Friday, 18 July 2014
ENVIRONMENT WORKSHOP FOR SYUDENTS-1
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹವಾಮಾನ ಬದಲಾವಣೆ ಹಾಗೂ ಪರಿಸರ ಅಧ್ಯಯನ ಶಿಬಿರ
inaguration
ನಾಗರೀಕತೆ ಹಾಗೂ ಐಶಾರಾಮಿ ಜೀವನದ ಸಲುವಾಗಿ ಮನುಷ್ಯ ಸಾವಿರಾರು ಮರಗಳನ್ನ, ಪ್ರಾಣಿ-ಪಕ್ಷಿಗಳನ್ನ ವಿನಾಶಕ್ಕೆ ದೂಡಿದ್ದಾನೆ ಮತ್ತು ಅಮೃತಶಿಲೆ ಹಾಗೂ ಲೋಹಗಳ ಹುಡುಕಾಟದಲ್ಲಿ ಭೂಗರ್ಭವನ್ನು ಲೂಟಿ ಮಾಡುತ್ತಿದ್ದಾನೆ. ಇದೆಲ್ಲ ತಪ್ಪಬೇಕಾದರೆ ಪ್ರಾನ್ಸ್‌ನ ತತ್ವಜ್ಞಾನಿ, ಶಿಕ್ಷಣತಜ್ಞ ರೂಸೋ ಹೇಳಿದಂತೆ ಮನುಷ್ಯ ಮತ್ತೆ ಅನಾಗರಿಕನಾಗಬೇಕು ಅಷ್ಟೆ ಎಂದು ಹಾಸನ ಆಕಾಶವಾಣಿಯ ಪ್ರಸಾರ ನಿರ್ವಹಕರಾದ ಸುಜಾತ ಎಫ್ ತಲ್ವಾರ್ ಹೇಳಿದರು. ಅವರು ಇತ್ತೀಚೆಗೆ ಬೆಂಗಳೂರಿನ ಸಿ.ಪಿ.ಆರ್ ಪರಿಸರ ಶಿಕ್ಷಣ ಕೇಂದ್ರವು ಹಾಸನ ತಾಲೋಕು ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಭಾಗಿತ್ವದಲ್ಲಿ ಪರಿಸರ ಕಾಳಜಿ ಉಳ್ಳ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತಾಲೋಕಿನ ಯುವಜನರಿಗಾಗಿ ಹವಾಮಾನ ಬದಲಾವಣೆ ಮತ್ತು ಪರಿಸರ ಅಧ್ಯಯನ ಕುರಿತು ನಡೆಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಮೂಲಕ ಪರಿಸರ ಎಂದರೇನು? ಹಾಗೂ ಪರಿಸರವನ್ನು ಮನುಷ್ಯ ಹೇಗೆ ವಿನಾಶದ ಕಡೆಗೆ ಕೊಂಡೋಗಿದ್ದಾನೆ ಎಂಬುದನ್ನು ಕಥೆಗಳ ಮೂಲಕ ತಿಳಿಸುತ್ತಾ ಇಂದಿನ ಮಕ್ಕಳು ಪರಿಸರ ಕುರಿತ ಆಳ ಅಧಯಯನದಲ್ಲಿ ತೊಡಗಿಕೊಂಡಾಗ ಮುಂದಿನ ದಿನದಲ್ಲಿ ಪರಿಸರ ಪ್ರೇಮಿ ಅಭಿವೃದ್ಧಿ ಕಡೆ ಗಮನ ಹರಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಲು ಬಿ.ಜಿ.ವಿ.ಎಸ್ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜಿ.ವಿ.ಎಸ್‌ನ ತಾಲೂಕು ಅಧ್ಯಕ್ಷರಾದ ಮಮತ ಶಿವು ವಹಿಸಿ ಮಾತನಾಡಿ ಪರಿಸರ ಸಂರಕ್ಷಣ ಎನ್ನುವುದು ಈಗ ಶೈಕ್ಷಣಿಕ, ಸಾಮಾಜಿಕ ಹಾಗೂ ಅಂತರ ರಾಷ್ಟ್ರೀಯ ರಾಜಕೀಯ ಸಮಸ್ಯೆಯಾಗಿ ಪರಿವರ್ತನೆಯಾಗಿದೆ ಹಾಗಾಗಿ ಶಾಲಾ ಈಕೋಕ್ಲಬ್ಬುಗಳ ಮೂಲಕ ಮಕ್ಕಳಲ್ಲಿ ಪರಿಸರದ ವಸ್ತು ಸ್ಥಿತಿ ಕುರಿತು ಅರ್ಥೈಸುವ ಚಟುವಟಿಕೆ ನಡೆಸುವ ಅಗತ್ಯ ಇದ್ದು ಅದನ್ನು ಬಿಜಿವಿಎಸ್ ದೇಶಾದ್ಯಾಮತ ನಡೆಸುತ್ತಿದೆ ಎಂದರು.
ಕಾರ್ಯಕ್ರಮದ ಸಂಚಾಲಕರಾದ ಕವಿತ.ಕೆ.ವಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಬಿ.ಜಿ.ವಿ.ಎಸ್ ನ ಧ್ಯೇಯ ಹಾಗೂ ಚಟುವಟಿಕೆಗಳನ್ನು ತಿಳಿಸುವ ಜೊತೆಗೆ ಪರಿಸರ ಅಧ್ಯಯನದ ಹಂತಗಳು, ಗುರಿ ಮತ್ತು ಉದ್ದೇಶಗಳನ್ನು ತಿಳಿಸಿದರು. ಬಿ.ಜಿ.ವಿ.ಎಸ್‌ನ ತಾಲೂಕು ಖಜಾಂಚಿ ಶ್ರೀಮತಿ ರೇಖ ನಿರೂಪಿಸಿ ಸ್ವಾಗತಿಸಿದರು. ಬಿ.ಜಿ.ವಿ.ಎಸ್‌ನ ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು.
activities

.JPG)
ಇಡೀ ದಿನ ಹಾಸನದ ಜವೇನ ಹಳ್ಳಿ ಮಠ ಹಾಗೂ ಎಸ್.ಜಿ.ಆರ್ ಶಾಲಾ ಆವರಣ ಹೊಸಲೈನ್ ರಸ್ತೆ, ಉತ್ತರ ಬಡಾವಣೆಯಲ್ಲಿ ಪರಿಸರ, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ, ಹವಾಮಾನ ಬದಲಾವಣೆ, ಶಕ್ತಿ ನಿರ್ವಹಣೆ, ಇಕೋ ಕ್ಲಬ್ ಚಟುವಟಿಕೆ ವಿಷಯಗಳನ್ನು ಪಿಪಿಟಿ, ಆಟ-ಹಾಡು ಹಾಗೂ ಸಂಶೋಧನಾ ಚಟುವಟಿಕೆಗಳ ರೂಪದಲ್ಲಿ ತರಬೇತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಪಿ.ಆರ್ ಪರಿಸರ ಕೇಂದ್ರ ಬೆಂಗಳೂರಿನಿಂದ ಆಗಮಿಸಿದ್ದ ರವಿಶಂಕರ್ ಪರಿಸರ, ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯ ಮಾಹಿತಿಯನ್ನು ಮತ್ತು ಸಮೀಕ್ಷೆಯನ್ನು ಚಟುವಟಿಕೆ ಹಾಗೂ ಪಿಪಿಟಿಯ ಮೂಲಕ ತಿಳಿಸುತ್ತಾ ನಮ್ಮ ಮನೆ ಹಾಗು ಶಾಲಾ ಸುತ್ತ ಮುತ್ತ ಇರುವ ಪರಿಸರ ವ್ಯವಸ್ಥೆಯನ್ನು ಅಧ್ಯಯನ ಮಾಡುವ ವಿಧಾನ ತಿಳಿಸಿ ಬೀದಿ ಹಾಗೂ ಶಾಲೆಗಳಲ್ಲಿ ಪರಿಸರ ಕೂಟ ರಚಿಸಲು ಕರೆ ನೀಡಿದರು.
ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೆ. ಎಸ್ ರವಿಕುಮಾರ್ ಹವಾಮಾನ ವೈಪರಿತ್ಯ (ಗ್ಲೋಬಲ್ ವಾರ್ಮಿಂಗ್) ಬಗ್ಗಿನ ಮಾಹಿತಿಯನ್ನು ಪಿಪಿಟಿಯ ಮೂಲಕ ವಿವರಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಹವಾಮಾನ ವೈಪರೀತ್ಯದಿಮದ ಹಾಸನ ಜಿಲ್ಲೆಯ ಜನತೆ, ಕೃಷಿ ಹಾಗೂ ಕುಡಿವ ನೀರಿನ ಪರಿಣಾಮದ ಕುರಿತು ಸಮೀಕ್ಷೆ ನಡೆಸಲು ತಿಳಿಸಿದರು.
ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಪರಿಸರ ಚಳುವಳಿಗಳ ಪರಿಚಯ ಮಾಡಿ ಕೊಟ್ಟರು.
inaguration
ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಮೂಲಕ ಪರಿಸರ ಎಂದರೇನು? ಹಾಗೂ ಪರಿಸರವನ್ನು ಮನುಷ್ಯ ಹೇಗೆ ವಿನಾಶದ ಕಡೆಗೆ ಕೊಂಡೋಗಿದ್ದಾನೆ ಎಂಬುದನ್ನು ಕಥೆಗಳ ಮೂಲಕ ತಿಳಿಸುತ್ತಾ ಇಂದಿನ ಮಕ್ಕಳು ಪರಿಸರ ಕುರಿತ ಆಳ ಅಧಯಯನದಲ್ಲಿ ತೊಡಗಿಕೊಂಡಾಗ ಮುಂದಿನ ದಿನದಲ್ಲಿ ಪರಿಸರ ಪ್ರೇಮಿ ಅಭಿವೃದ್ಧಿ ಕಡೆ ಗಮನ ಹರಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಲು ಬಿ.ಜಿ.ವಿ.ಎಸ್ ಮುಂದಾಗಬೇಕು ಎಂದರು.
activities
ಇಡೀ ದಿನ ಹಾಸನದ ಜವೇನ ಹಳ್ಳಿ ಮಠ ಹಾಗೂ ಎಸ್.ಜಿ.ಆರ್ ಶಾಲಾ ಆವರಣ ಹೊಸಲೈನ್ ರಸ್ತೆ, ಉತ್ತರ ಬಡಾವಣೆಯಲ್ಲಿ ಪರಿಸರ, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ, ಹವಾಮಾನ ಬದಲಾವಣೆ, ಶಕ್ತಿ ನಿರ್ವಹಣೆ, ಇಕೋ ಕ್ಲಬ್ ಚಟುವಟಿಕೆ ವಿಷಯಗಳನ್ನು ಪಿಪಿಟಿ, ಆಟ-ಹಾಡು ಹಾಗೂ ಸಂಶೋಧನಾ ಚಟುವಟಿಕೆಗಳ ರೂಪದಲ್ಲಿ ತರಬೇತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಪಿ.ಆರ್ ಪರಿಸರ ಕೇಂದ್ರ ಬೆಂಗಳೂರಿನಿಂದ ಆಗಮಿಸಿದ್ದ ರವಿಶಂಕರ್ ಪರಿಸರ, ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯ ಮಾಹಿತಿಯನ್ನು ಮತ್ತು ಸಮೀಕ್ಷೆಯನ್ನು ಚಟುವಟಿಕೆ ಹಾಗೂ ಪಿಪಿಟಿಯ ಮೂಲಕ ತಿಳಿಸುತ್ತಾ ನಮ್ಮ ಮನೆ ಹಾಗು ಶಾಲಾ ಸುತ್ತ ಮುತ್ತ ಇರುವ ಪರಿಸರ ವ್ಯವಸ್ಥೆಯನ್ನು ಅಧ್ಯಯನ ಮಾಡುವ ವಿಧಾನ ತಿಳಿಸಿ ಬೀದಿ ಹಾಗೂ ಶಾಲೆಗಳಲ್ಲಿ ಪರಿಸರ ಕೂಟ ರಚಿಸಲು ಕರೆ ನೀಡಿದರು.
ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೆ. ಎಸ್ ರವಿಕುಮಾರ್ ಹವಾಮಾನ ವೈಪರಿತ್ಯ (ಗ್ಲೋಬಲ್ ವಾರ್ಮಿಂಗ್) ಬಗ್ಗಿನ ಮಾಹಿತಿಯನ್ನು ಪಿಪಿಟಿಯ ಮೂಲಕ ವಿವರಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಹವಾಮಾನ ವೈಪರೀತ್ಯದಿಮದ ಹಾಸನ ಜಿಲ್ಲೆಯ ಜನತೆ, ಕೃಷಿ ಹಾಗೂ ಕುಡಿವ ನೀರಿನ ಪರಿಣಾಮದ ಕುರಿತು ಸಮೀಕ್ಷೆ ನಡೆಸಲು ತಿಳಿಸಿದರು.
ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಪರಿಸರ ಚಳುವಳಿಗಳ ಪರಿಚಯ ಮಾಡಿ ಕೊಟ್ಟರು.
