ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹವಾಮಾನ ಬದಲಾವಣೆ ಹಾಗೂ ಪರಿಸರ ಅಧ್ಯಯನ ಶಿಬಿರ
inaguration
ನಾಗರೀಕತೆ ಹಾಗೂ ಐಶಾರಾಮಿ ಜೀವನದ ಸಲುವಾಗಿ ಮನುಷ್ಯ ಸಾವಿರಾರು ಮರಗಳನ್ನ, ಪ್ರಾಣಿ-ಪಕ್ಷಿಗಳನ್ನ ವಿನಾಶಕ್ಕೆ ದೂಡಿದ್ದಾನೆ ಮತ್ತು ಅಮೃತಶಿಲೆ ಹಾಗೂ ಲೋಹಗಳ ಹುಡುಕಾಟದಲ್ಲಿ ಭೂಗರ್ಭವನ್ನು ಲೂಟಿ ಮಾಡುತ್ತಿದ್ದಾನೆ. ಇದೆಲ್ಲ ತಪ್ಪಬೇಕಾದರೆ ಪ್ರಾನ್ಸ್‌ನ ತತ್ವಜ್ಞಾನಿ, ಶಿಕ್ಷಣತಜ್ಞ ರೂಸೋ ಹೇಳಿದಂತೆ ಮನುಷ್ಯ ಮತ್ತೆ ಅನಾಗರಿಕನಾಗಬೇಕು ಅಷ್ಟೆ ಎಂದು ಹಾಸನ ಆಕಾಶವಾಣಿಯ ಪ್ರಸಾರ ನಿರ್ವಹಕರಾದ ಸುಜಾತ ಎಫ್ ತಲ್ವಾರ್ ಹೇಳಿದರು. ಅವರು ಇತ್ತೀಚೆಗೆ ಬೆಂಗಳೂರಿನ ಸಿ.ಪಿ.ಆರ್ ಪರಿಸರ ಶಿಕ್ಷಣ ಕೇಂದ್ರವು ಹಾಸನ ತಾಲೋಕು ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಭಾಗಿತ್ವದಲ್ಲಿ ಪರಿಸರ ಕಾಳಜಿ ಉಳ್ಳ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತಾಲೋಕಿನ ಯುವಜನರಿಗಾಗಿ ಹವಾಮಾನ ಬದಲಾವಣೆ ಮತ್ತು ಪರಿಸರ ಅಧ್ಯಯನ ಕುರಿತು ನಡೆಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಮೂಲಕ ಪರಿಸರ ಎಂದರೇನು? ಹಾಗೂ ಪರಿಸರವನ್ನು ಮನುಷ್ಯ ಹೇಗೆ ವಿನಾಶದ ಕಡೆಗೆ ಕೊಂಡೋಗಿದ್ದಾನೆ ಎಂಬುದನ್ನು ಕಥೆಗಳ ಮೂಲಕ ತಿಳಿಸುತ್ತಾ ಇಂದಿನ ಮಕ್ಕಳು ಪರಿಸರ ಕುರಿತ ಆಳ ಅಧಯಯನದಲ್ಲಿ ತೊಡಗಿಕೊಂಡಾಗ ಮುಂದಿನ ದಿನದಲ್ಲಿ ಪರಿಸರ ಪ್ರೇಮಿ ಅಭಿವೃದ್ಧಿ ಕಡೆ ಗಮನ ಹರಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಲು ಬಿ.ಜಿ.ವಿ.ಎಸ್ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜಿ.ವಿ.ಎಸ್‌ನ ತಾಲೂಕು ಅಧ್ಯಕ್ಷರಾದ ಮಮತ ಶಿವು ವಹಿಸಿ ಮಾತನಾಡಿ ಪರಿಸರ ಸಂರಕ್ಷಣ ಎನ್ನುವುದು ಈಗ ಶೈಕ್ಷಣಿಕ, ಸಾಮಾಜಿಕ ಹಾಗೂ ಅಂತರ ರಾಷ್ಟ್ರೀಯ ರಾಜಕೀಯ ಸಮಸ್ಯೆಯಾಗಿ ಪರಿವರ್ತನೆಯಾಗಿದೆ ಹಾಗಾಗಿ ಶಾಲಾ ಈಕೋಕ್ಲಬ್ಬುಗಳ ಮೂಲಕ ಮಕ್ಕಳಲ್ಲಿ ಪರಿಸರದ ವಸ್ತು ಸ್ಥಿತಿ ಕುರಿತು ಅರ್ಥೈಸುವ ಚಟುವಟಿಕೆ ನಡೆಸುವ ಅಗತ್ಯ ಇದ್ದು ಅದನ್ನು ಬಿಜಿವಿಎಸ್ ದೇಶಾದ್ಯಾಮತ ನಡೆಸುತ್ತಿದೆ ಎಂದರು.
