿರುವ ಐತಿಹಾಸಿಕ ಕಾರಂಗಳನ್ನು ವಿವರಿಸಿದರು.
ಸಂಜೆ ಪವಾಡ ಭಂಜಕ ಶ್ರೀನಿವಾಸ ನಟೇಕರ್ ಪವಾಡ ಮತ್ತು ವೈಜ್ಞಾನಿಕ ಸತ್ಯದ ವಿವರ ತಿಳಿಸಿ ಪವಾಡ ರಹಸ್ಯ ಬಯಲು ಮಾಡಿ ಭಾರತ ಮತ್ತು ಜಗತ್ತಿನಾದ್ಯಂತ ಪವಾಡ ಪುರುಷರು ಜನತೆಗೆ ಮಾಡುವ ಮೋಸವನ್ನು ವಿಡಿಯೋ ತುಣುಕಗಳ ಮೂಲಕ ತೋರಿಸಿ ಪವಾಡ ಪುರುಷರು ತಮ್ಮ ಕೈಯಿಂದ ಬೂದಿ, ವಾಚು, ಉಂಗುರ ದಂತಹ ಮುಷ್ಠಿಯೊಳಗೆ ಹಿಡಿದುಕೊಳ್ಳುವ ವಸ್ತುಗಳನ್ನಷ್ಟೇ ಕೊಡಬಲ್ಲರು ತೆಂಗಿನ ಕಾಯಿ, ಕುಂಬಳ ಕಾಯಿ ಎಂದೂ ಕೊಡರು ಎಂಬುದನ್ನು ಮನಗಾಣ ಬೇಕು ಎಂದರು.
ನಂತರ ಪಠ್ಯ ಪುಸ್ತಕದೊಳಗಿರುವ ತಪ್ಪು ಮಾಹಿತಿ, ಅವೈಜ್ಞಾನಿಕ ನಿರೂಪಣೆ ಹಾಗೂ ಬೋದಕರ ಬೋದನಾ ಸಾಮಥ್ರ್ಯವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ಚರ್ಚೆಯನ್ನು ನಡೆಸಲಾಯಿತು.

ಎರಡನೇ ದಿನ ಬಿಜಿವಿಎಸ್ ರಾಜ್ಯ ಉಪಾಧ್ಯಕ್ಷ ಎಫ್.ಸಿ.ಚೇಗರಡ್ಡಿ ಬಿಜಿವಿಎಸ್ ಸಂಘಟನೆ ಮತ್ತು ಸವಾಲುಗಳ ಕುರಿತು ಪಾಠ ಮಾಡಿ ಬಿಜಿವಿಎಸ್ ಇಂದಿನ ಸಂದರ್ಭದಲ್ಲಿ ಬಲಗೊಳ್ಳುವುದು ಅತ್ಯಂತ ಜರೂರು ಭಾರತವನ್ನು ಜಾತಿ ಸಂಘಟನೆಗಳು, ಭಾಷಾ ಸಂಕುಚಿತ ಸಂಘಟನೆಗಳು ಪ್ರಜಾಸತ್ತಾತ್ಮಕವಾಗಿ ಬಲಗೊಳ್ಳಲು ಅಡ್ಡಿಯಾಗುತ್ತಿವೆ ದೇಶವನ್ನು ಭಾಷೆ, ಜಾತಿ ಮನೋಧರ್ಮದಿಂದ ಹೊರತರಲು ಧರ್ಮ ನಿರಪೇಕ್ಷವಾಗಿ ಜನರನ್ನು ಸಂಘಟಿಸಬೇಕು ಹಾಗಾಗಿ ಬಿಜಿವಿಎಸ್ ಜನಮಾನಸದೊಳಕ್ಕೆ ತೆಗೆದುಕೋಂಡು ಹೋಗಲು ಸುಶಿಕ್ಷಿತ ಜನತೆ ಹಾಗೂ ಶಿಕ್ಷಕರು ಪ್ರಯತ್ನಿಸಬೇಕು ಎಂದು ತಿಳಿಸಿ ಬಿಜಿವಿಎಸ್ ಸಿದ್ಧಾಂತ, ಸಂಘಟನಾ ತತ್ವ, ಸಂವಿಧಾನ ಹಾಗೂ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು.
ಖಗೋಳ ಮತ್ತು ಜೋತಿಷ್ಯದ ಕುರಿತು ಪಾಠಮಾಡಿದ ವಿಜ್ಞಾನ ಲೇಖಕ ಕೆ.ಎಸ್.ರವಿಕುಮಾರ್ ಖಗೋಳ ನಿರಂತರ ಸಂಶೋಧನೆಯ ವಿಜ್ಞಾನ ಜ್ಯೋತಿಷ್ಯ ಮನುಷ್ಯರನ್ನು ಮೋಸ ಮಾಡುವ ವ್ಯಾಪಾರದ ದಂಧೆ ಅದರಲ್ಲಿ ಸತ್ಯವಿಲ್ಲ, ಆಕಾಶದ ಗ್ರಹ-ತಾರೆಗಳಿಗೂ ಮಾನವನ ಗುಣಾವಗುಣಗಳಿಗೂ ಯಾವ ಸಂಬಂಧವೂ ಇಲ್ಲ ಎಂದು ತಿಳಿಸಿ ಟಿ.ವಿ.ಯಲ್ಲಿ ಬರುವ ಜೋತಿಷ್ಯ ಸುಳ್ಳಿನದು ಆ ಜೋತಿಷಿಗಳು ಲಕ್ಷಾಂತರ ಹಣ ಕೊಟ್ಟು ಟಿವಿಯಲ್ಲಿ ಸ್ಲಾಟ್ ಪಡೆದು ಖೋಟಾ ದೂರವಾಣಿ ಕರೆ ಮಾಡಿ ಜನರಿಗೆ ಮಂಕುಬೂದಿ ಎರೆಚುತ್ತಾರೆ ನಿಜವಾಗಿಯೂ ಇವರೇ ಭಾರತದ ಭಯೋತ್ಪಾದಕರು ಎಂದು ತಿಳಿಸಿದರು.