Friday, 11 July 2014
ಇತಿಹಾಸದಲ್ಲಿ ವಿಜ್ಞಾನ
ಅಹಮದ್ ಹಗರೆ
ಕಾರ್ಯದರ್ಶಿ- ಬಿಜಿವಿಎಸ್-ಹಾಸನ
ವಿಜ್ಞಾನ ಮತ್ತು ತತ್ವಜ್ಞಾನದ ನಡುವೆ ನಿರಂತರವಾಗಿ ನಡೆದು ಬಂದಿರುವ ಚರ್ಚೆ "ಜೀವ ಮತ್ತು ಅದರ ಅಸ್ತಿತ್ವದ" ಕುರಿತು ಈ ಸಂಘರ್ಷದಲ್ಲಿ ಜಗತ್ತಿನ ಚಿಂತಕ ವರ್ಗ ೨ ಪಾಲು ಭಗಂತ ವ್ಯವಸ್ತಿತವಾಗಿ ಜಗತ್ತು ಮತ್ತು ಜೀವವನ್ನು ಸೃಷ್ಠಿಮಾಡಿದ್ದಾನೆ ಎಂದು ವಾದಿಸುವ ವರ್ಗ ಚೈತನ್ಯವಾದಿಗಳು ಅಥವ ಭಾವವಾದಿಗಳು ಪ್ರಾಚೀನ ಗ್ರೀಕಿನಲ್ಲಿ ವೈಟಲಿಸ್ಟ್ ಎನ್ನುತ್ತಿದ್ದರು ಭಾರತದ ನ್ಯಾಯದರ್ಶನ ಈ ವಾದದ ಮುಂಚೂಣಿಯಲ್ಲಿದ್ದ ದರ್ಶನಶಾಸ್ತ್ರ ಹಾಗೇಯೇ ಭೌತಶಕ್ತಿಗಳಿಂದ ತಾನಾಗೆ ವಿಶ್ವ ಮತ್ತು ಜೀವ ವಿಕಾಸವಾಗಿದೆ ಎಂದು ಪ್ರತಿಪಾದಿಸುವ ವರ್ಗ ಇವರಿಗೆ ಯಾಂತ್ರಿಕವಾದಿಗಳು ಅಥವ ಭೌತವಾದಿಗಳು ಪ್ರಾಚೀನ ಗ್ರೀಕಿನಲಿ ಮೆಕ್ಯಾನಿಸ್ಟ್ ಎನ್ನುತ್ತಿದ್ದರು ಭಾರತದಲ್ಲಿ ಸಾಂಖ್ಯ ಈ ವಾದದಲ್ಲಿದ್ದ ದರ್ಶನ. ಈ ಎರಡೂ ವಾದಗಳ ನಡುವೆ ನಿರಂತರವಾಗಿ ನಡೆಯುತ್ತಾ ಬಂದ ಸಂಘರ್ಷ ಸತ್ಯದ ಹುಡುಕಾಟದಲ್ಲಿ ವಿಜ್ಞಾನಕ್ಕೆ ಜನ್ಮ ನೀಡಿತು. [ಭಾವವಾದಕ್ಕೆ ಧರ್ಮಮಂದಿರಗಳು, ರಾಜರು, ಪಾಳೇಗಾರರು ಬೆಂಬಲ ನೀಡಿದರೆ ಭೌತವಾದಕ್ಕೆ ವಿಜ್ಞಾನ ಆಸರೆಯಾಗಿ ನಿಂತಿತು] ವಿಜ್ಞಾನದ ವಿಕಾಸ ಹಾಗೂ ಬೆಳವಣಿಗೆಯನ್ನು ಮಾನವ ಸಮಾಜ ಬೆಳೆದು ಬಂದ ನಾಲ್ಕು ಪ್ರಮುಖ ಸ್ಥರಗಳ ಬೆಳವಣಿಗೆಯ ಜೊತೆ ನೋಡಬೇಕು.
೧. ೧. ಇತಿಹಾಸ ಪೂರ್ವದಲ್ಲಿ ವಿಜ್ಞಾನ
೨. ಗುಲಾಮಿ ವ್ಯವಸ್ಥೆಯಲ್ಲಿ ವಿಜ್ಞಾನ
೩. ಊಳಿಗಮಾನ ವ್ಯವಸ್ಥೆಯಲ್ಲಿ ವಿಜ್ಞಾನ
೪. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವಿಜ್ಞಾನ

೧. ಇತಿಹಾಸ ಪೂರ್ವದಲ್ಲಿ ವಿಜ್ಞಾನ
ಮಾನವನ ವಿಕಾಸ, ನಾಗರೀಕತೆ ಬೆಳೆಯಲಾರಂ, ಚಕ್ರ, ಬೆಂಕಿ, ಮನೆ, ಸನ್ನೆ ವಿಕಾಸದ ಜೊತೆಯಲ್ಲೇ ಬೆಳವಣಿಗೆ.
ನದಿ, ಆಕಾಶ, ಕಾಡ್ಗಿಚ್ಚು, ಪ್ರವಾಹ ವಿಜ್ಞಾನದ ಸತ್ಯ ತಿಳಿಯಲು ಮಾನವನಿಗೆ ಅನಿವಾರ್ಯತೆ ಸೃಷ್ಠಿ

೨. ಗುಲಾಮಿ ವ್ಯವಸ್ಥೆಯಲ್ಲಿ ವಿಜ್ಞಾನ(ಬಾಲ ವಿಜ್ಞಾನದ ಕಾಲ ಘಟ್ಟ)
ಕ್ರಿಸ್ತ ಪೂರ್ವದಿಂದ ಕ್ರಿಸ್ತ ಶಕದ ಕಾಲಘಟ್ಟ :- ಗ್ರೀಕಿನಲ್ಲಿ ವಿಜ್ಞಾನದ ಉಗi ಮತ್ತು ವೈಭವ
ಖಗೋಳ, ಗಣಿತ ಹಾಗೂ ವೈದ್ಯಕೀಯ ಶಾಸ್ತ್ರದ ಬಾಲ್ಯಾವಸ್ಥೆ
ಕ್ರಿ.ಪೂ.೧೫೦೦ವರ್ಷಗಳ ಹಿಂದೆ ಕಣಾದ ವೈಶೇಷಿಕದರ್ಶನ(ಪರಮಾಣುವಾದ ಮಂಡನೆ, ಚರಕ ವೈದ್ಯಕೀಯ ಸಂಹಿತೆ
ಥೇಲಿಸ್ ಮತ್ತು ಪೈಥಾಗೊರಸ್ ಪ್ರಕೃತಿ ವಿಜ್ಞಾನದ ಆದ್ಯ ಪ್ರವರ್ತಕರು
ಅಲೆಗ್ಸಾಂಡ್ರಿಯ ವಿಜ್ಞಾನ ಅಧ್ಯಯನದ ಕೇಂದ್ರ ಸ್ಥಾನ ಆಗಿದ್ದಾಗ ವಿಶ್ವದ ರಚನೆ ಕುರಿತು ತೀವ್ರ ಚರ್ಚೆ ಧರ್ಮಗುರುಗಳ ಜೊತೆ ಪ್ರಕೃತಿ ವಿಜ್ಞಾನಿಗಳ ಸಂಘರ್ಷ
ಕ್ರಿ.ಪೂ. ೬೨೪-೫೪೬: ಥೇಲ್ಸ್ : ಪ್ರಕೃತಿಯಲ್ಲಿ ಗೋಚರಿಸುವ ಎಲ್ಲ ವಸ್ತುಗಳೂ ಭೌತಿಕ ಮೂಲ
ಕ್ರಿ.ಪೂ. ೬೧೦-೫೪೬: ಅನಾಕ್ಸಿಮೇಂಡರ್: ವಸ್ತು ಗುಣ ಹಾಗೂ ಅನಂತತೆಯನ್ನು ಮೀರಿದ ಜಲಮೂಲವಾಗಿದೆ
ಕ್ರಿ.ಪೂ. ೫೮೫-೫೨೮: ಅನಾಕ್ಸಿಮೇನಸ್ : ವಸ್ತು ವಾಯು ಮೂಲ, ಕ್ರಿ.ಪೂ. ೫೩೫-೪೭೫ ಹೆರಾಕ್ಲಟಿಸ್ : ಅಗ್ನಿ ಮೂಲ
ಕ್ರಿ,ಪೂ. ೪೯೦-೪೩೦: ಎಂಪಿಡೂಕಸ್ & ಕ್ರಿ.ಪೂ.೩೮೪-೩೨೨: ಅರಿಸ್ಟಾಟಲ್ ವಸ್ತು ೪ ಮೂಲಭೂತ ಅಂಶಗಳು ಈಥರ್ (ಆಕಾಶ ದ್ರವ್ಯ] ಎಂಬ ವಸ್ತವಿನೊಂದಿಗೆ ಸಂಬಂದಿಸಿದೆ
ಕ್ರಿ.ಪೂ. ೪೭೦-೩೮೦ : ಡಿಮಾಕೃಟೀಸ್ ನಿರೂಪಿಸುವ ತತ್ವ ನಿರೂಪಣೆ : ಭೌತದ್ರವ್ಯಗಳಿಂದ ಜಗತ್ತಿನ ನಿರ್ಮಾಣ
೧. ಪ್ರಜ್ಞೆಯಿಂದ ಸ್ವತಂತ್ರ ಅಸ್ತಿತ್ವ
೨. ಇಂದ್ರಿಯಗಳ ಮೂಲಕ ಸಂವೇದನೆಗಳಿಗೆ ಮೂಲವಾಗಿರುತ್ತದೆ
೩. ಸಂವೇದನೆ ಮತ್ತು ಭಾವನೆ ಭೌತವಸ್ತುವಿನ ಪಡಿಯಚ್ಚು
೪. ಶಾರೀರಿಕ ಗುಣಧರ್ಮ ಹೊಂದಿರುತ್ತದೆ (ಎಲ್ಲ ವಸ್ತುಗಳ ರಚನೆಗೆ ಭೌತ ವಸ್ತುವೇ ಮೂಲ)
೫. ಸ್ಥಾಯಿ, ಸ್ಥಿರವಾದುದು (ಅಣುಗಳು ಎಂದಿನಂತೆಯೇ ಇರುವುವು)
ಅನಾಕ್ಸಗೊರಸ್: ಗ್ರಹಣ, ಉಲ್ಕಾಪಾತ, ಅರಿಸ್ಟಾಕ್ಸ್ ಗ್ರಹಣಗಳಿಗೆ ಕಾರನ ಮತ್ತು ಸೂರ್ಯಕೇಂದ್ರ ಸಿದ್ದಾಂತ ಪ್ರತಿಪಾದನೆ ಮಾಡಿದ ಇದಕ್ಕಾಗಿ ಇಬ್ಬರೂ ಗಡಿಪಾರಿನ ಶಿಕ್ಷೆಗೆ ಒಳಪಡಬೇಕಾಯಿತು
ಯೂಕ್ಲಿಡ್, ಹಿಪಾರ್ಕಸ್, ಆರ್ಕಿಮಿಡಿಸ್ ಇವರುಗಳು ಆಕಾಲದ ಅಗತ್ಯಕ್ಕೆ ಅನುಗುಣವಾಗಿ ಯಂತ್ರಶಾಸ್ತ್ರ, ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರ ಬೆಳವಣಿಗೆ

ಭಾರತದಲ್ಲಿ
೧. ಆರ್ಯಭಟನಿಗಿಂತ ೭ಶತಮಾನ ಮುಂಚೆ ಅರಿಸ್ಠಾರ್ಕಸ್ ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಮದು ಪ್ರತಿಪಾದಿಸಿದ ಆದರೆ ಆತನಿಗೆ ಆರ್ಯಭಟನಿಗಿದ್ದಷ್ಟು ಶಾಸ್ತ್ರೀಯ ಖಚಿತತೆ ಇರಲಿಲ್ಲ ಮತ್ತು ಲೆಕ್ಕಾಚಾರ ಕರಾರುವಾಕ್ಕಾಗಿರಲಿಲ್ಲ. : ಕುತೂಹಲ ಎಂದರೆ ಅವರವರ ದೇಶದಲ್ಲಿ ಈ ಇಬ್ಬರ ಪ್ರತಿಪಾದನೆ ಕೂಡಲೇ ಒಪ್ಪಿಗೆ ಸಿಗಲಿಲ್ಲ.