ಕಾರ್ಯಕ್ರಮದ ಸಂಚಾಲಕರಾದ ಕವಿತ.ಕೆ.ವಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಬಿ.ಜಿ.ವಿ.ಎಸ್ ನ ಧ್ಯೇಯ ಹಾಗೂ ಚಟುವಟಿಕೆಗಳನ್ನು ತಿಳಿಸುವ ಜೊತೆಗೆ ಪರಿಸರ ಅಧ್ಯಯನದ ಹಂತಗಳು, ಗುರಿ ಮತ್ತು ಉದ್ದೇಶಗಳನ್ನು ತಿಳಿಸಿದರು. ಬಿ.ಜಿ.ವಿ.ಎಸ್‌ನ ತಾಲೂಕು ಖಜಾಂಚಿ ಶ್ರೀಮತಿ ರೇಖ ನಿರೂಪಿಸಿ ಸ್ವಾಗತಿಸಿದರು. ಬಿ.ಜಿ.ವಿ.ಎಸ್‌ನ ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು.
activities

.JPG)
ಇಡೀ ದಿನ ಹಾಸನದ ಜವೇನ ಹಳ್ಳಿ ಮಠ ಹಾಗೂ ಎಸ್.ಜಿ.ಆರ್ ಶಾಲಾ ಆವರಣ ಹೊಸಲೈನ್ ರಸ್ತೆ, ಉತ್ತರ ಬಡಾವಣೆಯಲ್ಲಿ ಪರಿಸರ, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ, ಹವಾಮಾನ ಬದಲಾವಣೆ, ಶಕ್ತಿ ನಿರ್ವಹಣೆ, ಇಕೋ ಕ್ಲಬ್ ಚಟುವಟಿಕೆ ವಿಷಯಗಳನ್ನು ಪಿಪಿಟಿ, ಆಟ-ಹಾಡು ಹಾಗೂ ಸಂಶೋಧನಾ ಚಟುವಟಿಕೆಗಳ ರೂಪದಲ್ಲಿ ತರಬೇತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಪಿ.ಆರ್ ಪರಿಸರ ಕೇಂದ್ರ ಬೆಂಗಳೂರಿನಿಂದ ಆಗಮಿಸಿದ್ದ ರವಿಶಂಕರ್ ಪರಿಸರ, ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯ ಮಾಹಿತಿಯನ್ನು ಮತ್ತು ಸಮೀಕ್ಷೆಯನ್ನು ಚಟುವಟಿಕೆ ಹಾಗೂ ಪಿಪಿಟಿಯ ಮೂಲಕ ತಿಳಿಸುತ್ತಾ ನಮ್ಮ ಮನೆ ಹಾಗು ಶಾಲಾ ಸುತ್ತ ಮುತ್ತ ಇರುವ ಪರಿಸರ ವ್ಯವಸ್ಥೆಯನ್ನು ಅಧ್ಯಯನ ಮಾಡುವ ವಿಧಾನ ತಿಳಿಸಿ ಬೀದಿ ಹಾಗೂ ಶಾಲೆಗಳಲ್ಲಿ ಪರಿಸರ ಕೂಟ ರಚಿಸಲು ಕರೆ ನೀಡಿದರು.
ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೆ. ಎಸ್ ರವಿಕುಮಾರ್ ಹವಾಮಾನ ವೈಪರಿತ್ಯ (ಗ್ಲೋಬಲ್ ವಾರ್ಮಿಂಗ್) ಬಗ್ಗಿನ ಮಾಹಿತಿಯನ್ನು ಪಿಪಿಟಿಯ ಮೂಲಕ ವಿವರಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಹವಾಮಾನ ವೈಪರೀತ್ಯದಿಮದ ಹಾಸನ ಜಿಲ್ಲೆಯ ಜನತೆ, ಕೃಷಿ ಹಾಗೂ ಕುಡಿವ ನೀರಿನ ಪರಿಣಾಮದ ಕುರಿತು ಸಮೀಕ್ಷೆ ನಡೆಸಲು ತಿಳಿಸಿದರು.
ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಪರಿಸರ ಚಳುವಳಿಗಳ ಪರಿಚಯ ಮಾಡಿ ಕೊಟ್ಟರು.
closing
ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅಹಮದ್.ಹೆಚ್.ಎ ಇಕೋ ಕ್ಲಬ್ ಚಟುವಟಿಕೆಗಳ ಕಾರ್ಯಸೂಚಿ ತಿಳಿಸಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಪರಿಸರ, ಮಾಲಿನ್ಯ, ನೀರು ಹಾಗೂ ಶಕ್ತಿ ಬಳಕೆ ಕುರಿತ ಚಟುವಟಿಕೆ ಹಾಗೂ ಸಮೀಕ್ಷೆ, ಸಪ್ಟೆಂಬರ್- ನವೆಂಬರ್ ಅವಧಿಯಲ್ಲಿ ಜೀವ ವೈವಿಧ್ಯತೆ ಹಾಗೂ ಹವಾಮಾನದ ವಿಜ್ಞಾನ ಕುರಿತು ಚಟುವಟಿಕೆ ಹಾಗೂ ಸಮೀಕ್ಷೆ ಮತ್ತು ನವೆಂಬರ್ - ಜನವರಿ ಅವಧಿಯಲ್ಲಿ ಪಕ್ಷಿ, ಕೀಟ, ಹಾಗೂ ಮರಗಳ ಜಾತಿ ಪತ್ತೆ ಹಚ್ಚುವ ಮತ್ತು ಜೀವಿ ಆವಾಸ ಪತ್ತೆ ಹಚ್ಚುವ ಚಟುವಟಿಕೆಗಳನ್ನು ಹಮ್ಮಿಕೊಳ್ಲಲಾಗುವುದು ಎಮದು ತಿಳಿಸುತ್ತ ಹಾಸನ ನಗರದಲ್ಲಿ ತಾಲೋಕು ಸಮಿತಿಯು ಕನಿಷ್ಠ ೧೦೦ ಪರಿಸರ ಬಾಲ ವಿಜ್ಞಾನಿಗಳು ಹಾಗೂ ಶಾಲ ಪರಿಸರ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವ ಹಿನ್ನಲೆಯಲ್ಲಿ ಈ ಕಾರ್ಯಾಗಾರ ನಡೆಸಲಾಗಿದೆ ಎಂದರು.
ಎಸ್.ಜಿ.ಆರ್ ಶಾಲೆಯ ಕಾರ್ಯದರ್ಶಿ ಶಿವಣ್ಣ ವಿದ್ಯಾರ್ಥಿಗಳಿಗೆ ಗಿಡ ವಿತರಿಸಿದರು, ಅಶೋಕ್ ಪರಿಸರ ಗೀತೆಗಳನ್ನು ಹೇಳಿಕೊಟ್ಟರು.
(ಜಯಪ್ರಕಾಶ)
ಕಾರ್ಯದರ್ಶಿ
inaguration
ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಮೂಲಕ ಪರಿಸರ ಎಂದರೇನು? ಹಾಗೂ ಪರಿಸರವನ್ನು ಮನುಷ್ಯ ಹೇಗೆ ವಿನಾಶದ ಕಡೆಗೆ ಕೊಂಡೋಗಿದ್ದಾನೆ ಎಂಬುದನ್ನು ಕಥೆಗಳ ಮೂಲಕ ತಿಳಿಸುತ್ತಾ ಇಂದಿನ ಮಕ್ಕಳು ಪರಿಸರ ಕುರಿತ ಆಳ ಅಧಯಯನದಲ್ಲಿ ತೊಡಗಿಕೊಂಡಾಗ ಮುಂದಿನ ದಿನದಲ್ಲಿ ಪರಿಸರ ಪ್ರೇಮಿ ಅಭಿವೃದ್ಧಿ ಕಡೆ ಗಮನ ಹರಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಲು ಬಿ.ಜಿ.ವಿ.ಎಸ್ ಮುಂದಾಗಬೇಕು ಎಂದರು.