ನಂತರ ಬಿಜಿವಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಅಹಮದ್ ಖಗೋಳ ಮತ್ತು ಜ್ಯೋತಿಷ್ಯಗಳ ನಡುವಿನ ವ್ಯತ್ಯಾಸ ತಿಳಿಸುವ ಪಿಪಿಟಿ ವಿವರಣೆ ಸಾರ್ವಜನಿಕರಿಗೆ ನೀಡಿದರು ಹಾಗೂ ಭೂಮಿ ಉಗಮದ ಡಾಕ್ಯುಮೆಂಟರಿ ತೋರಿಸಲಾಯಿತು ನಂತರ ಆಕಾಶ ವೀಕ್ಷಣೆ ನಡೆಸಲಾಯಿತು.
ಮೂರನೆ ದಿನ ಇತಿಹಾಸದಲ್ಲಿ ವಿಜ್ಞಾನ, ನಾಯಕತ್ವ ನಿರ್ವಹಣೆ, ಸಂಘಟನಾ ಕಾರ್ಯತಂತ್ರ, ಕುರಿತು ಅಹಮದ್ ಹಾಗೂ ಕ್ರಿಯಾ ಯೋಜನೆ ಹೇಗೆ ಮಾಡಬೇಕು ಎನ್ನುವ ತರಗತಿಗಳನ್ನು ಕಾರ್ಯದರ್ಶಿ ಬಿಜಿ.ಗೋಪಾಲಕೃಷ್ಣ ನಡೆಸಿದರು.
ಪ್ರತಿ ತರಗತಿಗಳ ಕುರಿತು ಗುಂಪು ಚರ್ಚೆ ನಡೆಸಲಾಯಿತು. ಜಿಲ್ಲಾ ಬಿಜಿವಿಎಸ್ ಅಧ್ಯಕ್ಷ ಗುರುರಾಜು, ಎಲ್ಲಾ ತರಗತಿಗಳ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು.
ಬಿಜಿವಿಎಸ್ ಜಿಲ್ಲಾ ಜಂಟಿ ಕಾರ್ಯದರ್ಶಿ ಮತ್ತು ಶಿಬಿರದ ಸಂಚಾಲಕ ಸಿ.ಎಸ್.ಅಣ್ಣಪ್ಪ ಸಮಾರೋಪವಾಗಿ ಮಾತನಾಡಿ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಬಲಪಡಿಸಲು ಶಿಕ್ಷಣ ಸಾರ್ವತ್ರೀಕರಣವಾಗಬೇಕು ಈ ನಿಟ್ಟಿನಲ್ಲಿ ಜನಾಂದೋಲನವಾಗಲೇ ಬೇಕಿದೆ ಹಾಗಾಗಿ ಸಂವಿಧಾನದ ಕೊಡಮಾಡಿದ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಹಾಗೂ ಮನೋರಂಜನೆ ಸಾರ್ವತ್ರಿಕರಣಕ್ಕೆ ಹೋರಾಡಲು ಜನರನ್ನು ಅಣಿನೆರಸಬೇಕಿದೆ ಗಲ್ಲಿ ಗಲ್ಲಿಗಳಲ್ಲಿ, ಹಳ್ಳಿಗಳಲ್ಲಿ ಜನರ ಸಮಸ್ಯೆಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇóಷಿಸುವ ಜ್ಞಾನ ತುಂಬುವಮೂಲಕ ಈ ಆಂದೋಲನಕ್ಕೆ ಸಜ್ಜುಗೊಳಿಸುವುದು ನಮ್ಮ ಬದ್ಧತೆಯಾಗಿದೆ ಎಂದರು.
ಬಿಜಿವಿಎಸ್ ಜಿಲ್ಲಾಧ್ಯಕ್ಷ ಸಮಾರೋಪ ಸಮಾರಂಭದ ಅಧ್ಯಕ್ತೆ ವಹಿಸಿ ಮಾತನಾಡಿ ಕಾರ್ಯಕರ್ತರ ಶಿಬಿರ ಕಾರ್ಯಕರ್ತರನ್ನು ಮೊದಲು ವೈಜ್ಞಾನಿಕ ಮನೋಧರ್ಮದತ್ತ ಬಲಗೊಳಿಸಿ ನಂತರ ಜನರ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಹರಿಸಲು ಸಹಕರಿಸಬೇಕು ಎಂದರು. ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಸ್ವಾಗತಿಸಿ ಕಡೆಯಲ್ಲಿ ಬಿಜಿವಿಎಸ್ ತಾಲೋಕು ಆದ್ಯಕ್ಷ ವಂದಿಸಿದರು.

ಅಹಮದ್
ಜಿಲ್ಲಾ ಉಪಾಧ್ಯಕ್ಷ ಬಿಜಿವಿಎಸ್, ಹಾಸನ