೨. ಹರಪ್ಪ ಮತ್ತು ಮೆಹಂಜೋದಾರೋ ಭಾರತದ ಅತಿ ಪ್ರಾಚೀನ ನಾಗರೀಕತೆ ಸುಮಾರು ಕ್ರಿ.ಪೂ ೧೦ಸಾವಿರ ವರ್ಷಗಳಿಂದ ಕ್ರಿಪೂ.೩೦೦೦ ವರ್ಷಗಳವರಗೆ ಬಾಳಿದ ಅತ್ಯಂತ ಪುರಾತನ ಹಾಗೂ ವಿಶ್ವದ ಎಲ್ಲಾ ನಾಗರೀಕತೆಗಳಿಗಿಂತ ನೈಸರ್ಗಿಕ ಹಾಗೂ ತಾಂತ್ರಿಕ ನಿಪುಣತೆಯನ್ನು ಸಾಧಿಸಿದ್ದ ನಾಗರೀಕತೆ ಆಗಲೇ ನೌಕಾಯಾನ, ಕೃಷಿ, ನಗರೀಕರಣ, ಅಚ್ಚುಕಟ್ಟು, ಖಗೋಳದಲ್ಲಿ ನಿಪುಣತೆ ಹಾಗೂ ಸೌರಮಾನ ಪಂಚಾಂಗ ಕಂಡು ಹಿಡಿದಿದ್ದರು. ಜಗತ್ತಿನಲ್ಲಿ ಮೊದಲಹಂತದ ಸುವ್ಯವಸ್ಥಿತ ನಗರೀಕರಣ ಸುಟ್ಟ ಇಟ್ಟಿಗೆಗಳ ಮಹಡೀ ಮನೆ ಈ ಮಾದರಿ ನಗರೀಕರಣ ಪುನಃ ಮೌರ್ಯರಕಾಲದವರೆಗೆ ಮತ್ತು ರೋಂ ಸಾಮ್ರಾಜ್ಯ ಬರುವವರೆಗೆ ಅಂದರೆ ಸುಮಾರು ೧೫೦೦ ವರ್ಷಗಳ ಕಾಲ ಕಾಯಬೇಕು. (ಸಿಂಧೂ ನಗರದ ಕೊಳ್ಳದಲ್ಲಿ ಬಂಡೆಗಳು ವಿರಳ ಹಾಗೂ ಬೃಹತ್ ಪ್ರವಾಹಗಳಿಂದ ಮನೆ ಸಂರಕ್ಷಣೆಗೆ ಇವುಗಳ ಅನಿವಾರ್ಯತೆ ಇತ್ತು. ಆದರೆ ಪ್ರಾಕೃತಿಕ ವಿಜ್ಞಾನ ಮತ್ತು ವೈದ್ಯಶಾಸ್ತ್ರ ಒಂದು ಜ್ಞಾನವಾಗಿ ಬೆಳೆದಿರಲಿಲ್ಲ.)
೩. ಆರ್ಯರ ಆಗಮನ ಹರಪ್ಪ ಸಂಸ್ಕೃತಿ ನಾಶ ಮೂಢನಂಬಿಕೆ, ಕಂದಾಚಾರ, ಚಾಂದ್ರಮಾನ ಪಂಚಾಂಗ, ಖಗೋಳದಮೇಲೆ ಅಲಕ್ಷ್ಯ ಹರಪ್ಪರ ಖಗೋಳ ಬಳಸಿ ಜ್ಯೋತಿಷ್ಯಮಾಡಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನ ಅವನತಿ ಕಂಡಿತು.
೪. ಉಪನಿಷತ್ ಕಾಲದಲ್ಲಿ ಉದ್ದಾಲಕ ಆರುಣಿ ಅಂದರೆ ಥೇಲಿಸನಿಗಿಂತ ೧೦೦೦ವರ್ಷ ಮುಂಚೆಯೇ ಪರಮಾಣುವಾದವನ್ನು ಪ್ರಾಯೋಗಿಕವಾಗಿ ವಿವರಿಸಿ ತೋರಿಸಿದ ಕಣಾದ ಮತ್ತು ಥೇಲಿಸ್ ಬರೇ ತರ್ಕದಿಂದ ಪ್ರತಿಪಾದಿಸಿದ್ದರು. ಗಾರ್ಡನ್ ಚೈಲ್ಡ್ ಉದ್ದಾಲಕ ಆರುಣಿ ಜಗತ್ತಿನ ಮೊದಲ ಪ್ರಾಕೃತಿಕ ವಿಜ್ಞಾನಿ ಎಂದು ಪ್ರತಿಪಾದನೆ
೫. ಕಬ್ಬಿಣದ ಆವಿಷ್ಕಾರ ಕೃಷಿ ತಂತ್ರಜ್ಞಾದ ಬಲವೃದ್ಧಿ, ಗಣತಂತ್ರ ನಾಶ ಬೃಹತ್ ಜನಪದಗಳು ತಲೆ ಎತ್ತಲಾರಂಭ ಗುಲಾಮಿ ವ್ಯವಸ್ಥೆ ಊಳಿಗಮಾನ್ಯ ವ್ಯವಸ್ಥೆಯಾಗಿ ಬದಲಾಗಲಾರಂಬಿಸಿದಾಗ ಹೊಸ ಹೊಸ ಧರ್ಮಗಳು ವಿಜ್ಞಾನವನ್ನು ಮೂಲೆಗೆ ತಳ್ಳಲಾರಂಬಿಸಿತು.

೩. ಊಳಿಗಮಾನ ವ್ಯವಸ್ಥೆಯಲ್ಲಿ ವಿಜ್ಞಾನ(ಶೂನ್ಯ ಕಾಲ ಅಥವ ಅಂಧಕಾರದ ಕಾಲ)
ಕ್ರಿ.ಶ ೩ ಶತಮಾನ - ಕ್ರಿ.ಶ.೧೧ನೇ ಶತಮಾನ- ರಸಾಯನ ಶಾಸ್ತ್ರ
ವಿಶ್ವದಾದ್ಯಂತ ಬೆಳವಣಿಗೆ ಸ್ಥಗಿತ ಈ ಕಾಲಘಟ್ಟವನ್ನ ಅಂಧಕಾರದ ಯುಗ ಎಂದು ವಿಜ್ಞಾನಿಗಳು ಮಾತ್ರವಲ್ಲ ಇತಿಹಾಸಕಾರರು ಮತ್ತು ದಾಶ್ನಿಕರೂ ಸಹ ಕರೆದರು.
ಜಗತ್ತಿನಾದ್ಯಂತ ಪಾಳೇಗಾರಿ ರಾಜವಂಶ ಗಣತಂತ್ರವ್ಯವಸ್ಥೆಯನ್ನು ನಾಶಮಾಡಿ ಬೆಳೆಯುವಾಗ ಜನ ಹಾಗೂ ಸಮಾಜವನ್ನು ವರ್ಗಾಧಾರಿತವಾಗಿ ಒಡೆಯಲು ಮಾಟ, ಮಂತ್ರ, ದೇವರು, ಮೂಢನಂಬಿಕೆ, ಮೂರ್ತಿಪೂಜೆ, ಜೋತಿಷ್ಯ, ಪುನರ್ಜನ್ಮಗಳಿಗೆ ಜನ್ಮ ನೀಡಿ ದೇವನಿಯಾಮಕ ಎಂದು ಆಳತೊಡಗಲು ಪ್ರಾರಂಬಿಸದಾಗ ಬರೀ ಸಂಘರ್ಷ, ಯುದ್ಧ, ಲಾಲಸೆಗಳಿಂದ ಅರಾಜಕ ವ್ಯವಸ್ಥೆ ನಿರ್ಮಾಣ ಆಯಿತು.
ಭಾರತದಲ್ಲಿ ಗಣ ಸಂಸ್ಕೃತಿಯ ನಾಶ ಮೌರ್ಯ ಸಾಮ್ರಾಜ್ಯದ ಉಚ್ರಾಯಕ್ಕೆ ನಾಂದಿ ಹಾಡಿತು, ಗುಪ್ತ್ರರ ಕಾಲಘಟ್ಟದಲ್ಲಿ ಕರ್ಮಸಿದ್ಧಾಂತ ಭಾರತದ ವೈಭವೋಪೇತ ಗಣಿತ, ಖಗೋಳ, ತರ್ಕ, ತಂತ್ರಜ್ಞಾನವನ್ನು ನಾಶಗೊಳಿಸಿ ಅಂಧಕಾರದಲ್ಲಿ ಬೀಳಿಸಿತು.
ಆದರೂ ಈ ಕಾಲಘಟ್ಟದಲ್ಲಿ ರಾಜರ ಚಿನ್ನ ಹಾಗೂ ಬಣ್ನದ ಮೋಹ ರಸಾಯನಶಾಸ್ತ್ರದ ಉದ್ಭವಕ್ಕೆ ನಾಂದಿ ಹಾಡಿತು. ಬಹಳ ಮುಖ್ಯವಾಗಿ ಲಿಪಿ ವಿಜ್ಞಾನ ಹಾಗೂ ಸಾಹಿತ್ಯ ಬೆಳೆದು ಬಂತು.

ಕ್ರಿ.ಶ.೧೧ - ಕ್ರಿ.ಶ.೧೫ ರಿನೆಸಾನ್ಸ್ - ಖಭೌತ ವಿಜ್ಞಾನದ ವಿಕಾಸ
ರೋಮನ್ ಕ್ಯಾಥೋಲಿಕ್ ಚರ್ಚು ಜಮೀನ್ದಾರಿ ಪದ್ಧತಿಗೆ ಆಧಾರ ಸ್ಥಂಬ ಹಾಗೂ ಧರ್ಮಗುರು, ರಾಜ ಹಾಗೂ ಭಾರೀ ಭೂಮಾಲೀಕರ ನಡುವಣ ಶೀತಲ ಸಮಾರಾರಂಭ
ವಿಜ್ಞಾನದ ಜಿಗಿತ ಇಲ್ಲಿಂದ ಆರಂಭ ಕೋಪರ್ನಿಕಸ್ ಪುನಃ ಅರಿಸ್ಟಾರ್ಕಸ್‌ನ ಸಿಧ್ಧಾಂತಕ್ಕೆ ಮರುಜನ್ಮ
ಮೈಕೆಲ ಆಂಜೆಲೋ, ಡವಿಂಚಿ ಕಲೆಯಮೂಲಕ ಧರ್ಮ ತಿರಸ್ಕಾರ
ಹೊಸ ಹೊಸ ಪಟ್ಟಣ ಕಂಡುಕೊಳ್ಳಲು ಹೊಸ ವಿಜ್ಞಾನದ ಉಗಮ.
ಭಾರತದಲ್ಲಿ ಭಗವದ್ಘೀತೆ ಮತ್ತು ಕರ್ಮಸಿದ್ಧಾಂತ ರಾಜರ ಸಂವಿಧಾನವಾಗಿತ್ತು ವಿಜ್ಞಾನಿಗಳಾಗಬೇಕಾಗಿದ್ದವರು ಜೋತಿಷಿಗಳು, ಮಾಟಗಾರರು ಆಗಿದ್ದರು, ಸಾಹಿತ್ಯ ಸಂಪೂರ್ಣ ರಾಜಾಶ್ರಯದ ಪಾದತಳದಲ್ಲಿ ಶರಣಾಗಿತ್ತು. ಆದರೆ ೧೧ನೇ ಶತಮಾನದಲ್ಲಿ ಜೇಡರ ದಾಸೀಮಯ್ಯ ಜವಳಿ ತಂತ್ರಜ್ಞಾನದ ಬೆಳವಣಿಗೆಗೆ ಈ ಗುಲಾಮಗಿರಿ ವಿರುದ್ಧ ಶರಣ ಚಳುವಳಿಗೆ ಮುನ್ನುಡಿ ಬರೆದ ನಂತರ ಬಸವಣ್ಣ ಸ್ವಲ್ಪಕಾಲ ಎಬ್ಬಿಸಿದ ಚಳುವಳಿ ಅದು ಧಾರ್ಮಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಬಿಟ್ಟರೆ ವಿಜ್ಞಾನದ ಚಿಗುರೂ ಕೂಡ ಏಳಲಿಲ್ಲ.

ಕ್ರಿ.ಶ.೧೫ ಶತಮಾನ - ಕ್ರಿ.ಶ.೧೮ ಶತಮಾನ - ಭೌತಶಾಸ್ತ್ರದ ಉಚ್ರಾಯ ಕಾಲಘಟ್ಟ
ಜಮೀನ್ದಾರಿ ಪದ್ಧತಿಯನ್ನು ತುಳಿದು ಬಂಡವಾಳ ವ್ಯವಸ್ಥೆಯ ಉಗಮ ಅದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಅನಿವಾರ್ಯ ಮತ್ತು ಅಗತ್ಯವಾಗಿತ್ತು.
ವಿಜ್ಞಾನದ ಬುದ್ಧಿ ನಿಷ್ಠ ಮತ್ತು ಚರ್ಚಿನ ಶೃದ್ಧಾ ನಿಷ್ಠ ತತ್ವದ ಸಂಘರ್ಷ ಬುಗಿಲು ಈ ಸಂಘರ್ಷದಲ್ಲಿ ವಿಜ್ಞಾನ ಬಹುಮುಖಿಯಾಗಿ ಬೆಳೆಯಿತು
ಪ್ರಾಚೀನ ಗ್ರೀಕಿನ ಪರಮಾಣುವಾದಕ್ಕೆ ಪುನರುಜ್ಜೀವನ ಯೂರೋಪಿನ ಹೊಸ ಪೀಳಿಗೆ ಆಕರ್ಷಣೆ ಮತ್ತು ಹುರುಪು ಹಾಗಾಗಿ
೧. ಮೊದಲ ಹಂತದಲ್ಲಿ ಕೋಪರ್ನಿಕಸನ ಸೂರ್ಯ ಕೇಂದ್ರ ಸಿದ್ದಾಂತ ಖಗೋಳಶಾಸ್ತ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯಿತು ಮತಧರ್ಮದ ನಂಬಿಕೆ ವಿರುದ್ಧ ಗದಾಪ್ರಹಾರ ಬ್ರೂನೋ, ಬೋಡ್, ಟೈಕೊಬ್ರಾಹೆ, ಗೆಲಿಲಿಯೋ, ಕೆಪ್ಲರ್ ಪ್ರವಾಹದ ವಿರುದ್ಧ ಈಜಿ ಭೌತಶಾಸ್ತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದರು
೨. ಎರಡನೇ ಹಂತದಲ್ಲಿ ಮೈಕಲ್ ಆಂಜಲೋ, ಡವಿಂಚಿ ಕಲಾಮಾಧ್ಯಮದ ಮೂಲಹ ವಿಜ್ಞಾನ ಪ್ರಸಾರಕ್ಕೆ ಕಾರಣರಾದರು
೩. ಮೂರನೇ ಹಂತದಲ್ಲಿ ಫ್ರಾನ್ಸಿಸ್ ಬೇಕನ್೧೬೦೫(ಇಂಗ್ಲೇಂಡ್), ಡೆಕಾರ್ತೆ(ಫ್ರಾನ್ಸ್) ವಿಜ್ಞಾನವನ್ನು ಒಂದು ತತ್ವಜ್ಞಾನವನ್ನಾಗಿ ರೂಪಿಸದರು ಇದು ರಾಜಕೀಯ ಬದಲಾವಣೆಗೆ ಹಾಗೂ ವಿಜ್ಞಾನಿಗಳಿಗೆ ಸಾಮಜಿಕ ಚಿಂತನೆ ಬೆಳೆಸುವಲ್ಲಿ ಕಾರಣವಾಯಿತು.
