ವಿಜ್ಞಾನ ಸಾರ್ವಕಾಲಿಕ ಸತ್ಯ ಹಾಗೂ ಮನುಕುಲ ರಕ್ಷಕ
ಭಾರತದ ಮೊದಲ ಪ್ರಾಧನಿ ಜವಹಾರಲ ನೆಹರು ಭಾರತ ಮತ್ತು ಭಾರತದ ಜನತೆಯನ್ನು ಭಾದಿಸುತ್ತಿರುವ "ಹಸಿವು ಮತ್ತು ದಾರಿದ್ರ್ಯ, ಅನಾರೋಗ್ಯ ಮತ್ತು ಅನಕ್ಷರತೆ, ಮೂಢನಂಬಿಕೆ ಮತ್ತು ಜಡ್ಡುಗಟ್ಟಿದ ಆಚರಣೆಗಳಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವಿಜ್ಞಾನ ಒಂದರಿಂದಲೇ ಸಾಧ್ಯ" ಎಂದು ತಮ್ಮ ಮೊದಲ ಸ್ವಾತಂತ್ರ್ಯದ ಭಾಷಣದಲ್ಲಿ ಪ್ರಧಾನವಾಗಿ ಉಲ್ಲೇಖಿಸಿದ್ದರು ಹಾಗೆಯೇ ನಮ್ಮ ಸಂವಿಧಾನದ ಪರಿಚ್ಚೇದ ಮೂಲಭೂತ ಕರ್ತವ್ಯಗಳು ಭಾಗ ೪ಎ, ಆರ‍್ಟಿಕಲ್ ೫೧a(h) ನಲ್ಲಿ
ಭಾರತದ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು ಹಾಗೂ ಇತರರಲ್ಲಿ ವೈಜ್ಞಾನಿಕತೆಯನ್ನು ಬಿತ್ತುವುದು, ಮಾನವೀಯ ಮೌಲ್ಯಗಳನ್ನು ವೃದ್ದಿಸಿಕೊಳ್ಳುವುದು ಹಾಗೂ ಸಂಶೋಧನಾ ಗುಣಗಳನ್ನು ಉತ್ತೇಜಿಸುವುದು ಹಾಗೂ ಅದನ್ನು ಅಭಿವೃದ್ದಿ ಪಡಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಮೂಲ ಭೂತ ಕರ್ತವ್ಯಗಳು.
ಎಂದು ಹೇಳಿದೆ ಎಲ್ಲಿಯೂ ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಹೇಳಿಲ್ಲ. ಏಕೆಂದರೆ ವಿಜ್ಞಾನ ಎನ್ನುವುದು ಸಾರ್ವಕಾಲಿಕ ಸತ್ಯ ಮಾತ್ರವಲ್ಲ ಮನುಕುಲದ ವಿಕಾಸದ ಅನ್ವೇಷಕ, ಹಾಗೂ ಮಾನವನ ಎಲ್ಲ ಸಮಸ್ಯೆಗಳ ಪರಿಹಾರಕ. ಭೂಕಂಪನದ ಭಿಕರತೆಯಿಂದ ಸಾವು ನೋವಿನ ಪ್ರಮಾಣ ಕಡಿಮೆಮಾಡಲು ಸಾಧ್ಯವಾಗಿದ್ದು ವಿಜ್ಞಾನಕ್ಕೆ ಅದೇ ಸಿಸ್ಮೋಗ್ರಾಫಿಯನ್ನು ಬೆಳೆಸಿದ್ದು, ಭಿಕರ ರೋಗಗಳಿಗೆ ಅಂಜದ ಎದೆಗಾರಿಕೆಯನ್ನ ತಂದು ಕೊಟ್ಟಿದ್ದು, ಊರಿಗೂರೇ ಹೆಣ ಬೀಳಿಸುವ ರೋಗಗಳನ್ನು ಭೂಮಂಡಲದಾಚೆ ಅಟ್ಟಲು ವಿಜ್ಞಾನವೇ ಧೈರ್ಯ ನೀಡಿ ವೈದ್ಯಕೀಯ ಶಾಸ್ತ್ರವನ್ನು