Wednesday, 21 January 2015

ಭಾರತ ಜ್ಞಾನ ವಿಜ್ಞಾನ ಸಮಿತಿ, ಕೃಷ್ಣಾ ನಗರ ಘಟಕ, ಹಾಸನ ತಾ
ಬಡತನ ನಿರ್ಮೂಲನ ಆಗದೆ ಸ್ವಚ್ಛ ಭಾರತ ಅಸಾಧ್ಯ: ಗುರುರಾಜ್
ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ವಸತಿ, ವಿದ್ಯೆ, ಉದ್ಯೋಗ ಹೇಗೋ ಹಾಗೆಯೆ ಉತ್ತಮ ಆರೋಗ್ಯ, ನೈರ್ಮಲ್ಯ ಹಾಗೂ ಆಹಾರಕೂಡ ಆಗಿದೆ ಆದರೆ ಭಾರತದ ಬಹುಸಂಖ್ಯಾತ ಜನ ಬಡತನ ರೇಖೆಗಿಂತ ಕೆಳಸ್ಥರದಲ್ಲಿ ಬದುಕುತ್ತಿದ್ದಾರೆ ಅವರ ಅನಕ್ಷರತೆ, ಅನಾರೋಗ್ಯ ಹಾಗೂ ಅನೈರ್ಮಲ್ಯವನ್ನು ನಿರ್ಮೂಲನಗೊಳಿಸಲು ಬಡತನÀ ನಿರ್ಮೂಲನೆ ಅಗತ್ಯವಾಗಿ ಆಗಬೇಕು ಹಾಗಾಗಿ ಬಡತನ ನಿರ್ಮೂಲನೆÀ ಆಗದೆ ಸ್ವಚ್ಛಭಾರತ ಅಸಾಧ್ಯ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಎಚ್.ಟಿ.ಗುರುರಾಜು ಅಭಿಪ್ರಾಯ ಪಟ್ಟಿದ್ದಾರೆ. ಅವರು ಇಂದು ಹಾಸನ ತಾಲೋಕಿನ ಕೃಷ್ಣಾನಗರದಲ್ಲಿ ಇಲ್ಲಿನ ಭಾರತ ಜ್ಞಾನ ವಿಜ್ಞಾನ ಸಮಿತಿ ಘಟಕವು ನಗರದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಪುಷ್ಕರಣಿ ರೋಟರಾಕ್ ಮಿಡ್‍ಟೌನಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಹಾಗೂ ನೈರ್ಮಲ್ಯ ವಿಚಾಋ ಸಂಕಿರಣ ಹಾಗೂ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಜವಾರಲಾಲ ನೆಹರು ಭಾರತ ಕಂಡ ಏಕೈಕ ವೈಜ್ಞಾನಿಕ ಮನೋಧರ್ಮ ಗಟ್ಟಿಯಾಗಿ ಹೊಂದಿದ್ದ ಪ್ರಧಾನಿ ಮಾತ್ರವಲ್ಲ ಮಕ್ಕಳನ್ನು ವೈಚಾರಿಕವಾಗಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಬೆಳೆಸಿದಾಗ ಮಾತ್ರ ಭವಿಷ್ಯದ ಭಾರತ ಕಟ್ಟಲು ಸಾಧ್ಯ ಎಂದು ನಂಬಿದ್ದರು ಹಾಗಾಗಿ ಮಕ್ಕಳ ಜೊತೆ ಹೆಚ್ಚಾಗಿ ಬೆರೆಯುತ್ತಿದ್ದರು ಎಂದರು.

ಉತ್ತಮ ಆರೋಗ್ಯಕ್ಕಾಗಿ ನಿತ್ಯ ಸ್ಚಛ್ಛತೆ ನಡೆಸಬೇಕು: ಡಾ.ದಿನೇಶ್

ಮಕ್ಕಳ ದಿನಾಚರಣೆಯಲ್ಲಿ ಆರೋಗ್ಯ ಹಾಗೂ ನೈರ್ಮಲ್ಯದ ಕುರಿತು ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ದಿನೇಶ್ ಮಾತನಾಡಿ ಮಕ್ಕಳು ಪ್ರತಿ ನಿತ್ಯ ಶುಚಿತ್ವದಿಂದ ಇದ್ದರೆ ಖಾಯಿಲೆ ಬರುವುದು ಕಡಿಮೆ ಹಾಗಾಗಿ ಮಕ್ಕಳು ಸೋಪು ಹಾಕಿ ಪ್ರತಿ ನಿತ್ಯ ಕೈ ತೊಳೆಯಬೇಕು, ದಿನಕ್ಕೆರೆಡು ಬಾರಿ ಹಲ್ಲುಜ್ಜಬೇಕು ಹಾಗೂ ಹಣ್ಣು ತರಕಾರಿ ಹೆಚ್ಚು ತಿನ್ನ ಬೇಕು ಪಾಣಿಪುರಿ, ಹೊಟೆಲ್ ತಿನಿಸುಗಳು ಅನಾರೋಗ್ಯವನ್ನು ಉಂಟು ಮಾಡುವುದು ಎಂದ ಅವರು ಪೋಷಕರು ಮಕ್ಕಳ ಆರೋಗ್ಯ ಸಂರಕ್ಷಣೆ ಮಾಡಲು ಬೀದಿಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಬಡಾವಣೆಯ ಯುವಕರು ಸ್ವಚ್ಚತಾ ಕಾರ್ಯಕ್ರಮವನ್ನು ಪ್ರತಿ ದಿನ ನಡೆಸುವ ಮೂಲಕ ಬೀದಿಗಳನ್ನು ಶುಚಿಯಾಗಿ ಇಟ್ಟುಕೊಳ್ಳ ಬೇಕು ಎಂದರು. ನಂತರ ದಿನೇಶ್ ಮತ್ತು ಮಣಿ ಆಸ್ಪತ್ರೆಯ ವೈದ್ಯರ ತಂಡ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಔಷದವನ್ನು ಉಚಿತವಾಗಿ ವಿತರಿಸಿದರು.