೪. ನ್ಯೂಟನ್, ಫ್ಯಾರಡೆ, ಕಣಗಳ(ಕ್ವಾಂಟಮ್) ಸ್ವರೂಪ ಮತ್ತದರ ಅಸ್ತಿತ್ವ ಹಾಗೂ ಶಕ್ತಿಯ ರಹಸ್ಯ ಬಿಡಿಸಿ ಭೌತಶಾಸ್ತ್ರದ ಉಚ್ರಾಯ ಸ್ಥಿತಿಗೆ ಕಾರಣರಾದರು ಆ ಮೂಲಕ ವಿಜ್ಞಾನ ಒಂದು ತಂತ್ರಜ್ಞಾನವಾಗಿ ಬೆಳೆಯಲು ವೇದಿಕೆ ಒದಗಿಸಿತು

೪. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವಿಜ್ಞಾನ (ಆಧುನಿಕ ವಿಜ್ಞಾನದ ಕಾಲ)
ಕ್ರಿ.ಶ.೧೯ ಶತಮಾನ - ಕ್ರಿ.ಶ ೨೦ನೇ ಶತಮಾನ - ತಂತ್ರಜ್ಞಾನದ ಯುಗ
ಆಧುನಿಕ ವಿಜ್ಞಾನ ಮತ್ತು ಆಧುನಿಕ ಸಮಾಜ ಪರಸ್ಪರ ಹೊಂದಿಕೊಂಡಿದೆ. ಆದರೆ ಮೊದಲು ಬೆಳೆದದ್ದು ಆಧುನಿಕ ವಿಜ್ಞಾನ ಈ ವಿಜ್ಞಾನ ಮಾನವ ಸಮಾಜವನ್ನು ಮೇಲ್ಸ್ಥರಕ್ಕೆ ಏರಿಸಿದೆ.
ಆಧುನಿಕ ವಿಜ್ಞಾನದ ಬೆಳವಣಿಗೆಗೆ ಪ್ರಮುಖ ಕಾರಣ "ಸಮುದ್ರಯಾನ" ಈ ಯಾನದ ಅನಿವಾರ್ಯತೆ ಉತ್ಪತ್ತಿ ಹೆಚ್ಚಿಸುವುದು ಮತ್ತು ಅದರ ವಿಲೆವಾರಿಗೆ ಮಾರುಕಟ್ಟೆ ಹುಡುಕುವುದು ಅದಕ್ಕಾಗಿ ಪ್ರಕೃತಿ ಶಕ್ತಿಯ ಅಧ್ಯಯನ ಮತ್ತು ಬಳಕೆಯ ಹಿನ್ನಲೆಯಲ್ಲಿ ಸಮುದ್ರಯಾನ ಆರಂಭವಾಯಿತು ಮತ್ತು ಅನಿವಾರ್ಯವೂ ಆಗಿತ್ತು.
ಸಮುದ್ರಯಾನಕ್ಕೆ ಮಾರುತಗಳ ವೇಗ, ಶಕ್ತಿ ಮತ್ತು ದಿಕ್ಕು ತಿಳಿಯುವುದು ಅವಶ್ಯವಾಗಿತ್ತು ಏಕೆಂದರೆ ಸಮುದ್ರಯಾನಕ್ಕೆ ಹಡಗು ಬಹಳ ಮುಖ್ಯ ಹಡಗಿನ ತಯಾರಿಕೆಯ ತಂತ್ರಜ್ಞಾನ ಹಾಗೂ ನಿಸರ್ಗದೊಂದಿಗೆ ಹೊಂದಾಣಿಕೆಗಾಗಿ ಸಂಶೋಧನೆ ಚುರುಕುಗೊಂಡಿತು. (ಸಾವಿರಾರು ಯಾತ್ರಿಕರು ಸಾಗರಯಾನದಲ್ಲಿ ದಿಕ್ಕು ತಪ್ಪಿ ಅಸ್ತವ್ಯಸ್ತತೆ, ಸಾವು-ನೋವು, ಹಿಂತಿರುಗಿ ಬರಲಾರದಂತಹ ವ್ಯವಸ್ಥೆಗೆ ತಲುಪಿದರು ಈ ಹಿನ್ನಲೆಯಲ್ಲಿ ಯೂರೋಪಿನಲ್ಲಿ ಬಂಡಲುಗಟ್ಟಲೆ ಸಾಹಸಯಾನದ ಸಾಹಿತ್ಯಗಳು ಬೀದಿ ಬೀದಿಯಲ್ಲಿ ಚೆಲ್ಲಾಡಿದವು [ರಾಬಿನ್ಸನ್‌ನ ಟ್ರೆಷರ್ ಐಲ್ಯಾಂಡ್, ಲಿಲಿಪುಟ್ & ದ ಗಲಿವರ್, ಕೋರಲ್ ಐಲ್ಯಾಂಡ್]
ಹಾಗಾಗಿ ಸಮುದ್ರಯಾನಕ್ಕೆ ಆಕಾಶದ ಅನಿವಾರ್ಯತೆ ಬಂದದ್ದರಿಂದ ಖಗೋಳವನ್ನು ಬೆಳೆಸಿತು. ಕೋಪರ್ನಿಕಸ್, ಗೆಲಿಲಿಯೋ ಕೆಪ್ಲರನ ಸಂಶೋಧನೆಗಳು ಈ ಹಿನ್ನಲೆಯಲ್ಲಿ ವಿಕಾಸಗೊಂಡವು.
ಮಾನವ ಸಮಾಜದ ಅಂದಿನ ಸವಾಲು ಶುದ್ಧ ವಿಜ್ಞಾನ ತಿಳಿಯಲು ಹೊರಟಿರಲಿಲ್ಲ ಪ್ರಪಂಚದ ರಚನೆ ಅರ್ಥೈಸಿಕೊಳ್ಳಲು ಹೊರಟಾಗ ಸ್ಥಾಪಿತ ವರ್ಗದ ಜ್ಞಾನ ಸಿದ್ಧಾಂಥ ತಡೆಯೊಡ್ಡಿದಾಗ ಅದನ್ನು ಒಡೆದು ಆಧುನಿಕ ವಿಜ್ಞಾನ ಬೆಳೆದು ಬಂತು
ಒಂದು ಕಡೆ ಟೆಲೆಸ್ಕೋಪು ದೂರ ದೂರದ ವಸ್ತುಗಳ ಪರಿಚಯಿಸುತ್ತಾ ಹೋದಹಾಗೆ ಮೈಕ್ರೋಸ್ಕೋಪು(ಲಿವನ್ ಹಾಬ್ಸ್) ಅತಿ ಸೂಕ್ಷ್ಮ ವಸ್ತುಗಳನ್ನು ಕತ್ತಲ ಲೋಕದಿಂದ ಬೆಳಕಿನ ಲೋಕಕ್ಕೆ ಎಳೆತಂದವು.
ಹಿಂದೆ ಜಡವಸ್ತುಗಳಿಮದ ಜೀವೋತ್ಪತ್ತಿ ಆಗುತ್ತದೆ ಎಂದು ತಿಳುವಳಿಕೆ ಇತ್ತು ಲೂಯಿಪಾಶ್ಚರ್ ಜೀವೋತ್ಪತ್ತಿ ನಿರ್ಜೀವದಿಂದಲ್ಲ ಜೀವದಿಂದಲೇ ಉಗಮ ಎಂದು ಪ್ರತಿಪಾದಿಸಿದ ಹೀಗಾಗಿ ಸೂಕ್ಷ್ಮ ಜೀವಿಶಾಸ್ತ್ರ ಜನ್ಮ ತಾಳಿತು ಈ ಸಂಶೋಧನೆ ದ್ರಾಕ್ಷಾರಸ ಹಾಳಾಗುವುದನ್ನು ತಪ್ಪಿಸಲು ಯೋಚಿಸುವಾಗ ಹುಟ್ಟಿಕೊಂಡಿತು ನಂತರದಲ್ಲಿ ಲಿವನ್ ಹಾಬ್ಸ್ ಸೂಕ್ಷ್ಮದರ್ಶಕ ಕಂಡುಹಿಡಿದ ಮೇಲೆ ಸೂಕ್ಷ್ಮ ಜೀವಿಯನ್ನು ಭೇದಿಸಿ ಅದರ ಜೀವಕೋಶದೊಳಗೂ ನುಗ್ಗಿತು. ಅದು ಎಲ್ಲಾ ಜೀವಿಗಳ ಜೀವಕೋಶ ಒಂದೇ ಎಂದು ಕ್ರಾಂತಿಕಾರಕ ಮಾಹಿತಿ ಒದಗಿಸಿತು.
ಜೀವಕೋಶ ಜೀವಶಾಸ್ತ್ರದ ಉಗಮಕ್ಕೆ ನಾಂದಿ ಹಾಡಿತು ಡಾರ್ವಿನ್ನನ ಸಂಶೋಧನೆಗೂ ಸ್ಪೂರ್ತಿ ನೀಡಿತು ಕಾರ್ಲಸ್ ಲಿನಿಯಸ್, ಲಮಾರ್ಕ್, ವ್ಯಾಲೆಸ್ ಎಲ್ಲರ ಶ್ರಮ ಹಾಗು ಎಲ್ಲ ಪ್ರಕಾರದ ವಿಜ್ಞಾನ ಮತ್ತು ವಿಜ್ಞಾನಿಗಳ (ಖಭೌತ, ಭೂಗೋಳ ಹಾಗೂ ಜೀವವಿಜ್ಞಾನ) ಶ್ರಮದಿಂದ ಜೀವವಿಕಾಸ ಹೊಸಯುಗದ ಕ್ರಾಂತಿಗೆ ನಾಂದಿ ಹಾಡಿತು.
ಎಡ್ವರ್ಡ್ ಜೆನ್ನರ್ ಆ ಕಾಲದ ಯೂರೋಪ್ ಭಿಕರವಾಗಿ ಅನುಭವಿಸುತ್ತಿದ್ದ ಸಿಡುಬು ರೋಗಕ್ಕೆ ಧಾರ್ಮಿಕ ಕಾರಣ, ಕರ್ಮಸಿದ್ಧಾಂತವನ್ನು ಭೇದಿಸಿ ಕಾರಣ ಕಂಡು ಹಿಡಿದು ಸರಳ ಔಷದ ಕಂಡು ಹಿಡಿದಾಗ ಜನ ಚರ್ಚಿಗೆ ಸವಾಲು ಹಾಕಿ ವಿಜ್ಞಾನ ಒಪ್ಪಿಕೊಳ್ಲಲು ಆರಂಭ, ಒಂದೊಂದಾಗಿ ವಿಜ್ಞಾನದ ಸ್ಪೋಟ ಹಳೆಯ ಜ್ಞಾನವನ್ನು ಚಿಂದಿ ಚಿಮದಿ ಮಾಡಿ ಹೊಸ ಅರಿವಿನ ಸ್ಪೋಟಕ್ಕೆ ಕಾರಣವಾಯಿತು.