ಹುರಿದುಂಬಿಸಿದ್ದು, ಕಾದಾಡಿ ಕಾದಾಡಿ ಮನುಕುಲದ ಬರ್ಬರ ಹತ್ಯಾಕಾಂಡ ನಡೆಯುವಾಗ ಶಾಂತಿ, ಪ್ರೀತಿ, ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವದ ಪರಿಕಲ್ಪನೆಗೆ ಮೆದುಳನ್ನು ತೇಯಲು ವಿಜ್ಞಾನವೇ ಪ್ರಜಾಪ್ರಭುತ್ವಕ್ಕೆ ಜನ್ಮ ನೀಡಿದ್ದು, ಕರ್ಮಸಿದ್ಧಾಂತದೊಳಗೆ ಹುದುಗಿ ಕುಳಿತ ಮಾನವ ವಿರೋಧಿ ಶ್ಲೋಕಗಳ ಗುಟ್ಟನ್ನು ರಟ್ಟು ಮಾಡಲು ವಿಜ್ಞಾನವೇ ಜನರಿಗೆ ಮೇಧಾವಿತನವನ್ನು ಬೆಳೆಸಲು ವೈಜ್ಞಾನಿಕ ಶಿಕ್ಷಣವನ್ನು ಹುಟ್ಟಿಸಿದ್ದು, ನಾವೀಗ ಬರ್ಬರ ಯುಗವನ್ನು ದಾಟಿ ಚಳುವಳಿಯನ್ನು ಮಾಡಿಯಾದರೂ ಹಕ್ಕನ್ನು ಪಡೆಯುವ ಹೆಮ್ಮೆಯ ಯುಗದಲ್ಲಿದ್ದೇವೆ ಕೈ ಹಿಡಿದು ಕರೆ ತಂದಿದ್ದು ವಿಜ್ಞಾನವೇ ಅಲ್ಲವೆ?, ಹೊಲದೊಳಗೆ ಜೀತಮಾಡಿ ಕಗ್ಗತ್ತಲೆಯಲ್ಲಿದ್ದ ಬಹುಜನರಿಗೆ ತಾಂತ್ರಿತೆ ಕಲಿಸಿ ಕಾರ್ಖಾನೆಯೊಳಗೆ ಕರೆತಂದು ಜೀವನ ಸುಧಾರಿಸಲು ತಂತ್ರಜ್ಞಾನದ ರೂಪ ತಾಳಿದ್ದು ವಿಜ್ಞಾನ ತಾನೆ, ಎರೆಡು ಎಕರೆ ಜಮೀನಿನಲ್ಲಿ ೭೦ ಚೀಲ ಭತ್ತ ಬೆಳೆಸಿ ಸಂಬ್ರಮಿಸಿ, ಟ್ರ್ಯಾಕ್ಟರ್, ಬಿಲ್ಡಿಂಗ್, ಟೆರಿಲಿನ್ ಷರ್ಟ, ಹ್ಯಾಟು, ಎಚ್.ಎಂ.ಟಿ. ವಾಚು ಕಟ್ಟಿ, ಬೈಕು ಹತ್ತಿಸಿ ಬೀಗಿಸಿದ್ದು ವಿಜ್ಞಾನ ಇದು ಜನರ ವಿಜ್ಞಾನ ಬದುಕಿನ ಬಾದಶಹ. ತಪಸ್ಸು ಮಾಡಿ ಯಾರಾದರೂ ಈ ಮೇಲೆ ಹೇಳಿದ ಯಾವುದಾದರೂ ಒಂದನ್ನು ತಂದಿದ್ದಾರೆಯೆ? ನೂರಾರು ಧರ್ಮ ಸ್ಥಾಪಿಸಿ ಧರ್ಮಕಾಳಗ ನಡೆಸಿದ್ದಾರೆ, ಜಾತಿಗಳನ್ನ ಸೃಷ್ಠಿಸಿ ಜಾತಿದೊಂಬಿ ಎಬ್ಬಿಸಿದ್ದಾರೆ, ಪುರಾಣಗಳನ್ನು ಬರೆದು ಅಸ್ಪೃಷ್ಯತೆ ಹುಟ್ಟಿಸಿದ್ದಾರೆ. ವಿಜ್ಞಾನ ಇಲ್ಲದ ನಮ್ಮ ಬದುಕು ಅತಂತ್ರದ ಮತ್ತು ನಿರ್ಭಾಗ್ಯದ ಬದುಕಂತೂ ಸತ್ಯ. ವಿಜ್ಞಾನಕ್ಕೆ ಸಾವು ಇದೆ ಎಂದು ವಾದಿಸುವ ಪಂಡಿತರಿಗೆ ವಿಜ್ಞಾನದ ಮೂಲ ತಿಳಿದಿಲ್ಲ.