activities
ಇಡೀ ದಿನ ಹಾಸನದ ಜವೇನ ಹಳ್ಳಿ ಮಠ ಹಾಗೂ ಎಸ್.ಜಿ.ಆರ್ ಶಾಲಾ ಆವರಣ ಹೊಸಲೈನ್ ರಸ್ತೆ, ಉತ್ತರ ಬಡಾವಣೆಯಲ್ಲಿ ಪರಿಸರ, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ, ಹವಾಮಾನ ಬದಲಾವಣೆ, ಶಕ್ತಿ ನಿರ್ವಹಣೆ, ಇಕೋ ಕ್ಲಬ್ ಚಟುವಟಿಕೆ ವಿಷಯಗಳನ್ನು ಪಿಪಿಟಿ, ಆಟ-ಹಾಡು ಹಾಗೂ ಸಂಶೋಧನಾ ಚಟುವಟಿಕೆಗಳ ರೂಪದಲ್ಲಿ ತರಬೇತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಪಿ.ಆರ್ ಪರಿಸರ ಕೇಂದ್ರ ಬೆಂಗಳೂರಿನಿಂದ ಆಗಮಿಸಿದ್ದ ರವಿಶಂಕರ್ ಪರಿಸರ, ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯ ಮಾಹಿತಿಯನ್ನು ಮತ್ತು ಸಮೀಕ್ಷೆಯನ್ನು ಚಟುವಟಿಕೆ ಹಾಗೂ ಪಿಪಿಟಿಯ ಮೂಲಕ ತಿಳಿಸುತ್ತಾ ನಮ್ಮ ಮನೆ ಹಾಗು ಶಾಲಾ ಸುತ್ತ ಮುತ್ತ ಇರುವ ಪರಿಸರ ವ್ಯವಸ್ಥೆಯನ್ನು ಅಧ್ಯಯನ ಮಾಡುವ ವಿಧಾನ ತಿಳಿಸಿ ಬೀದಿ ಹಾಗೂ ಶಾಲೆಗಳಲ್ಲಿ ಪರಿಸರ ಕೂಟ ರಚಿಸಲು ಕರೆ ನೀಡಿದರು.
ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೆ. ಎಸ್ ರವಿಕುಮಾರ್ ಹವಾಮಾನ ವೈಪರಿತ್ಯ (ಗ್ಲೋಬಲ್ ವಾರ್ಮಿಂಗ್) ಬಗ್ಗಿನ ಮಾಹಿತಿಯನ್ನು ಪಿಪಿಟಿಯ ಮೂಲಕ ವಿವರಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಹವಾಮಾನ ವೈಪರೀತ್ಯದಿಮದ ಹಾಸನ ಜಿಲ್ಲೆಯ ಜನತೆ, ಕೃಷಿ ಹಾಗೂ ಕುಡಿವ ನೀರಿನ ಪರಿಣಾಮದ ಕುರಿತು ಸಮೀಕ್ಷೆ ನಡೆಸಲು ತಿಳಿಸಿದರು.
ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಪರಿಸರ ಚಳುವಳಿಗಳ ಪರಿಚಯ ಮಾಡಿ ಕೊಟ್ಟರು.
closing
ಎಸ್.ಜಿ.ಆರ್ ಶಾಲೆಯ ಕಾರ್ಯದರ್ಶಿ ಶಿವಣ್ಣ ವಿದ್ಯಾರ್ಥಿಗಳಿಗೆ ಗಿಡ ವಿತರಿಸಿದರು, ಅಶೋಕ್ ಪರಿಸರ ಗೀತೆಗಳನ್ನು ಹೇಳಿಕೊಟ್ಟರು.
(ಜಯಪ್ರಕಾಶ)
ಕಾರ್ಯದರ್ಶಿ
No comments:
Post a Comment