ವಿಜ್ಞಾನದ ಸ್ಪೋಟ ಧರ್ಮಾಧಾರಿತ ತತ್ವಶಾಸ್ತ್ರ ಮತ್ತು ವಿಜ್ಞಾನಾಧಾರಿತ ತತ್ವಶಾಸ್ತ್ರದ ನಡುವೆ ಸಂಘರ್ಷ ಸೃಷ್ಠಿಸಿ
೧. ಅರಿವಿನ ಸ್ಪೋಟ ಸಮಾಜ ಹೇರಿದ ಮಿತಿಯನ್ನು ಮೀರಿ ಅದರ ಕುಬ್ಜತೆ ಒಡೆದು ಹಾಕಿ ಮಾನವನ ಹುಟ್ಟು ಮತ್ತು ರಚನೆ ಒಂದೇ ಎಂದು ಸಾಧಿಸಿತು.( ಫ್ರಾನಸಿಸ್ ಬೇಕನ್: ಮಾನವನ ತಿಳುವಳಿಕೆ ಪಂಚೇಂದ್ರಿಯ ಜನ್ಯ ಇದು ಹಾಬ್ಸ್, ರೂಸೋ, ವಾಲ್ಟೇರ್ ಚಿಂತನೆ ಫ್ರಾನ್ಸ್ ಕ್ರಾಂತಿಗೆ ನಾಂದಿ-೧೭೮೦ ಅದಕ್ಕೂ ಮೊದಲು ಅಮೇರಿಕದ ಕ್ರಾಂತಿ-೧೭೬೫)
೨. ಮಾನವನ ಎಲ್ಲ ಜ್ಞಾನಕ್ಕೂ ಪಂಚೇಂದ್ರಿಯಗಳೆ ಕಾರಣ [ಶಂಕರಾಚಾರ್ಯ: ಜಗನ್ಮಿತ್ಯ ಬ್ರಹ್ಮ ಸತ್ಯ, ಆತ್ಮ ಪರಮಾತ್ಮ, ಮೇಲ್ವರ್ಗದವರದು ನೀಲಿ ರಕ್ತ, ಜೀತಗಾರರದು-ಕೆಂಪು ರಕ್ತ, ರಾಜ ಪ್ರತ್ಯಕ್ಷ ದೇವತ, ಆಡಂ-ಈವ್ ಎಲ್ಲ ಬೊಗಳೆ]
೩. ನಿರಂಕುಶ ಪ್ರಭುತ್ವವನ್ನು ನಾಶ ಮಾಡಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿತು ಮಾತ್ರವಲ್ಲ ಜಗತ್ತಿನಲ್ಲಿ ಕಾರ್ಮಿಕ ವರ್ಗ ಎಂಬ ಹೊಸ ಸಮುದಾಯವನ್ನೇ ಸೃಷ್ಟಿಸಿತು

೫. ಇಂದಿನ(೨೧ನೇ ಶತಮಾನದ) ಸಮಕಾಲೀನ ವಿಜ್ಞಾನದ ಬೆಳವಣಿಗೆ
ಗೆಲಿಲಿಯೋ, ಕೆಪ್ಲರ್, ನ್ಯೂಟನ್............. ಏಕವ್ಯಕ್ತಿ ಸಂಶೋಧನೆ, ಈಗ ಸಾಮೂಹಿಕ ಸಂಶೋಧನೆಯ ಕಾಲ ಸಂಶೋಧನೆಯಲ್ಲಿ ಕೋಟ್ಯಾಂತರ ವುಕ್ತಿಗಳು ಭಾಗಿ ಹೀಗಾಗಿ ದಿನಂಪ್ರತಿಸಂಶೋಧನೆಗಳಾಗುತ್ತಿವೆ. ಅದರ ವೇಗವೂ ಕೂಡ ಸಹಸ್ರಪಟ್ಟು ಹೆಚ್ಚು.
ಕ್ವಾಂಟಮ್ ಭೌತಶಾಸ್ತ್ರ, ಸಾಪೇಕ್ಷತಾ ಸಿದ್ದಾಂತ ವಸ್ತವುವಿನ ಮೂಲರಚನೆಯ ಗರ್ಭವನ್ನು ಸೀಳಿ ದೈವ ಸಿದ್ಧಾಂತವನ್ನು ಒಡೆದು ಹಾಕಿದೆ ಹಾಗಾಗಿ ಹಿಗ್ಸ್ ಬೋಸಾನ್, ಲಾರ್ಜಹೆಡ್ರಾನ್ ಕೊಲೈಡರ್ ಪ್ರಯೋಗ ವಿಶ್ವ ಸೃಷ್ಠಿಗೆ ಜಗನ್ನಾಟಕ ಸೂತ್ರದಾರಿ ಅಲ್ಲವೇ ಅಲ್ಲ ಎಂಬುದನ್ನು ಸಾಧಿಸಿದೆ. ಐನಸ್ಟೀನ್,ಮ್ಯಾಕ್ಸ್ ಫ್ಲಾಂಕ್, ನೀಲ್ಸ್ಬೋರ್, ಸ್ಟೀಫನ್ ಹಾಕಿಂಗ್ ವಿಜ್ಞಾನವನ್ನು ನೆಲಮಟ್ಟಕ್ಕೆ ಇಳಿದರು.
ಜೀನೋಮ್ ತಂತ್ರಜ್ಞಾನ ಮಾನವ ಹಾಗೂ ಎಲ್ಲಾ ಜೀವಿಗಳ ಹುಟ್ಟಿನ ಮೂಲ ಎಂದ ಜೀವಶಾಸ್ತ್ರದ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿ ಜೀವ ತಂತ್ರಜ್ಞಾನವಾಗಿ(ಬಯೋ ಟೆಕ್ನಾಲಜಿ) ರೂಪಿಸಿದೆ ಇದು ೨೧ನೇ ಶತಮಾನದ ಸರ್ವಶ್ರೇಷ್ಠ ಸಂಶೋಧನೆ ಎಂದು ಪ್ರಸಿದ್ಧಿಗಳಿಸಿದೆ ಹಾಗಾಗಿ ಕ್ಲೋನಿಂಗ್, ಸರೋಗೇಟ್ ತಾಯ್ತನ... ಮಾಡಲುಸಹಾಯಕವಾಗಿ ಬಂಜೆತನ ದೂರ ಮಾಡಲು ಸಾಧ್ಯವಾಗಿದೆ.
ಕಂಪ್ಯೂಟರ್- ಸೂಪರ್ ಕಂಪ್ಯೂಟರ್-ಅಂತರಜಾಲ ತಂತ್ರಜ್ಞಾನ ನಭೋಮಂಡಲದ ಸಿದ್ದಾಂತದ ಮೂಲಕ ಧರೆಯಾವರಿಸಿದೆ.
ತಾಯಿಯ ಜೀವಾಂಕುರದ ಮೈಟೋಕಾಂಡ್ರಿಯಾದಲ್ಲಿರುವ ಶಕ್ತಿಕಣಗಳನ್ನು ಸಮಗ್ರವಾಗಿ ಅಧ್ಯಯನಮಾಡಿ ಮಾನವನ ಹುಟ್ಟಿನ ಮೂಲ ಆಫ್ರಿಕ ಎಂದು ಸಾಧಿಸಿದೆ ಡಾರ್ವಿನ್ ವಿಕಾಸವಾದ ಸತ್ಯ ಎಂದು ತೋರಿಸಿದೆ. ಪಂಪನ ಮಾನವ ಕುಲ ತನೊಂದೇ ವಲಂ ಸಾರ್ಥಕ್ಯ ಪಡೆದಿದೆ.
ಮಾನವನ ಕೃಷಿ ಚಟುವಟಿಕೆಗೆ ಅರಬ್ಬಿ ಸಮುದ್ರ ಇಲ್ಲವೇ ಬಂಗಾಳಕೊಲ್ಲಿ ಕಾರಣ ಎಂ ತಿಳುವಳಿಕೆ ದೂರವಾಗಿ ಇಡಿ ವಿಶ್ವದ ಮಾರುತಗಳ ಚಲನೆ ಜಲಗೋಳದಲ್ಲಾಗುವ ಬದಲಾವಣೆಗೆ ಕಾರಣ, ಸಾಗರದ ಅಬ್ಬರದ ನಡುವೆ ಏಳುವ ಪ್ರವಾಹ, ಚಂಡಮಾರುತಗಳಿಗೆ ಎಲ್ನಿನೋ ಮತ್ತು ಲಾನಿನ ಉಷ್ಣೂದಕ ಪ್ರವಾಹ ಕಾರಣ ಎನ್ನುವ ಸತ್ಯವನ್ನು ಇಂದಿ ಹವಾಮಾನ ವಿಜ್ಞಾನ ತೆರೆದು ತೋರಿಸಿದೆ.
ಇಂಜಿನೀಯರಿಂಗ್, ವೈದ್ಯಕೀಯ ವಿಜ್ಞಾನ ಎಂತಹ ವಿಷಮ ಪರಿಸ್ಥಿಯಲ್ಲೂ ಸಮಾಜದ ಆಸರೆಯಾಗಿ ನಿಂತಿವೆ.
ಇವೆಲ್ಲದರ ಫಲವಾಗಿ ವಿಜ್ಞಾನ ವೇಗವಾಗಿ ಮತ್ತು ವಿಸ್ತಾರವಾಗಿ ಬೆಳೆಯುತ್ತಿದೆ ಆದರೆ ವಿಜ್ಞಾನದ ಸಂಶೋಧನೆ ಮತ್ತು ವಿಸ್ತಾರ ನಮ್ಮ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತಿದೆ? ಮತ್ತು ಬೀರಬೇಕು?

Wednesday, 18 June 2014
world Earth day & Resourse center inaguration
ಬಿಜಿವಿಎಸ್ ಸಂಪನ್ಮೂಲ ಕೇಂದ್ರ ಉದ್ಘಾಟನೆ ಹಾಗೂ ವಿಶ್ವ ಭೂದಿನಾಚರಣೆ.
ಜಾಗತೀಕರಣದ ಶಕೆಯಿಂದ ಮೂಲವಿಜ್ಞಾನದ ಕಲಿಕೆ ಮೂಲೆಗುಂಪಾಗಿ ಕೇವಲ ಅನ್ವಯಿಕ ವಿಜ್ಞಾನಕ್ಕೆ ಮಾತ್ರ ಕಲಿಕಾ ಮಹತ್ವ ನೀಡಲಾಗುತ್ತಿದೆ. ಹಾಗಾಗಿ ಕೇವಲ ಇಂಜಿನೀಯರು ಮತ್ತು ಡಾಕ್ಟರುಗಳೇ ದೇಶದಲ್ಲಿ ಉತ್ಪತ್ತಿಯಾಗಿ ನಿರುದ್ಯೋಗ ಕುಂಡದಲ್ಲಿ ಸೇರಿಸಲಾಗುತ್ತಿದೆ. ನೈಜ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಬ್ಯುದಯಕ್ಕೆ ಬೇಕಾದ ಸಂಶೋಧನೆ, ಮಾನವಿಕ ವಿಜ್ಞಾನ ಹಾಗೂ ಜ್ಞಾನ ಸಂಪನ್ಮೂಲ ಸೃಷ್ಠಿಯಾಗುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಧರ್ಮೆಶ್ ಅಭಿಪ್ರಾಯ ಪಟ್ಟರು. ಅವರು ಇತ್ತೀಚೆಗೆ ನಗರದ ಎಸ್.ಜಿ.ಆರ್.ಶಾಲಾವರಣದಲ್ಲಿನ ಬಿಜಿವಿಎಸ್ ಕಚೇರಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನ ಜಿಲ್ಲ್ಲಾ ಸಮಿತಿಯು ಆಯೋಜಿಸಿದ್ದ ಬಿಜಿವಿಎಸ್ ಸಂಪನ್ಮೂಲ ಕೇಂದ್ರ ಹಾಗೂ ವಿಶ್ವ ಭೂದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಾಸನ ಜಿಲ್ಲೆಯ ಬೆಳೆ ಹಾಗೂ ಮಳೆಯ ಪ್ರಮಾಣ, ಅಂತರ್ಜಲ, ಪರಿಸರ, ನೈರ್ಮಲ್ಯ ಹಾಗೂ ಶೈಕ್ಷಣಿಕ ಸ್ಥಿಗತಿಗಳ ಕುರಿತು ಸಂಪನ್ಮೂಲ ಕೇಂದ್ರ ಅಧ್ಯಯನ ಮಾಡಬೇಕು ಹಾಗೂ ಜಿಲ್ಲೆಯ ಸಮಗ್ರ ಸಂಪನ್ಮೂಲ ನಕಾಷೆಯನ್ನು ಸಿದ್ಧಪಡಿಸುವ ಯೋಜನೆ ರೂಪಿಸಬೇಕು ಹಾಗೂ ಹಾಸನ ಜಿಲ್ಲೆಯ ವಿದ್ಯಾರ್ಥಿಗಳ ಬೋಧನಾ ಸಾಮರ್ಥ್ಯಕ್ಕೆ ಒತ್ತಾಸೆಯಾಗಿ ಸಂಪನ್ಮೂಲ ಕೇಂದ್ರ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಲೆನಾಡು ಜನಪರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್ ಮಾತನಾಡಿ ಜಾಗತಿಕ ತಾಪಮಾನ ಏರಿಕೆಯಿಂದ ಭೂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ನಮ್ಮ ಅರಿವಿಗೆ ಬರುತ್ತಿದೆ. ಈ ಜಾಗತಿಕ ತಾಪಮಾನ ಹಾಸನ ಜಿಲ್ಲೆಯ ಕೃಷಿ, ಮಳೆ ಹಾಗೂ ಬದುಕಿನ ಮೇಲೆ ಬೀರಿರುವ ಪರಿಣಾಮದ ಕುರಿತು ಅಧ್ಯಯನ ನಡೆಯಬೇಕಿದೆ ಈ ಕಾರ್ಯವನ್ನು ಬಿಜಿವಿಎಸ್‌ನಂತಹ ಸಂಘಟನೆಗಳು ಹಾಸನದಲ್ಲಿರುವ ವಿವಿಧ ವಿಷಯ ಪರಿಣಿತರ ಸಹಕಾರದಿಂದ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಸಂಪನ್ಮೂಲ ಕೇಂದ್ರ ವಿವಿಧ ಜನಪರ ಸಂಘಟನೆಗಳ ವಿಶಾಲ ಸಂಪನ್ಮೂಲ ಕೇಂದ್ರವನ್ನು ಕಟ್ಟಬೇಕು ಎಂದು ತಿಳಿಸಿದ ಅವರು