ವಸ್ತುವಿನ ಮೂಲರಚನೆ ದೇವಕಣದಿಂದ ಆಗಿದೆ ಅಂದರೆ ದೇವರ ಸೃಷ್ಠಿ ಎಂದು ಇತ್ತೀಚೆಗೆ ಸ್ವಾಮೀಜಿಯೊಬ್ಬರು ಪ್ರವಚನ ನೀಡುತ್ತಿದ್ದರು ಈ ಹಿಂದೆ ಈ ಕುರಿತು ನಗರದ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದೆ ಅದರ ಒಂದು ತುಣುಕು ಮತ್ತೆ ಜನರಿಗಾಗಿ ಸ್ಟಿಕ್ ಮಾಡುತ್ತಿದ್ದೇನೆ ["ಲಾಜ್ ಹೈಡ್ರನ್ ಕೊಲೈಡರ್ ಪ್ರಯೋಗದ ಫಲವಾಗಿ ಬೆಳಕಿಗೆ ಬಂದ ಹಿಗ್ಸ್‌ಬೋಸಾನ್ ಕಣವನ್ನು ಅರ್ಥ್ ಮಾಡಿಕೊಳ್ಳುವ ವಿಷಯದಲ್ಲಿ ಬಹಳ ಹಣ, ಸಮಯ, ತಾಳ್ಮೆ ಹಾಗೂ ಸಿದ್ಧಾಂತವನ್ನೆಲ್ಲಾ ನುಂಗಿದರೂ ಈ ಕಣ ಪತ್ತೆಯಾಗದ ಕಾರಣ ಬೇಸರಗೊಂಡ ವಿಜ್ಞಾನಿಗಳು ಇದೊಂದು ಧರಿದ್ರಕಣ ಯಾಕೆ ಬರ‍್ತಾ ಇಲ್ಲ ಎಂದು ಬೈದರು ಆ ವಿಜ್ಞಾನಿಗಳಲ್ಲಿ ಒಬ್ಬರಾದ ಲೇಡರ್ ಮೂನ್ ಆ ಬೈಗುಳದ ಶಿರೋನಾಮೆ ಇಟ್ಟೇ ಬರೆದ ಲೇಖನ ಗಾಡ್‌ಡ್ಯಾಮ್ ಪಾರ‍್ಟಿಕಲ್ ಅಂದರೆ ಧರಿದ್ರ ಕಣ ಅಚ್ಚಾಕುವ ಪ್ರಕಾಶಕ ಹೆಸರು ಆಕರ್ಷಕವಾಗಿಲ್ಲ ಎಂದು ನಡುವಿನ ಅಕ್ಷರ ಡ್ಯಾಮ್ ಅನ್ನು ಕತ್ತರಿಸಿ ಗಾಡ್ ಪಾರ್ಟಿಕಲ್ ಎನ್ನುವ ಹೆಡ್ಡಿಂಗ್ ಇಟ್ಟು ಪ್ರಕಟಿಸಿದ ಧೂರ್ತ. ಅದನ್ನೇ ನಮ್ಮವರು ದೇವಕಣ ಎಂದು ಯಥಾವತ್ ಅನುವಾದ ಮಾಡಿ ವಾಸ್ತವ ಚರ್ಚೆಗಿಂತ ದೇವರ ಚರ್ಚೆಯೆನ್ನೇ ಹತ್ತಿಸಿಬಿಟ್ಟಿತು ಹೀಗೆ ಧರಿದ್ರ ಕಣವೊಂದು ದೇವಕಣವಾಗಿ ನೂರೆಂಟು ಪ್ರಶ್ನೆಗಳ ಮಳೆಗರೆಸಿತು. ಯಾವ ವಿಜ್ಞಾನದ ಕೋಶದಲ್ಲೂ, ವಿಜ್ಞಾನಿಗಳ ಬಾಯಿಯಲ್ಲೂ ಅಪ್ಪಿ ತಪ್ಪಿಯೂ ಕೂಡ ಹಿಗ್ಸ್ ಬೋಸಾನ್ ಅಲ್ಲದೇ ಬೇರಾವ ಹೇಸರೂ ಕೂಡ ಬಂದಿಲ್ಲ, ದಾಖಲಾಗಿಲ್ಲ ಇದು ದೇವಕಣವಲ್ಲ ವಿಜ್ಞಾನಿಗಳಿಗೆ ಅನಿಷ್ಟವಾಗಿ ಕಾಡಿದೆ ಹಿಗ್ಸ್ ಬೋಸಾನ್.] ವಸ್ತು ಭಾವ ಜನ್ಯ ಎಂದು ವಾದಿಸುತ್ತಾ ಅದಕ್ಕೆ ಸ್ವತಂತ್ರ ಅಸ್ತಿತ್ವ ಇಲ್ಲ ಜಗನ್ಮಿತ್ಯಾ ಬ್ರಹ್ಮ ಸತ್ಯ ಎಂದು ಹುಟ್ಟಿದ ಭಾವವಾದವನ್ನು ವಸ್ತು ಸೂಕ್ಷಮಾಣುಗಳ ವಾಸ್ತವಿಕ ಸತ್ಯ ಎಂದು ಪ್ರಯೋಗಮಾಡಿ ತೋರಿಸಿದ್ದೇ ವಿಜ್ಞಾನದ ಬೆಳವಣಿಗೆ ಹಾಗೂ ಆ ವಸ್ತು ರೂಪದ ಚಟುವಟಿಕೆಗಳನ್ನ ಮಾನವ ಕಲ್ಯಾಣಕ್ಕೆ ಬಳಕೆ ಮಾಡುವ ತಂತ್ರಗಾರಿಕೆಯನ್ನು ಕೊಟ್ಟಿದ್ದೇ ವಿಜ್ಞಾನ ಹಾಗಾಗಿಯೇ ಅಲ್ಲವೆ ನಾವು ಮಾನವ ಕುಲ ತಾನೊಂದೇ ವಲಂ ಎಂದು ಹೇಳಲು ಸಾದ್ಯವಾಗಿದ್ದು, ರಾಜನನ್ನು ಒದ್ದೋಡಿಸಿ ನಾವೇ ಆಳುವಂತಾಗಿರುವುದು. ಗಣಿತದ ಸೂತ್ರ ದೇವರ ನಿಯಮಗಳಿಂದ ಆಗಿದೆ ಎಂದೂ ಕೂಡ ಹೇಳಿದ್ದಾರೆ ಆದರೆ ಗಣಿತ ವಿಜ್ಞಾನದ ರಾಣಿ ಇವೆರೆಡೂ ಒಂದೇ ಬೇರೆ ಬೇರೆ ಅಲ್ಲ.
