ಭಾರತ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ರಾಜ್ಯ
BHARATH
GYAN VIGYAN SAMITHI, KARNATAKA STATE
ಸಂವಿಧಾನ
1. ಪೀಠಿಕೆ
ಭಾರತದ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು ಹಾಗೂ ಇತರರಲ್ಲಿ ವೈಜ್ಞಾನಿಕತೆಯನ್ನು ಬಿತ್ತುವುದು, ಮಾನವೀಯ ಮೌಲ್ಯಗಳನ್ನು ವೃದ್ದಿಸಿಕೊಳ್ಳುವುದು ಹಾಗೂ ಸಂಶೋಧನಾ ಗುಣಗಳನ್ನು ಉತ್ತೇಜಿಸುವುದು ಹಾಗೂ ಅದನ್ನು ಅಭಿವೃದ್ದಿ ಪಡಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಮೂಲ ಭೂತ ಕರ್ತವ್ಯಗಳು.-ಭಾರತದ ಸಂವಿಧಾನ ಮೂಲಭೂತ ಕರ್ತವ್ಯಗಳು ಭಾಗ 4ಎ, ಆರ್ಟಿಕಲ್ 51 ಂ(ಊ)
1.1 ವಿಜ್ಞಾನದ ವಿಕಾಸ ಮನುಕುಲದ ಸರ್ವತೋಮುಖ ಬೆಳವಣಿಗೆಗೆ ರಹದಾರಿಯಾಗಿದೆ. ಮಾನವನ ಚಿಂತನಾ ಲಹರಿಯನ್ನು ಅಂಧತ್ವದಿಂದ ಮಾನವತ್ವದತ್ತ ವಿಕಾಸಿಸಿದೆ, ಊಳಿಗಮಾನ್ಯ ಅಮಾನವೀಯ ಪಾಳೇಗಾರಿ ಮೌಲ್ಯದ ಸಮಾಜದಿಂದ ಧರ್ಮನಿರಪೇಕ್ಷ ಪ್ರಜಾತಾಂತ್ರಿಕ ಗುಣಲಕ್ಷಣ ತುಂಬಿಕೊಂಡ ಪ್ರಜಾಪ್ರಭುತ್ವವನ್ನು ಮೈದಾಳಿಸಿ ನಿಲ್ಲಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಅಬ್ಯುದಯ ಮಾನವನ ಚಟುವಟಿಕೆಯನ್ನು ಸುಲಭ, ವೇಗ ಹಾಗೂ ಪ್ರಬುದ್ಧಗೊಳಿಸಿದೆ. ಯಾವ ದೇಶ ವಿಜ್ಞಾನವನ್ನು ಅಭಿವೃದ್ಧಿಯ ಮಂತ್ರವಾಗಿಸಿಕೊಂಡಿದೆಯೋ ಆ ರಾಷ್ಟ್ರಗಳು ಅಭಿವೃದ್ದಿಹೊಂದಿದ ದೇಶಗಳಾಗಿ ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿವೆ ಹಾಗೂ ಆ ದೇಶಗಳ ದಾರಿದ್ರ್ಯವನ್ನು ನೀಗಿಸುವತ್ತ ಮುನ್ನುಗ್ಗಿದೆ.
ಭಾರತ ದೇಶವೂ ಕೂಡ ಪಾಳೇಗಾರಿ ಸಂಸ್ಕøತಿಯನ್ನು ಕಿತ್ತೆಸೆದು ಪ್ರಜಾಪ್ರಭುತ್ವವನ್ನು ಸ್ಥಾಪಿಸಿದೆ. ಪ್ರಜಾಪ್ರಭುತ್ವ ಯಶ ಸಾದಿಸಬೇಕಾದರೆ ವಿಜ್ಞಾನದ ಬೆಳವಣಿಗೆಯೂ ಕೂಡ ಸಮ ಪ್ರಮಾಣದಲ್ಲಿ ಬೆಳೆಯಬೇಕಾಗಿದೆ. ವಿಜ್ಞಾನ ವಿಕಾಸವಾಗಲು ವೈಜ್ಞಾನಿಕ ಮನೋಧರ್ಮದ ಬೆಳವಣಿಗೆ ಅಗತ್ಯವಾಗಿ ಆಗಬೇಕಾಗಿದೆ ಇದು ನಮ್ಮ ಸಂವಿಧಾನದ ಆಶಯವೂ ಕೂಡ ಆಗಿದೆ.