ದೇಹ ಹಾಗೂ ಮಾನಸಿಕ ನೈರ್ಮಲ್ಯ ಭೌತಿಕ ನೈರ್ಮಲ್ಯಕ್ಕಿಂತ ಪ್ರಮುಖ: ಗೋಪಾಲಕೃಷ್ಣ

ನರೇಂದ್ರ ಮೋದಿಯ ಸ್ವಚ್ಛತಾ ಆಂದೋಲನ ಕೇವಲ ಬೀದಿ ಗುಡಿಸುವುದರಿಂದ ಯಶಕಾಣುವುದಿಲ್ಲ ನಿಜವಾಗಿಯೂ ಸ್ವಚ್ಚತಾ ಆಂದೋಲನದ ನಿಜವಾಧ ರೂವಾರಿಗಳು ಪೌರಕಾರ್ಮಿಕರು ಆ ಕಾರ್ಮಿಕರು ಕೆಲಸದ ಭದ್ರತೆ ಇಲ್ಲದೆ, ಸೂಕ್ತ ಸಂಬಳವಿಲ್ಲದೆ ಕಡೆಗಣಿಸಲ್ಪಟ್ಟಿದ್ದಾರೆ ಇವರ ಕುರಿತು ಒಂದು ಸೊಲ್ಲೂ ಎತ್ತದ ಮೋದಿಯ ಸ್ವಚ್ಛತಾ ಆಂದೋಲನ ಒಂದು ಘೋಷಣೆ ಮಾತ್ರ ಎಂದ ಅವರು ಗಾಂಧಿ ಮಾನವನ ಮಾನಸಿಕ ನೈರ್ಮಲ್ಯ ಮೊದಲು ಆಗಬೇಕು ನಂತರ ಏನಿದ್ದರೂ ಭೌತಿಕ ನೈರ್ಮಲ್ಯ ಸಾಧ್ಯ ಎಂದು ಅವರು ಜನತೆಯಲ್ಲಿ ಬ್ರಾತೃತ್ವ, ಮಾನವೀಯತೆ, ಸಹೋದರತೆ, ಜಾತ್ಯಾತೀತತೆ ಬೆಳೆಸಲು ತಮ್ಮ ಇಡೀ ಜೀವಮಾನ ಮುಡಿಪಾಗಿದ್ದರು ಎಂದು ತಿಳಿಸಿ ಗಾಂದಿಯ ಸ್ವಚ್ಚತಾ ಆಂದೋಲನಕ್ಕೂ ಮೋದಿಯ ಸ್ವಚ್ಚತಾ ಆಂದೋಲನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಬದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ವಿವಿಧ ಸ್ಪಧೆಗಳಲ್ಲಿ ಭಾಗವಹಿಸಿ ಬಹುಮಾಣ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಅತಿಥಿಗಳು ವಿತರಿಸಿದರು. ನಂತರ ಪುಷ್ಕರಣಿ ರೋಟರಾಕ್ ಮಿಡ್‍ಟೌನಗಳ ಸಹಯೋಗದಲಿ ನಾಗರೀಕರು ಬಡಾವಣೆಯನ್ನು ಸ್ವಚ್ಛಗೊಳಿಸಿದರು.

ಬಿಜಿವಿಎಸ್ ಕೃಷ್ಣ ನಗರದ ಉಪಾದ್ಯಕ್ಷ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು ಬಿಜಿವಿಎಸ್ ತಾಲೋಕು ಅಧ್ಯಕ್ಷೆ ಮಮತಶಿವು, ಗ್ರಾ.ಪಂ.ಸದಸ್ಯೆ ಶಶಿಕಲ, ಡಿವೈಎಫೈ ಜಿಲ್ಲಾ ಕಾರ್ಯದರ್ಶಿ ಪೃಥ್ವಿ, ರೋಟರಿ ಮಿಡ್ಟೌನ್‍ನ ಪ್ರತಿನಿಧಿಗಳು ಉಪಸ್ತಿತರಿದ್ದರು, ಬಿಜಿವಿಎಸ್ ಕೃಷ್ಣಾ ನಗರ ಘಟಕ ಕಾರ್ಯದರ್ಶಿ ಕಿರಣ್ ಪ್ರಾಸ್ತವಿಕವಾಗಿ ಮಾತನಾಡಿದರು. ಕವಿತ ಸ್ವಾಗತಿಸಿದರು.
                                                        ಕಿರಣ್
                                                     ಘಟಕ ಕಾರ್ಯದರ್ಶಿ  
























              

No comments:

Post a Comment