ಜ್ಞಾನ-ವಿಜ್ಞಾನ ಎಂದರೇನು?
ಜ್ಞಾನ ಎಂದರೆ ಕೇವಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ ನಡೆಸುವುದು ಇದು ತಪಸ್ಸಿನಿಂದ ಲಭಿಸುವುದು ಎಂದು ವಿಜ್ಞಾನ ಎಂದರೆ ಪ್ರಯೋಗಶಾಲೆಯಲ್ಲಿ ಕಲಿಸುವಂತಹದ್ದು ಎಂದು ಬಹುತೇಕರು ವ್ಯಾಖ್ಯಾನಿಸುತ್ತಾರೆ, ಜ್ಞಾನ ವಿಜ್ಞಾನಕ್ಕಿಂತ ಶ್ರೇಷ್ಠ, ವಿಜ್ಞಾನಕ್ಕೆ ಮಾನವೀಯ ಮುಖಗಳಿಲ್ಲ ಜ್ಞಾನಕ್ಕೆ ಅಂತಃಕರಣ ಇದೆ, ಜ್ಞಾನ ಮತ್ತು ವಿಜ್ಞಾನಗಳು ಎರೆಡೂ ಬೇರೆ ಬೇರೆ ಎಂದೂ ಕೂಡ ವಾದ ಮಾಡುವವರ ದೊಡ್ಡ ಪಡೆಯೇ ಇದೆ. ಭಾರತದ ವಿದ್ಯಾವಂತ ಸಮುದಾಯ ಇವೆರೆಡನ್ನೂ ಅರ್ಥೈಸಿಕೊಳ್ಳುವಲ್ಲಿ ಗೊಂದಲಪಡುತ್ತಿವೆ. ಈ ಗೊಂದಲಕಾರಿ ನಡಾವಳಿಯನ್ನು ಭಾರತದಂತಹ ಜನಸಮುದಾಯದಲ್ಲಿ ಬೇರೂರಿಸಲು ಮಠಾಧಿಪತಿಗಳು, ಪಾಳೇಗಾರಿಗಳು, ಪುರೋಹಿತಶಾಹಿಗಳು ವಿಜ್ಞಾನವನ್ನು ಬಾಂಬು ತಯಾರಿಸುವ ತಂತ್ರಗಾರಿಕೆ, ಕೊಲೆಮಾಡುವ ಬಂದೂಕಿನ ಜನಕ, ಮಾಲಿನ್ಯ ಹುಟ್ಟಿಸುವ ಕಾರ್ಖಾನೆಗಳ ಪಿತಾಮಹ, ನೈತಿಕತೆಯನ್ನು ಕಿತ್ತುಕೊಂಡ ಅತಿರಂಜಕ ಎಂದೇ ಪ್ರವಚನ ನೀಡುವುದು.
ಜಗತ್ತಿನ ವಿಜ್ಞಾನಿಗಳು, ಚಿಂತಕರು, ಪ್ರಜಾಪ್ರಭುತ್ವವಾದಿಗಳು ಐತಿಹಾಸಿಕ ಪರಂಪರೆಗಳ ಆಧಾರದಿಂದ, ವೈಜ್ಞಾನಿಕ ವಿಶ್ಲೇಷಣೆಗಳಿಂದ ಜ್ಞಾನ ಮತ್ತು ವಿಜ್ಞಾನ ಪರಸ್ಪರ ಪೂರಕ ಹಾಗೂ ಬಲವರ್ಧಕ ಎಂದು ಪ್ರತಿಪಾದಿಸುತ್ತಾರೆ. ಜ್ಞಾನ ಎಂದರೆ ಮಾನವನ ಗ್ರಹಿಕೆಗೆ ನಿಲುಕುವ ಎಲ್ಲ ಭೌತಿಕ ಮತ್ತು ಅಭೌತಿಕ ವಸ್ತುಗಳ ಕುರಿತ ತಿಳುವಳಿಕೆ. ವಿಜ್ಞಾನ ಎಂದರೆ ಆ ತಿಳುವಳಿಕೆಯನ್ನು ಅಭ್ಯಸಿಸಿ, ಪ್ರಯೋಗಾತ್ಮಕವಾಗಿ ಪ್ರಮಾಣಿಕರಿಸಿ ತೀರ್ಮಾನಿಸುವುದು, ಆ ತೀರ್ಮಾನ ಇನ್ನೊಂದು ಜ್ಞಾನವಾಗಿ ಹೊರಹೊಮ್ಮುತ್ತದೆ ಹಾಗೆ ಜ್ಞಾನ ಮತ್ತು ವಿಜ್ಞಾನಗಳು ಕಾಲ, ನಿಸರ್ಗ, ಸಂದರ್ಭಗಳ ಸವೆತದಲ್ಲಿ ಹೆಚ್ಚು ಹೆಚ್ಚು ಪ್ರಭುದ್ಧಗೊಳ್ಳುತ್ತಾ ಸಾಗುತ್ತದೆ. ಜ್ಞಾನ ಮತ್ತು ವಿಜ್ಞಾನಕ್ಕೆ ಮಿತಿ, ಎಲ್ಲೆ, ಕ್ಷೇತ್ರಗಳ ಪರಿಮಿತಿ ಇಲ್ಲ.