ಬಿಜಿವಿಎಸ್‌ನ ಮುತುವರ್ಜಿಯಿಂದ ಅಧ್ಯಯನ ವೃತ್ತ, ಅನಿಸಿಕೆ-ಅಭಿವ್ಯಕ್ತಿ, ಸಾಂಸ್ಕೃತಿಕ ಸಂವಹನದಂತಹ ನಿಗಧಿತ ಚಟುವಟಿಕೆಗಳು ನಿರಂತರವಾಗಿ ನಗರದಲ್ಲಿ ನಡೆಯುತ್ತಿದೆ ಈ ಚಟುವಟಿಕೆ ತಾಲೋಕು ಕೇಂದ್ರಗಳಿಗೂ ವಿಸ್ತರಿಸಬೇಕು ಆಗ ಜನರಲ್ಲಿ ವಿಮರ್ಷಾಗುಣ, ಮಾತನಾಡುವ ಕಲೆ ಹಾಗೂ ಸಂಪನ್ಮೂಲ ವ್ಯಕ್ತಿಗಳ ಸೃಷ್ಠಿಗೆ ಕಾರಣವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು ಮಾತನಾಡಿ. ಇಂದು ಜನರಿಗೆ ವಿಜ್ಞಾನದ ಆವಿಷ್ಕಾರಗಳು ಅವರ ಬದುಕನ್ನು ಸಾಗಿಸಲು ಅನಿವಾರ್ಯವಾಗಿ ಬೇಕಾಗಿದೆ ಆದರೆ ಈ ಆವಿಷ್ಕಾರಗಳು ದುಬಾರಿ ಹಣಕೊಟ್ಟು ಕೊಂಡುಕೊಂಡ ಫಾರ್ಮುಲ ಮತ್ತು ಪೇಟೆಂಟುಗಳಾಗಿವೆ ಇದು ಭಾರತದಂತಹ ದೇಶಕ್ಕೆ ಅತ್ಯಂತ ಕಷ್ಟದಾಯಕ ಹಾಗಾಗಿ ಭಾರತದಲ್ಲಿಯೇ ಆವಿಷ್ಕಾರಗಳು ಆಗಬೇಕೆಂದರೆ ವಿಜ್ಞಾನ ಇಲ್ಲಿಯೇ ಅರಳಬೇಕು ಹಾಗಾಗಲು ಮೊದಲು ಜ್ಞಾನ ಸಂಪಾದನೆ ನಂತರ ಆ ಜ್ಞಾನ ವೈಜ್ಞಾನಿಕ ಮನೋಧರ್ಮದಲ್ಲಿ ವಿಕಾಸಿಸಬೇಕು ಈ ಕೆಲಸವನ್ನು ನಮ್ಮ ಯಾವ ಶಿಕ್ಷಣ ಪ್ರಾಕಾರವೂ ಮಾಡುತ್ತಿಲ್ಲ ಹಾಗಾಗಿ ಸಂಪನ್ಮೂಲ ಕೇಂದ್ರ ಶಾಲಾಹಂತದಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸಲು ಪ್ರೇರೇಪಿಸುವ ಸಲುವಾಗಿ ಸಂಪನ್ಮೂಲ ಕೇಂದ್ರ ತರೆದಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ವಿಜ್ಞಾನ ಸಂವಹನ ಜಿಲ್ಲಾ ಸಂಚಾಲಕ ಅಹಮದ್‌ಹಗರೆ ಮಾತನಾಡಿ ಈಗಾಗಲೆ ನಗರದಲ್ಲಿ ಬಾಲವಿಜ್ಞಾನಿ, ಅನಿಸಿಕೆ-ಅಭಿವ್ಯಕ್ತಿ, ಅಧ್ಯಯನವೃತ್ತ ಚಟುವಟಿಕೆಗಳು ಜ್ಞಾನಾಬ್ಯುದಯದ ನೆಲೆಗಟ್ಟಿನಲ್ಲಿ ನಡೆಯುತ್ತಿದೆ ಈ ಚಟುವಟಿಕೆಗಳ ಸಮಗ್ರ ರೂಪದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಜಿಲ್ಲೆಯಲ್ಲಿ ಸೃಷ್ಠಿಸಲು ಹಾಗೂ ಜಿಲ್ಲೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಮಾಹಿತಿಯನ್ನು ಹೊಸ ಪೀಳಿಗೆಗೆ ವರ್ಗಾಯಿಸಲು ಈ ಕೇಂದ್ರ ತೆರೆಯಲಾಗಿದೆ ಇದರ ಭಾಗವಾಗಿ ಭೂದಿನಾಚರಣೆಯ ಮಹತ್ವ ಹಾಗೂ ಭೂಗ್ರಹವನ್ನು ಜನಸಾಮಾನ್ಯರೂ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ತಿಳಿಸಿ ಭೂಮಿಯ ವಿಕಾಸ, ಬೆಳವಣಿಗೆ, ಕ್ರಿಯಾತ್ಮಕತೆಯನ್ನು ವಿವರಿಸುವ ವಸುಂಧರೆಯ ವೈಭವ ಕುರಿತು ಪಿ.ಪಿ.ಟಿ. ವಿವರಣೆ ನೀಡಿದರು.
ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಬಿಜಿವಿಎಸ್ ಜಿಲ್ಲಾ ಸಹಕಾರ್ಯದರ್ಶಿ ಮಮತಶಿವು ವಂದಿಸಿದರು.

Tuesday, 17 June 2014
APPLICATION FOR ATTENDING ENV W/S AT Hassan
ಮಾನ್ಯರೆ,
ವಿಷಯ: ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಹವಾಮಾನ ಬದಲಾವಣೆ ಪರಿಸರ ಅಧ್ಯಯನ ಶಿಬಿರಕ್ಕೆ ಆಹ್ವಾನಿಸಿ
ಗಣನೀಯ ಪ್ರಮಾಣದಲ್ಲಿ ಭೂಮಿಯ ತಾಪಮಾನ ಏರುತ್ತಿರುವುದರಿಂದ ಭೂಮಿಯ ಮೇಲೆ ಜೀವಿಗಳ ಅಸ್ತಿತ್ವದ ಮೇಲೆ ಕರಾಳ ಪರಿಸ್ಥಿತಿ ಸಂಭವಿಸುವ ಅಪಾಯದ ಕರೆಗಂಟೆ ದೊರೆತಿದೆ ಎಂಬುದು ಸಂಶೋಧನೆ ಹಾಗೂ ಅನುಭವಗಳಿಂದ ರುಜುವಾತಾಗಿದೆ. ಮಾನವ ಹಾಗೂ ಇತರೆ ಸಹ ಜೀವಿಗಳ ಅಸ್ತಿತ್ವದ ಪ್ರಶ್ನೆ ಮತ್ತು ಅನಿವಾರ್ಯತೆಯಿಂದ ಭೂತಾಪಮಾನದ ಮಿತಿಯನ್ನು ಕಾಯ್ದುಕೊಳ್ಳಲು ಜಾಗತಿಕ ಸಮುದಾಯ ಎಚ್ಚರಗೊಂಡಿರುವುದು ಸರಿ ಈ ಹಿನ್ನಲೆಯಲ್ಲಿ ಸಾಕಷ್ಟು ರಾಜತಾಂತ್ರಿಕ ಚರ್ಚೆ, ಸಲಹೆ ಹಾಗೂ ಮುಂದಿನ ಹೆಜ್ಜೆಗಳನ್ನು ಇಡಲು ಭಿನ್ನ ಭಿನ್ನ ಅಭಿಪ್ರಾಯಗಳು ಬಂದಿವೆ.
ಈ ಹಿನ್ನಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ದೇಶಾದ್ಯಂತ ವಿವಿಧ ಸ್ಥರಗಳಲ್ಲಿ ಈ ಕುರಿತು ಸ್ಥಳಿಯ ಅಧ್ಯಯನ ಹಾಗೂ ಜನಜಾಗೃತಿ ಮೂಡಿಸಲು ಶ್ರಮಿಸುತ್ತಿದೆ, ಈ ಸಂಬಂಧ ಹಾಸನ ತಾಲೋಕು ಸಮಿತಿಯು ಪರಿಸರ ಕಾಳಜಿ ಉಳ್ಳ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಲೋಕಿನ ಯುವಜನರಿಗಾಗಿ ಹವಾಮಾನ ಬದಲಾವಣೆ ಮತ್ತು ಪರಿಸರ ಅಧ್ಯಯನ ಕುರಿತ ಕಾರ್ಯಾಗಾರವನ್ನು ದಿನಾಂಕ:೨೫/೦೬/೨೦೧೪ರ ಬೆಳಗ್ಗೆ ೯ಗಂಟೆಯಿಂದ ಸಂಜೆ ೫ ಗಂಟೆಯವರಗೆ ಹಾಸನದಲ್ಲಿ ಹಮ್ಮಿಕೊಂಡಿದೆ. ಸದರಿ ಕಾರ್ಯಾಗಾರದಲ್ಲಿ ಪರಿಸರ, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ, ಹವಾಮಾನ ಬದಲಾವಣೆ, ಶಕ್ತಿ ನಿರ್ವಹಣೆ, ಇಕೋ ಕ್ಲಬ್ ಚಟುವಟಿಕೆ ವಿಷಯಗಳನ್ನು ಪಿಪಿಟಿ, ಆಟ-ಹಾಡು ಹಾಗೂ ಸಂಶೋಧನಾ ಚಟುವಟಿಕೆಗಳ ರೂಪದಲ್ಲಿ ತರಬೇತಿ ನೀಡಲಾಗುವುದು.
ಈ ಕಾರ್ಯಗಾರಕ್ಕೆ ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಆಸಕ್ತ ಯುವಜನ ಅರ್ಜಿಯನ್ನು ಭರ್ತಿಮಾಡಿ ದಿನಾಂಕ:೨೨/೦೬/೨೦೧೪ರೊಳಗೆ ಕಾರ್ಯದರ್ಶಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಎಸ್.ಜಿ.ಆರ್ ಶಾಲಾವರಣ ಹೊಸಲೈನ್ ರಸ್ತೆ, ಉತ್ತರ ಬಡಾವಣೆ, ಹಾಸನ-೫೭೩೨೦೧ ಅಂಚೆ, ಈಮೇಲ್ ಅಥವ ಮುದ್ದಾಂ ಕಳುಹಿಸಿಕೊಡಲು ಕೋರಿದೆ.
v ಈ ಶಿಬಿರವು ಉಚಿತವಾಗಿದ್ದು ಪರಿಸರ ಆಸಕ್ತರಿಗೆ ಮಾತ್ರವಾಗಿರುತ್ತದೆ ಹಾಗೂ ಕೇವಲ ೪೦ಜನರಿಗೆಮಾತ್ರ ಸೀಮಿತಗೊಳಿಸಲಾಗಿದೆ.
v ನಿಗದಿತ ಅರ್ಜಿನಮೂನೆ ಮೆಲ್ಕಾಣಿಸಿದ ವಿಳಾಸದಲ್ಲಿ ದೊರೆಯಲಿದೆ ಮತ್ತು
sciencemessenger.blogspot.in bgvshassandistrict.blogspot.in ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು ಅಥವ ಮಾದರಿಯಲ್ಲಿ ಭರ್ತಿಮಾಡಿ ಈ ಮೇಲ್ ಮೂಲಕವೂ ಸಲ್ಲಿಸಬಹುದು, ಈ ಮೇಲ್ ವಿಳಾಸ
bgvs.hsn@rediffmail.com
೧. ವಿದ್ಯಾರ್ಥಿ/ಯುವಜನರಲ್ಲಿ ಪರಿಸರದ ಬಗ್ಗೆ ಪ್ರೀತಿ ಬೆಳೆಸುವುದು ಹಾಗೂ ಪರಿಸರ ತಜ್ಞರನ್ನಾಗಿ ರೂಪಿಸುವುದು.
೨. ಶಾಲೆಗಳ ವಿಜ್ಞಾನ ಹಾಗೂ ಪರಿಸರ ಸಂಘಗಳನ್ನು ಬಲಪಡಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವುದು, ಹಾಗೂ ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗುವ ವ್ಯತಿರಿಕ್ತ ಪರಿಣಾಮಗಳ ಮಾಹಿತಿ ಹಾಗೂ ಮಿತ ಬಳಕೆಯ ಕುರಿತು ಪ್ರಚಾರೋಂದಲನ ನಡೆಸುವುದು.
೩. ಹವಾಮಾನ ಬದಲಾವಣೆಯಲ್ಲಿ ಪರಿಸರ ಮಲಿನತೆಯ ಪಾತ್ರ ಹಾಗೂ ಭಾರತ ಸರ್ಕಾರವು ಹಾಕಿಕೊಂಡಿರುವ ಯೋಜನೆಗಳ ಪರಿಚಯವನ್ನು ಜನತೆಗೆ ಮಾಡಿಸುವುದು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇಪಿಸುವುದು.