ನೈಸರ್ಗಿಕ ತತ್ವಗಳನ್ನು ಅರ್ಥೈಸಿಕೊಂಡು ಅದನ್ನು ಮಾನವ ಜೀವಿಗಳ ಕಲ್ಯಾಣಕ್ಕಾಗಿ ಬಳಸಲು ಆಲೋಚಿಸುವ ಜ್ಞಾನಗಳ ಜ್ಞಾನ ವಿಜ್ಞಾನ ಹಾಗಾಗಿ ಈ ವಿಜ್ಞಾನ ಜ್ಞಾನವನ್ನು ಜಗತ್ತಿನ ಶ್ರೇಷ್ಠ ಸೈದ್ಧಾಂತಿಕ ವಿಜ್ಞಾನಿ ಜೆ.ಡಿ.ಬರ್ನಾಲ್ ೫ ಭಾಗಗಳಲ್ಲಿ ನೋಡ ಬೇಕೆಂದು ಸೂಚಿಸಿದ್ದಾರೆ. ಒಂದು ಸಾಂಸ್ಥಿಕ ಸಂರಚನೆಯಾಗಿ, ಒಂದು ಪದ್ಧತಿಯಾಗಿ, ಪರಂಪರಯಾಗಿ ಜ್ಞಾನವು ಸಂಚಿತವಾಗಿರುವ ಆಗರವಾಗಿ, ಉತ್ಪತ್ತಿ ಮಡುವ ಮತ್ತು ಅದನ್ನು ಅಭಿವೃದ್ಧಿಪಡಿಸುವ ಒಂದು ಪ್ರಮುಖ ಅಂಗವಾಗಿ ಹಾಗೂ ವಿಶ್ವ ಮತ್ತು ಮಾನವನ ಬಗೆಗಿನ ನಂಬಿಕೆ ಮತ್ತು ಭಾವನೆಗಳನ್ನು ರೂಪಿಸುವ ಪ್ರಭಲ ಪ್ರಭಾವಿ ವಲಯದಂತೆ ಇವೆಲ್ಲವನ್ನೂ ಒಟ್ಟು ಮಾಡಿದಾಗ ಮೂಡುವ ಒಂದು ಕಲ್ಪನೆಯೇ ವಿಜ್ಞಾನ.
ನಂಬಿಕೆ ಎಂದರೆ ಮುಗ್ಧತೆ ಮತ್ತು ಭಕ್ತಿ, ಮೂಢ ನಂಬಿಕೆ ಎಂದರೆ ಅಜ್ಞಾನ ಮತ್ತು ಭಯ, ಜ್ಞಾನ ಎಂದರೆ ತಿಳಿವು, ವಿಜ್ಞಾನ ಅಥವ ವಿಜ್ಞಾನದ ಹಾದಿ ಎಂದರೆ ಸತ್ಯ, ವೈಜ್ಞಾನಿಕ ಮನೋಧರ್ಮ ಎಂದರೆ ಪ್ರಯೋಗ.
ಮಾನವನ ವಿಚಾರ ಮತ್ತು ಅನುಭವಗಳಲ್ಲಿ ಬಹುತೇಕವು ವೈಜ್ಞಾನಿಕವಾಗಿ ವಿವರಿಸಲು ಸಾಧ್ಯವಾಗಲಿಲ್ಲ ಅಂತವುಗಳನ್ನು ಅಂತರ್ಬೋದೆ ಮತ್ತು ತತ್ವಜ್ಞಾನದ ದೃಷ್ಠಿಯಲ್ಲಿ ವಿವರಣೆ ನೀಡಲಾಯಿತು. ವೈಜ್ಞಾನಿಕವಾಗಿ ವಿವರಿಸಲಾಗದ್ದಕ್ಕೆ ಪುರಾಣ, ಪವಾಡ, ಮಾಟ, ಅಂಧ ಶೃದ್ಧೆಗಳಲ್ಲಿ ವಿವರಣೆ ಕೊಡಲು ಪಟ್ಟಭದ್ರರು, ಪುರೋಹಿತಶಾಹಿಗಳು ಕಂಕಣಬದ್ಧರಾಗಿ ನಿಂತರು. ಹಸಿವು ತುಂಬಿ ನರಳಾಡುತ್ತಿದ್ದ ಜನಸಮುದಾಯಗಳ ಹಸಿವು ದೈವ ನಿಯಾಮಕ, ಅಸ್ಪೃಷ್ಯತೆ ಪೂರ್ವಜನ್ಮದ ಪಾಪದ ಫಲ ಎಂದು ಸಾಬೀತು ಮಾಡಲು ಆಧ್ಯಾತ್ಮ, ದೇವರು, ಧರ್ಮ, ಕರ್ಮ ಸಿದ್ಧಾಂತ ಸೃಷ್ಠಿಸಿದರು.
ವಿಜ್ಞಾನ ಒಂದೇ ಇಲ್ಲಿಯವರೆಗೂ ತನ್ನನ್ನು ತಾನು ವಿಮರ್ಷಿಸಿಕೊಂಡಿರುವುದು, ಉನ್ನತೀಕರಿಸಿಕೊಂಡಿರುವುದು, ಸಾಕ್ಷೀಕರಿಸಿಕೊಂಡಿರುವುದು. [ಥೇಲಿಸ್, ಆರ್ಯಭಟ, ಕೋಪರ್ನಿಕಸ್, ಗೆಲೆಲಿಯೋ, ನ್ಯೂಟನ್, ಐನ್ಸಟೀನ್ ಹಾಗೂ ಹಾಕಿಂಗನ ಸಿದ್ದಾಂತಗಳು ಒಂದಕ್ಕೊಂದು ಪೂರಕ ಹಾಗೂ ಉನ್ನತೀಕಾರಕ ತಪ್ಪುಗಳನ್ನ ತೋರಿಸಿರುವುದಲ್ಲ.] ಆ ಕಾರಣದಿಂದಲೇ ವೈಜ್ಞಾನಿಕ ಮನೋಧರ್ಮ ಮಾತ್ರವೇ ನಿಸರ್ಗದ ನಿಯಮ ಮತ್ತು ಅಂತಸತ್ವವನ್ನು ಅರಿಯಲು ಸಾಧ್ಯ. ಏಕೆಂದರೆ ವೈಜ್ಞಾನಿಕ ಮನೋಧರ್ಮದ ಮೂಲಭೂತ ಲಕ್ಷಣಗಳು ಎಂದರೆ 1. ಕುತೂಹಲ ಅಥವ ಅನ್ವೇಷಕ ಬುದ್ಧಿ
[curiosity or Inquisition] 2. ವಾಸ್ತವತೆ[Objectivity] 3. ಮುಕ್ತತೆ ಮತ್ತು ಯುಕ್ತತೆ [open minded & covered], ೪. ಧೃಢತೆ ಅಥವ ಅವಿರತ ಪ್ರಯತ್ನ [Perseverance], 5. ನಮೃತೆ(ವಿನಯತೆ) [Humility], 6. ಸೋಲೊಪ್ಪಿಕೊಳ್ಳುವ ಔದಾರ್ಯ [loyalty to acceptability], 7. ಸಂದೇಹ/ಅನುಮಾನತೆ [Skeptism ] ಹಾಗೂ 8. ವೈಚಾರಿಕತೆ [Rationalism]
ವಿಜ್ಞಾನ ಅದರ ವಿಕಾಸದ ಮಾರ್ಗ ತಿಳಿಯಹೊರಟರೆ ತಾನಾಗೇ ಹೊಳೆಯುತ್ತದೆ. ಜೀವ ವಿಕಾಸದ ಪ್ರಕ್ರಿಯೆಯಲ್ಲಿ ಮಾನವ ೪ ಮಹತ್ವಪೂರ್ಣ ವಿಷಯಗಳಲ್ಲಿ ಪರಿಣಿತಿಗಳಿಸಿದ್ದಾನೆ ೧. ಯಂತ್ರ ಸಾಧನಗಳ ತಯಾರಿಕೆ, ೨. ಶಬ್ಧ ಸಂಪತ್ತಿನ ಬೆಳವಣಿಗೆ ೩. ಸಾಮಾಜಿಕ ವ್ಯವಸ್ಥೆಯ ಅಭಿವೃದ್ಧಿ ಮತ್ತು ೪. ತಾರ್ಕಿಕ ಆಲೋಚನಾ ಲಹರಿ. ಇವೆಲ್ಲವೂ ಜ್ಞಾನ ವಿಜ್ಞಾನಗಳ ಸಮರಸ ಬೆಳವಣಿಗೆ ಫಲ. ಆಧ್ಯಾತ್ಮ, ಯಾಗ-ಯಜ್ಞ, ಪೂಜೆ-ಪುನಸ್ಕಾರ ಇಲ್ಲಿಯವರೆಗೂ ಯಾವ ಮಾನವನ ಅಭಿಚ್ಛೆಗಳನ್ನ ನೆರವೇರಿಸಿಲ್ಲ, ಅಸ್ಪೃಷ್ಯತೆಯನ್ನು ನೀಗಿಸಿಲ್ಲ ಎಲ್ಲ ಮಾನವರ ರಕ್ತ ಒಂದೇ ಎಂದು ಎಲ್ಲೂ ಹೇಳಿದ ದಾಖಲೆಗಳೇ ಇಲ್ಲ.