೪. ಪಕ್ಷಿ ಹಾಗೂ ನಿಸರ್ಗ ವೀಕ್ಷಣಾ ಮತ್ತು ಅಧ್ಯಯನ ತಂಡದಲ್ಲಿ ಸಂಪನ್ಮೂಲವ್ಯಕ್ತಿ/ಅಧ್ಯಯನಕಾರರನ್ನಾಗಿ ರೂಪಿಸುವುದು.
(ಜಯಪ್ರಕಾಶ)
ಕಾರ್ಯದರ್

v ಹೆಚ್ಚಿನ ವಿವರಕ್ಕಾಗಿ ಮೇಲಿನ ವಿಳಾಸ ಅಥವ ಈ ನಂಬರುಗಳಿಗೆ
9844097010, 9481492407, 9448346828 ಕರೆಮಾಡಿ ಪಡೆದುಕೊಳ್ಳಬಹುದು.
ಗುರಿಗಳು೧. ವಿದ್ಯಾರ್ಥಿ/ಯುವಜನರಲ್ಲಿ ಪರಿಸರದ ಬಗ್ಗೆ ಪ್ರೀತಿ ಬೆಳೆಸುವುದು ಹಾಗೂ ಪರಿಸರ ತಜ್ಞರನ್ನಾಗಿ ರೂಪಿಸುವುದು.
೨. ಶಾಲೆಗಳ ವಿಜ್ಞಾನ ಹಾಗೂ ಪರಿಸರ ಸಂಘಗಳನ್ನು ಬಲಪಡಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವುದು, ಹಾಗೂ ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗುವ ವ್ಯತಿರಿಕ್ತ ಪರಿಣಾಮಗಳ ಮಾಹಿತಿ ಹಾಗೂ ಮಿತ ಬಳಕೆಯ ಕುರಿತು ಪ್ರಚಾರೋಂದಲನ ನಡೆಸುವುದು.
೩. ಹವಾಮಾನ ಬದಲಾವಣೆಯಲ್ಲಿ ಪರಿಸರ ಮಲಿನತೆಯ ಪಾತ್ರ ಹಾಗೂ ಭಾರತ ಸರ್ಕಾರವು ಹಾಕಿಕೊಂಡಿರುವ ಯೋಜನೆಗಳ ಪರಿಚಯವನ್ನು ಜನತೆಗೆ ಮಾಡಿಸುವುದು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇಪಿಸುವುದು.
೪. ಪಕ್ಷಿ ಹಾಗೂ ನಿಸರ್ಗ ವೀಕ್ಷಣಾ ಮತ್ತು ಅಧ್ಯಯನ ತಂಡದಲ್ಲಿ ಸಂಪನ್ಮೂಲವ್ಯಕ್ತಿ/ಅಧ್ಯಯನಕಾರರನ್ನಾಗಿ ರೂಪಿಸುವುದು.
(ಜಯಪ್ರಕಾಶ)
ಕಾರ್ಯದರ್
Friday, 30 May 2014
election 2014 a review
ಇತ್ತೀಚೆಗೆ ನಡೆದ ೧೬ನೆ ಲೋಕಸಭೆಯ ಮಹಾಚುನಾವಣೆ ಭಾರತದ ಚುನಾವಣಾ ಇತಿಹಾಸದಲ್ಲೇ ನಡೆದ ಅತ್ಯಂತ ವಿಶಿಷ್ಠ ಹಾಗೂ ವ್ಯಕ್ತಿ ಕೇಂದ್ರಿತ ಅಧ್ಯಕ್ಷೀಯ ಮಾದರಿಯ ಅಪಾಯಕಾರಿ ಚುನಾವಣೆ. ಈ ಚುನಾವಣೆಯಲ್ಲಿ ಬಿಜೆಪಿಗಿಂತ ಮಾಧ್ಯಮಗಳು ಹೆಚ್ಚು ವಿಜಯ ಸಾಧಿಸಿವೆ ಹಾಗಾಗಿ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ದೇಶದ ಹೆರಾಂತ ಪತ್ರಕರ್ತ ಡಾ.ಸಾಯಿನಾಥ್ ಹೇಳಿದಂತೆ ಈ ಚುನಾವಣೆಯಲ್ಲಿ ಮೀಡಿಯಾ ಸುನಾಮಿ ಸೃಷ್ಠಿಸಿತು ಎಂದು ಪತ್ರಕರ್ತ ಸತೀಶ್.ಎಚ್.ಜಿ ವಿಶ್ಲೇಷಿದರು. ಅವರು ನಿನ್ನೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಯನ ವೃತ್ತವು ಆಯೋಜಿಸಿದ್ದ ಚುನಾವಣಾ ವಿಮರ್ಷೆಯಲ್ಲಿ ವಿಷಯ ಮಂಡಿಸಿ ಮಾತನಾಡುತ್ತಿದ್ದರು.
ಕಾಂಗ್ರೇಸ್ ನೇತೃತ್ವದ ಯು.ಪಿ.ಎ. ಸರ್ಕಾರದ ೧೦ ವರ್ಷಗಳ ಲಂಗುಲಗಾಮಿಲ್ಲದ ಮಹಾನ್ ಬ್ರಷ್ಠ ಆಡಳಿತ ಹಾಗೂ ಮೂರನೇ ರಂಗದ ನಿಷ್ಕ್ರಿಯತೆ ಹಾಗೂ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಹಿಂದೂ ಮತಗಳ ಧೃವೀಕರಣ ಬಿಜೆಪಿಯನ್ನು ಅತ್ಯಧಿಕ ಸ್ಥಾನಗಳಿಂದ ಗೆಲ್ಲಿಸುವಲ್ಲಿ ನಿಣಾಯಕ ಪಾತ್ರವಹಿಸಿದವು ಜೊತೆಗೆ ಯುವಜನತೆ, ಮಾಧ್ಯಮ ಹಾಗೂ ಬಿಜೆಪಿ ಮಾತೃ ಸಂಸ್ಥೆ ನೇರವಾಗಿ ಚುನಾವಣಾ ರಂಗಕ್ಕೆ ಇಳಿದು ಸಹಕಾರಿಯಾದವು. ಈ ಚುನಾವಣೆಯಲ್ಲಿ ಮಾಧ್ಯಮಗಳು ಜನರನ್ನು ಏಕ ವ್ಯಕ್ತಿಕಡೆ ಸಮ್ಮೋಹಿತ ಗೊಳಿಸಿದವು ಈ ಸಮ್ಮೋಹನಗೊಳಿಸುವ ಕೆಲಸದಲ್ಲಿ ಮಾಧ್ಯಮಗಳ ನೀತಿಯನ್ನು ಮೀರಿ ಮೊದಲ ಬ್ರಷ್ಟಾಚಾರಿಗಳಾದವು ಈ ದೇಶದಲ್ಲಿ ಸುಮಾರು ೩೯೦ಕ್ಕೂ ಅಧಿಕ ಮಾಧಮಗಳಿವೆ ಅದರಲ್ಲಿ ಕೇವಲ ೧೦ ರಿಂದ ೧೫ ಮುಖ್ಯವಾಹಿನಿಗಳು ಮಾತ್ರ ಮೋದಿ ಪರವಾದ ಅಲೆಯನ್ನು ಸೃಷ್ಠಿಸಿ ನೇರ ಚುನಾವಣೆ ನಡೆಸಿದವು ಅದಕ್ಕೆ ಪ್ರತಿಯಾಗಿ ಸಾವಿರಾರು ಕೋಟಿ ರೂಗಳನ್ನು ಜಾಹಿರಾತಿನ ಮೂಲಕ ಆದಾಯಗಳಿಸಿದವು ಎಂದು ತಿಳಿಸಿದ ಅವರು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಬಹುದಾದ ಇನ್ನೊಂದು ವರ್ಗ ಬುದ್ದಿ ಜೀವಿಗಳದ್ದು ಅದು ತನ್ನ ಬೌಧ್ಧಿಕ ದಿವಾಳಿಕೋರತನದಿಂದ ಯುವಜನತೆಯನ್ನು ಶಿಕ್ಷಿತರಾಗಿಸುವಲ್ಲಿ ವಿಫಲಗೊಂಡಿತು ಮಾತ್ರವಲ್ಲ ಕಾಂಗ್ರೆಸ್ಸಿನ ಏಜೆಂಟರಂತೆ ವರ್ತಿಸಲಾರಂಬಿಸಿದರು ಎಂದರು.
ಆರ್.ಎಸ್.ಎಸ್.ನ ಪ್ರಚಾರಕ ಮೋಹನ್ ಭಾಗವತ್ ಈ ಬಾರಿ ಬಿಜೆಪಿ ಗೆಲ್ಲದಿದ್ದರೆ ಇನ್ನು ನೂರು ವರ್ಷ ಗೆಲ್ಲಲಾರದು ಹಾಗಾಗಿ ಯಾವ ಮಾನದಂಡವಾದರು ಬಳಸಿ, ಯಾವ ಬೆಲೆಯನ್ನಾದರೂ ತೆತ್ತಿ ಈ ಚುನಾವಣೆ ಗೆಲ್ಲಲೇ ಬೇಕು ಎಂದು ಕರೆ ನೀಡಿದ ಪರಿಣಾಮ ಇಡೀ ಚುನಾವಣೆಯನ್ನು ನಿಷ್ಪಕ್ಷಗೊಳಿಸಿ ಗುಜರಾತನ್ನು ಕೇವಲ ಹಿಂದೂ ರಾಜ್ಯವನ್ನಾಗಿ ಪರಿವರ್ತಿಸಿ ಹಿಂದೂ ಹೃದಯ ಸಾಮ್ರಾಟ ಎಂದು ಬಿರುದು ಪಡೆದ, ಕಾರ್ಪೊರೇಟರುಗಳಿಗೆ ಇಡೀ ಗುಜರಾತಿನ ನೆಲವನ್ನು ಧಾರೆ ಎರೆದು ಸುಧೀರ್ಘ ಹಿಡಿತ ಸಾಧಿಸಿದ ನರೇಂದ್ರ ಮೋದಿಯವರನ್ನು ಮುಂದಿನ ಭಾರತದ ನಾಯಕ ಎಂದು ಬಿಂಬಿಸಿ ಪ್ರಚಾರಂಭವನ್ನು ಬಹಳ ಶಿಸ್ತು ಬದ್ಧವಾಗಿ ನಡೆಸಿದರು. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಮಾಧ್ಯಮಗಳು ಅಧಿಕಾರಕ್ಕೆ ತರುವಲ್ಲಿ ವಹಿಸಿದ ಪಾತ್ರವನ್ನು ಮನಗಂಡ ಬಿಜೆಪಿ ಮಾಧ್ಯಮಗಳನ್ನು ತನ್ನ ಪರವಾಗಿ ಬಳಸಿಕೊಳ್ಳುವಲ್ಲಿ ಯೋಜನಾಬದ್ಧ ತಂತ್ರಗಾರಿಕೆಯನ್ನು ಸಾಧಿಸಿದವು ಚುನಾವಣಾರಂಭದಲ್ಲಿ ಭಾರತದ ಭರವಸೆಯ ನಾಯಕನ ಸ್ಥಾನದಲ್ಲಿ ಕೇಜ್ರಿವಾಲ್ ರಾರಾಜಿಸುತ್ತಿದ್ದರೆ ನಂತರದ ದಿನಗಳಲ್ಲಿ ಮೋದಿ ರಾರಾಜಿಸಿದರು ಮಾತ್ರವಲ್ಲ ಭಾರತದ ಯುವಜನರ ಬಾಳಿನ ಭರವಸೆಯಾಗಿ ಹೀರೋ ಆಗಿದ್ದ ಕೇಜ್ರಿವಾಲ್ ತಮ್ಮ ಮೊಂಡುತನದಿಂದ ಬಾಲಿಷ ರಾಜಕೀಯ ನಡೆ ನಡೆಸಿದ್ದರಿಂದ ಬ್ರಮನೀರಸಗೊಂಡ ಯುವಜನ, ಮಧ್ಯಮ ವರ್ಗ ಸಹಜವಾಗಿ ಮೋದಿಯಕಡೆ ವಾಲಿಸುವಲ್ಲಿ ಮಾಧ್ಯಮಗಳನ್ನು ನರೇಂದ್ರಮೋದಿ ಬಳಸಿಕೊಂಡರು. ಹಾಗೂ ಇಡೀ ಚುನಾವಣೆಯಲ್ಲಿ ಮೋದಿ ಕೇಂದ್ರಿತ ಚುನಾವಣೆಯಾಯಿತು ಮೋದಿಯ ಭಾವನಾತ್ಮಕ ಬಾಷಣದ ನಡುವೆ ರಾಹುಲ್ ಮತ್ತು ಇತರೆ ಪಕ್ಷದ ಮುಖಂಡರುಗಳು ಪೇಲವಾವಗಿ ಕಂಡು ಬಂದರು ಮಾತ್ರವಲ್ಲ ಮಾಧ್ಯಮಗಳು ಅವರನ್ನು ದೂರವೇ ಇರಿಸಿತು ಎಂದು ವಿವರಿಸಿದರು.