ಭಾರತಕ್ಕೆ ವಿಜ್ಞಾನದ ಅನಿವಾರ್ಯತೆ
ಕಳೆದ ಒಂದು ಶತಮಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಅಗಾಧ ಪ್ರಮಾಣದಲ್ಲಿ ಆಗಿದೆ. ಒಂದಲ್ಲಾ ಒಂದು ಸಂದರ್ಭದಲ್ಲಿ ಎಲ್ಲ ಜನವರ್ಗಗಳೂ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವಕ್ಕೆ ಒಳಗಾಗಿದ್ದಾರೆ. ದೃಶ್ಯ ಮಾಧ್ಯಮಗಳು ಮತ್ತು ಅಕ್ಷರ ಮಾಧ್ಯಮಗಳು ಜನರ ಮಧ್ಯೆ ಹೆಚ್ಚಿದಷ್ಟೂ ವಿಜ್ಞಾನ ಮತ್ತು ತಂತ್ರಜ್ಞಾನದ ಹರಿವೂ ಸಹಾ ಹೆಚ್ಚಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಉತ್ಪನ್ನಗಳನ್ನು ಜನರು ಬಳಸುತ್ತಿರುವ ವೇಗ ಹೆಚ್ಚಾಗುತ್ತಿದ್ದರೂ, ವಿಜ್ಞಾನದ ಫಲಿತಗಳ ಹಿಂದಿರುವ ವೈಜ್ಞಾನಿಕ ಜ್ಞಾನ ಮತ್ತು ಅದರ ಮೂಲದ ಬಗ್ಗೆ ಜನರಿಗೆ ತಿಳುವಳಿಕೆ ಇಲ್ಲದಿರುವುದು ವಿಜ್ಞಾನ ಸಾಮಾಜಿಕ ಬದಲಾವಣೆಯ ಒಂದು ಅಸ್ತ್ರವಾಗಿ ಕೆಲಸ ಮಾಡಲು ಅಡ್ಡಿಯಾಗಿದೆ.
ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆ ಹೆಚ್ಚಾದಂತೆ ಅಭಿವೃದ್ಧಿಯ ವೇಗ ಸಹಾ ಹೆಚ್ಚಿದೆ. ಆದರೆ ಈ ಅಭಿವೃದ್ದಿ ಕೆಲವೇ ಜನರ ಸ್ವಾರ್ಥ ಸಾಧನೆಗಾಗಿ ಬಳಕೆಯಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮತ್ತು ಮಾನವ ನಾಶದ ಸಂದರ್ಭಗಳು ಹೆಚ್ಚುತ್ತಿರುವುದರಿಂದ ಸ್ವಾಭಾವಿಕವಾಗಿ ಜನರಿಗೆ ವಿಜ್ಞಾನದ ಬಗ್ಗೆ ಒಂದು ರೀತಿಯ ಭಯ ಹಾಗೂ ತಾತ್ಸಾರ ಉಂಟಾಗುತ್ತಿದೆ. ಇದಕ್ಕೆ ಇಂಬು ಕೊಡುವ ರೀತಿಯಲ್ಲಿ ಪ್ರತಿಷ್ಠಿತ ಸಾಹಿತಿಗಳೆನ್ನುವವರು ಸಹಾ ತಮ್ಮ ಸಾಹಿತ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಟೀಕಿಸಿ ಬರೆಯುತ್ತಿರುವ ಕಾರಣದಿಂದ ಶಿಕ್ಷಿತ ವರ್ಗದಲ್ಲಿ ಸಹಾ ವಿಜ್ಞಾನ ವಿರೋಧಿ ಭಾವನೆಗಳು ಬೆಳೆಯಲಾರಂಭಿಸಿವೆ.
ಮೇಲಿನ ನಕಾರಾತ್ಮಕ ಮನೋಭಾವದ ಬೆಳವಣಿಗೆಗೆ ಕಾರಣವಾದ ಮತ್ತೊಂದು ಅಂಶವೆಂದರೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ. ವಿವಿಧ ಜ್ಞಾನ ವಲಯಗಳ ನಡುವೆ (ಸಾಮಾಜಿಕ ವಿಜ್ಞಾನ, ಮಾನವಿಕ ಅಧ್ಯಯನ, ಸಾಹಿತ್ಯ ಅಧ್ಯಯನ, ಜೀವವಿಜ್ಞಾನ ಮುಂತಾದವುಗಳು) ಸಹಸಂಬಂಧವಿಲ್ಲದ ಪಠ್ಯಕ್ರಮದ ರಚನೆಯಿಂದಾಗಿ ವಿಜ್ಞಾನ ಓದಿದವರು ಒಂದೋ ಸಮಾಜದ ಆಗುಹೋಗುಗಳಿಗೆ ಮುಖಾಮುಖಿಯಾಗುವ ಮನಸ್ಥಿತಿಯನ್ನು ಕಳೆದುಕೊಂಡಿದ್ದಾರೆ ಅಥವಾ ಸಮಾಜ ವಿರೋಧಿಗಳಾಗಿ ರೂಪುಗೊಳ್ಳುತ್ತಿದ್ದಾರೆ. ಮತ್ತೊಂದೆಡೆ ಮಾನವಿಕ ಅಧ್ಯಯನಗಳನ್ನು ಅಭ್ಯಸಿಸಿದವರು ವಿಜ್ಞಾನದ ಫಲಿತಗಳ ಉಪಯೋಗ ಪಡೆದುಕೊಂಡೇ ವಿಜ್ಞಾನ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ. ಇದು ವಿಜ್ಞಾನವನ್ನು ಸಾಮಾಜಿಕ ಬದಲಾವಣೆಯ ವಾಹಿನಿಯನ್ನಾಗಿ ಬಳಸಬಹುದಾದ ಸಾಧ್ಯತೆಗಳನ್ನು ದೂರ ಮಾಡಿವೆ. ವಿಜ್ಞಾನದ ವಿಕಾಸ ಮನುಕುಲದ ಸರ್ವತೋಮುಖ ಬೆಳವಣಿಗೆಗೆ ರಹದಾರಿಯಾಗಿದೆ. ಮಾನವನ ಚಿಂತನಾ ಲಹರಿಯನ್ನು ಅಂಧತ್ವದಿಂದ ಮಾನವತ್ವದತ್ತ ವಿಕಾಸಿಸಿದೆ, ಊಳಿಗಮಾನ್ಯ ಅಮಾನವೀಯ ಪಾಳೇಗಾರಿ ಮೌಲ್ಯದ ಸಮಾಜದಿಂದ ಧರ್ಮನಿರಪೇಕ್ಷ ಪ್ರಜಾತಾಂತ್ರಿಕ ಗುಣಲಕ್ಷಣ ತುಂಬಿಕೊಂಡ ಪ್ರಜಾಪ್ರಭುತ್ವವನ್ನು ಮೈದಾಳಿಸಿ ನಿಲ್ಲಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಅಬ್ಯುದಯ ಮಾನವನ ಚಟುವಟಿಕೆಯನ್ನು ಸುಲಭ, ವೇಗ ಹಾಗೂ ಪ್ರಬುದ್ಧಗೊಳಿಸಿದೆ. ಯಾವ ದೇಶ ವಿಜ್ಞಾನವನ್ನು ಅಭಿವೃದ್ಧಿಯ ಮಂತ್ರವಾಗಿಸಿಕೊಂಡಿದೆಯೋ ಆ ರಾಷ್ಟ್ರಗಳು ಅಭಿವೃದ್ದಿಹೊಂದಿದ ದೇಶಗಳಾಗಿ ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿವೆ ಹಾಗೂ ಆ ದೇಶಗಳ ದಾರಿದ್ರ್ಯವನ್ನು ನೀಗಿಸುವತ್ತ ಮುನ್ನುಗ್ಗಿದೆ.
ಭಾರತ ದೇಶವೂ ಕೂಡ ಪಾಳೇಗಾರಿ ಸಂಸ್ಕೃತಿಯನ್ನು ಕಿತ್ತೆಸೆದು ಪ್ರಜಾಪ್ರಭುತ್ವವನ್ನು ಸ್ಥಾಪಿಸಿದೆ. ಪ್ರಜಾಪ್ರಭುತ್ವ ಯಶ ಸಾದಿಸಬೇಕಾದರೆ ವಿಜ್ಞಾನದ ಬೆಳವಣಿಗೆಯೂ ಕೂಡ ಸಮ ಪ್ರಮಾಣದಲ್ಲಿ ಬೆಳೆಯಬೇಕಾಗಿದೆ. ವಿಜ್ಞಾನ ವಿಕಾಸವಾಗಲು ವೈಜ್ಞಾನಿಕ ಮನೋಧರ್ಮದ ಬೆಳವಣಿಗೆ ಅಗತ್ಯವಾಗಿ ಆಗಬೇಕಾಗಿದೆ ಇದು ನಮ್ಮ ಸಂವಿಧಾನದ ಆಶಯವೂ ಕೂಡ ಆಗಿದೆ.
ಹಾಗಾಗಿ ಭಾರತದ ಸಂಸ್ಕೃತಿಯಲ್ಲಿ ಬೆಳೆದು ನಿಂತಿರುವ ಮೌಢ್ಯಗಳನ್ನು ಕಿತ್ತೆಸೆದು ವೈಜ್ಞಾನಿಕ ಮನೋಧರ್ಮವನ್ನು ಜನರಲ್ಲಿ ಬೆಳೆಸಿ ಆ ಮೂಲಕ ದೇಶವನ್ನು ವೈಜ್ಞಾನಿಕ ಪ್ರಗತಿಯತ್ತ ಕೊಂಡೊಯ್ಯುವಂತೆ ಮಾಡಲು ಶ್ರಮಿಸುವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ, ಭಾರತದ ಸಂವಿಧಾನದ ಆಶಯಗಳನ್ನು ಗೌರವಿಸುವ ಹಾಗೂ ಪ್ರಗತಿಪರ ಆಲೋಚನೆಗಳಲ್ಲಿ ತೊಡಗಿರುವ ಎಲ್ಲ ಭಾರತೀಯರ ಜವಾಬ್ದಾರಿ ಆಗಿದೆ.
ಅಹಮದ್ ಹಗರೆ
ಬಿಜಿವಿಎಸ್-ಹಾಸನ

No comments:
Post a Comment