ವಿಜ್ಞಾನ ಲೇಖಕ ಕೆ.ಎಸ್.ರವಿಕುಮಾರ್ ಮಾತನಾಡಿ ಉತ್ತರ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಗೋಸುಂಬೆತನ, ಜಾತ್ಯಾತೀತ ನಿಲುವನ್ನು ಗಟ್ಟಿಗೊಳಿಸದ ಕಾರಣ ಬಿಜೆಪಿ ಕಡೆ ಧೃವೀಕರಿಸುವಲ್ಲಿ ಮೋದಿ ಅಲೆ ಸೃಷ್ಠಿಸಿತು ಆದರೆ ಪ.ಬಂಗಾಳ, ತಮಿಳುನಾಡು, ಒರಿಸ್ಸಾ ಹಾಗೂ ಕೇರಳಗಳಲ್ಲಿ ಮೋದಿ ಅಲೆ ನಡೆಯಲಿಲ್ಲ ಎಂದು ವಿವರಿಸಿದ ಅವರು ಭಾರತದ ಚುನಾವಣೆ ಯಾವಾಗಲೂ ಬರೀ ಭಾವನಾತ್ಮಕ ಭಾಷಣದ ನೆಲೆಗಟ್ಟನಲ್ಲೇ ನಡೆಯುವುದನ್ನು ನಾವು ನೋಡಿದ್ದೇವೆ ಹಾಗಾಗಿ ಈ ಬಾರಿ ಕಾಂಗ್ರೇಸ್ ಆ ಭಾವನಾತ್ಮಕ ನೆಲೆಗಟ್ಟನ್ನೂ ಕಳೆದು ಕೊಂಡು ನೈತಿಕ ದಿವಾಳಿಕೋರತನ ಅನುಭವಿಸಿ ಇಡೀ ಚುನಾವಣೆಯನ್ನು ಬಿಜೆಪಿಗೆ ಧಾರೆ ಎರೆಯಿತು ಮಾತ್ರವಲ್ಲ ಗೆಲವು ಸಾಧಿಸಿದ ಪಕ್ಷಗಳು ಸಹಜವಾಗಿ ಸರ್ವಾಧಿಕಾರಿ ಮನೋಧರ್ಮದವರು ಜನತೆ ಸರ್ವಾಧಿಕಾರಿ ಧೋರಣೆಗೆ ಬೆಂಬಲ ನೀಡಿದಂತಿದೆ ಎಂದರು.
ಬಿಜಿವಿಎಸ್ ನ ಅಹಮದ್ ಪ್ರತಿಕ್ರಯಿಸಿ ಈ ಬಾರಿಯ ಚುನಾವಣೆಯಲ್ಲಿ ಅಂಕೆ-ಸಂಖ್ಯೆಗಳ ರೂಪದಲ್ಲಿ ಬಿಜೆಪಿಗೆ ಬೃಹತ್ ಮುನ್ನಡೆ ಲಭಿಸಿದೆ ತಾವು ನಿಲ್ಲಿಸಿದ ೪೨೭ ಕ್ಷೇತ್ರಗಳಲ್ಲಿ ೨೮೨ ಕ್ಷೇತ್ರಗಳಲ್ಲಿ ಅಂದರೆ ೬೬% ಕ್ಷೇತ್ರಗಳಲ್ಲಿ ಜಯಗಳಿಸಿದೆ ಆದರೆ ತಾವು ಪಡೆದ ಒಟ್ಟು ಮತ ಕೇವಲ ೩೧ ಶೇಖಡ ಮಾತ್ರ ಇದು ವಾಜಪೇಯಿಯವರು ಗಳಿಸಿದ ಶೇಖಡವಾರು ಮತಗಳಿಗಿಂತ ಕಡಿಮೆ ಇದೊಂದು ವಿಪರ್ಯಾಸ ಎರಡನೆಯದಾಗಿ ಮತಗಳಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್‌ನ ನಂತರದ ಸ್ಥಾನ ಬಿ.ಎಸ್.ಪಿಯದು ಅದು ೪.೧ ಶೇಕಡ ಮತಗಳಿಸಿ ಮೂರನೆ ಸ್ಥಾನದಲ್ಲಿದೆ ಆದರೆ ಪ್ರತಿನಿಧಿಗಳ ಸಂಖ್ಯೆ ಸೊನ್ನೆ ೨.೪ ಶೇಖಡ ಮತಗಳಿಸಿ ೯ನೇ ಸ್ಥಾನದಲ್ಲಿರುವ ವೈ.ಎಸ್.ಆರ್. ಪಕ್ಷ ೯ ಸ್ಥಾನಗಳಿಸಿದೆ ಇದು ಜನಾಭೀಪ್ರಾಯವಲ್ಲ ಕೇವಲ ಅಂಕೆ-ಸಂಕೆಯ ಲೆಕ್ಕಾಚಾರದ ತಂತ್ರಗಾರಿಕೆ ಈ ತಂತ್ರಗಾರಿಕೆಯಲ್ಲಿ ನರೇಂದ್ರಮೋದಿ ನಿಪುಣರು ಅದನ್ನು ಸಾಧಿಸಿದ ಪರಿಣಾಮ ಈ ಫಲಿತಾಂಶ ಎಂದು ತಿಳಿಸಿದರು.
ಡಾ.ಜಯಚಂದ್ರಗುಪ್ತ ಮಾತನಾಡಿ ಪ್ರಾದೇಶಿಕ ಪಕ್ಷಗಳ ಆಷಾಡಭೂತಿತನ, ವಂಶಪಾರಂಪರ್ಯ ಆಡಳಿತ, ಬ್ರಷ್ಟಾಚಾರ, ಸ್ವಜನಪಕ್ಷಪಾvಗಳಿಂದ ಬೇಸತ್ತ ಜನ ಗುಜರಾತನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯುತ್ತಿದ್ದಾರೆ ಎಂದು ತಿಳಿದೊ ಅಥವ ಬ್ರಮೆಗೊಳಪಟ್ಟೋ ಅಥವ ಅಂದುಕೊಂಡೂ ಯುವಜನತೆ ಮತ್ತು ಜನ ನರೇಂದ್ರಮೋದಿಯನ್ನು ಪ್ರಧಾನಿ ಸ್ಥಾನನದಲ್ಲಿ ನೋಡಲು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಎಲ್ಲ ಪಕ್ಷಗನ್ನೂ ತಿರಸ್ಕರಿಸಿದ್ದಾರೆ ಎಂದರು.
ಲೇಖಕಿ ರೂಪ ಹಾಸನ ಮಾತನಾಡಿ ಗುಜರಾತಿನ ಕಾರ್ಪೊರೇಟ್ ಮಾದರಿಯ ಅಭಿವೃದ್ಧಿ ಹೊಸ ಮತದಾರರಾದ ೧೫ಕೋಟಿ ಯುವಜನರನ್ನು ನರೇಂದ್ರಮೋದಿಯವರ ಕಡೆ ಸೆಳೆಯಿತು ಹಾಗಾಗಿ ಇಡೀ ಚುನಾವಣೆ ಮೋದಿ ಮತ್ತು ರಾಹುಲ್ ಗಾಂಧಿ ನಡುವಣ ಚುನಾವಣೆ ಎಂದು ಪರೋಕ್ಷವಾಗಿ ಅಧ್ಯಕ್ಷ ಮಾದರಿಯ ಚುನಾವಣಾ ರೀತಿ ಮಾಧ್ಯಮಗಳು ಬಿಂಬಿಸಿದವು ಸಹಜವಾಗಿ ವ್ಯಕ್ತಿತ್ವದಲ್ಲಿ ಪ್ರಭಾವಶಾಲಿಯಾಗಿದ್ದ ಮೋದಿಯ ಯುವಜನರು ಮತಚಲಾಯಿಸಿದರು ಮಾತ್ರವಲ್ಲ ಸಾಮೂಹಿಕ ಮಾಧ್ಯಮಗಳ ಮೂಲಕವೂ ಪ್ರಚಾರ ಮಾಡಿದರು ಎಂದರು.
ಕ.ಸಾ.ಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಜನಾರ್ಧನ ಮಾತನಾಡಿ ಚುನಾವಣೆಗೆ ಮೊದಲು ಗುಜರಾತಿನ ಅಭಿವೃದ್ಧಿ, ಕಾಂಗ್ರೇಸಿನ ದುರಾಡಳಿತ, ಬೆಲೆ ಏರಿಕೆಯಿಂದ ಬೇಸತ್ತ ಜನ ಹಿಂದೆಂದೂ ಯಾರಮೇಲೂ ಇಡದ ನಂಬಿಕೆಯನ್ನು ನರೇಂದ್ರ ಮೋದಿಯವರ ಮೇಲೆ ಕುರುಡಾಗಿ ನಂಬಿ ಗೆಲ್ಲಿಸಿದ್ದಾರೆ ಮುಂದಿನ ನಡಾವಳಿ ಬಡತನ ನಿವಾರಣೆ, ಉದ್ಯೋಗ ಸೃಷ್ಠಿ ಮೇಲೆ ಅಪಾರ ಭರವಸೆ ಹೊಂದಿದ್ದಾರೆ ಕಾದು ನೋಡಿದರೆ ಗೊತ್ತಾಗಲಿದೆ ಎಂದರು.
ಕಾರ್ಮಿಕ ಮುಖಂಡ ಧರ್ಮೇಶ್ ಪ್ರತಿಕ್ರಯಿಸಿ ಭಾರತದ ಚುನಾವಣಾ ಪದ್ಧತಿಯ ದೋಷ ಕೇವಲ ವ್ಯಕ್ತಿಗಳನ್ನು ಕೇಂದ್ರಿಕರಿಸಿ ನಡೆಸುವ ಪ್ರಜಾಪ್ರಭುತ್ವವನ್ನು ಕಳೆಗುಂದಿಸುವ ಕೆಲಸ. ಅಣ್ಣಾ ಹಜಾರೆ ಹೋರಾಟ ಕಾಂಗ್ರೇಸನ್ನು ಹೇಗೆ ಮೂಲೆಗುಂಪು ಮಾಡಿತೋ ಹಾಗೆಯೇ ದೆಹಲಿ ಚುನಾವಣೆ, ಕಾಂಗ್ರೇಸು ಮತ್ತು ಬಿಜೆಪಿಯನ್ನು ವಿಚಲಿತಗೊಳಿಸಿತು ಪರೋಕ್ಷವಾಗಿ ಬಿಜೆಪಿಯನ್ನು ಮಾಧ್ಯಮಗಳ ನಾಯಕನನ್ನಾಗಿ ಪರಿವರ್ತಿಸಲು ಸಹಾಯಕವಾಯಿತು ಈ ನಿಟ್ಟಿನಲ್ಲೇ ಮಹಾ ಚುನಾವಣೆ ಆರಂಭಗೊಂಡ ತಕ್ಷಣ ಮೋದಿ ಮತ್ತು ರಾಹುಲ್ ನಡುವೆ ಆಕರ್ಷಕ ಶಿರೋನಾಮೆ ನೀಡುವ ಮೂಲಕ ಜನರನ್ನು ಮರಳು ಮಾಡಲಾಯಿತು ಅಬ್ ಕಿ ಬಾರ್ ಮೋದಿ ಸರ್ಕಾರ್, ಒನ್ ಲೀಡರ್ ಒನ್ ನೇಷನ್, ಮೆರೆ ಸಾಥ್ ಸಬ್ ಕಿ ವಿಶ್ವಾಸ್ ೧೫ಕೋಟಿ ಯುವ ಮತದಾರರನ್ನು ಸೆಳೆಯಿತು ಆದರೆ ಮೂರರಲ್ಲೊಬ್ಬ ಮಾತ್ರ ಮೋದಿಯನ್ನು ಆಯ್ಕೆ ಮಾಡಿದ್ದಾನೆ, ೬೯ ಶೇಖಡ ಭಾರತದ ಜನತೆ ಬಾಜಪ ಮತ್ತು ಮೋದಿಯನ್ನು ತಿರಸ್ಕರಿಸಿದ್ದಾರೆ ಆದರೆ ಭಾರತದ ಚುನಾವಣ ಪದ್ಧತಿಯಂತೆ ಮಿಕ್ಕವರಿಗಿಂತ ಹೆಚ್ಚು ಸ್ಥಾನ ಗಳಿಸಿದ ಕಾರಣ ಅಧಿಕಾರ ನಡೆಸಲೇ ಬೇಕಿದೆ ಇದೇ ಪರ್ವ ಭಾರತದ ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಎಂದರು.
ರೈತ ಮುಖಂಡ ನವೀನ್ ಕುಮಾರ್ ಮಾತನಾಡಿ ಚುನಾವಣೆಯನ್ನು ಭಾವನಾತ್ಮಕವಾಗಿ ಗೆಲ್ಲಲು ಮೊದಲ ಕಾರಣ ಯು.ಪಿ.ಎ.ಯ ಹಗರಣ ಹಾಗೂ ದುರಾಡಳಿತ, ಮನಮೋಹನ ಸಿಂಗರನ್ನು ಬಫೂನ್ ರೀತಿಯಲ್ಲಿ ಬಿಂಬಿಸಿದ್ದು, ಧರ್ಮದ ಧೃವೀಕರಣ, ಈ ಹಿಂದಿನ ಗುಜರಾತ್ ಹತ್ಯಾಕಾಂಡದಿಂದ ಉದ್ಭವಿಸಿದ ಸರ್ವಾಧಿಕಾರಿ ನಾಯಕತ್ವದ ಮೇಲಿನ ಭರವಸೆ ಈ ಪ್ರಮಾಣದ ಗೆಲುವು ತಂದು ಕೊಟ್ಟಿದೆ ಎಂದರು.
Subscribe to:
Posts (Atom)