ಭಾರತದ ಸಂಸ್ಕøತಿಯಲ್ಲಿ ಬೆಳೆದು ನಿಂತಿರುವ ಮೌಢ್ಯಗಳನ್ನು ಕಿತ್ತೆಸೆದು ವೈಜ್ಞಾನಿಕ ಮನೋಧರ್ಮವನ್ನು ಜನರಲ್ಲಿ ಬೆಳೆಸಿ ಆ ಮೂಲಕ ದೇಶವನ್ನು ವೈಜ್ಞಾನಿಕ ಪ್ರಗತಿಯತ್ತ ಕೊಂಡೊಯ್ಯುವಂತೆ ಮಾಡಲು ಶ್ರಮಿಸುವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ, ಭಾರತದ ಸಂವಿಧಾನದ ಆಶಯಗಳನ್ನು ಗೌರವಿಸುವ ಹಾಗೂ ಪ್ರಗತಿಪರ ಆಲೋಚನೆಗಳಲ್ಲಿ ತೊಡಗಿರುವ ಎಲ್ಲ ಭಾರತೀಯರ ಜವಾಬ್ದಾರಿ ಆಗಿದೆ.
1.2 ಜ್ಞಾನ ಎಂದರೆ ಕೇವಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ ನಡೆಸುವುದು ಇದು ತಪಸ್ಸಿನಿಂದ ಲಭಿಸುವುದು ಎಂದು ವಿಜ್ಞಾನ ಎಂದರೆ ಪ್ರಯೋಗಶಾಲೆಯಲ್ಲಿ ಕಲಿಸುವಂತಹದ್ದು ಎಂದು ಬಹುತೇಕರು ವ್ಯಾಖ್ಯಾನಿಸುತ್ತಾರೆ, ಜ್ಞಾನ ವಿಜ್ಞಾನಕ್ಕಿಂತ ಶ್ರೇಷ್ಠ, ವಿಜ್ಞಾನಕ್ಕೆ ಮಾನವೀಯ ಮುಖಗಳಿಲ್ಲ ಜ್ಞಾನಕ್ಕೆ ಅಂತಃಕರಣ ಇದೆ, ಜ್ಞಾನ ಮತ್ತು ವಿಜ್ಞಾನಗಳು ಎರೆಡೂ ಬೇರೆ ಬೇರೆ ಎಂದೂ ಕೂಡ ವಾದ ಮಾಡುವವರ ದೊಡ್ಡ ಪಡೆಯೇ ಇದೆ ಭಾರತದ ವಿದ್ಯಾವಂತ ಸಮುದಾಯ ಇವೆರೆಡನ್ನೂ ಅರ್ಥೈಸಿಕೊಳ್ಳುವಲ್ಲಿ ಗೊಂದಲಪಡುತ್ತಿವೆ.
1.3 ಭಾರತ ಜ್ಞಾನ ವಿಜ್ಞಾನ ಸಮಿತಿಯು ಐತಿಹಾಸಿಕ ಪರಂಪರೆಗಳ ಆದಾರದಿಂದ ವೈಜ್ಞಾನಿಕ ವಿಶ್ಲೇಷಣೆಗಳಿಂದ ಜ್ಞಾನ ಮತ್ತು ವಿಜ್ಞಾನ ಪರಸ್ಪರ ಪೂರಕ ಹಾಗೂ ಬಲವರ್ಧಕ ಎಂದು ಪ್ರತಿಪಾದಿಸುತ್ತದೆ. ಜ್ಞಾನ ಎಂದರೆ ಮಾನವನ ಗ್ರಹಿಕೆಗೆ ನಿಲುಕುವ ಎಲ್ಲ ಭೌತಿಕ ಮತ್ತು ಅಭೌತಿಕ ವಸ್ತುಗಳ ಕುರಿತ ತಿಳುವಳಿಕೆ ವಿಜ್ಞಾನ ಎಂದರೆ ಆ ತಿಳುವಳಿಕೆಯನ್ನು ಅಭ್ಯಸಿಸಿ, ಪ್ರಯೋಗಾತ್ಮಕವಾಗಿ ಪ್ರಮಾಣಿಕರಿಸಿ ತೀರ್ಮಾನಿಸುವುದು ಆ ತೀರ್ಮಾನ ಇನ್ನೊಂದು ಜ್ಞಾನವಾಗಿ ಹೊರಹೊಮ್ಮುತ್ತದೆ ಹಾಗೆ ಜ್ಞಾನ ಮತ್ತು ವಿಜ್ಞಾನಗಳು ಕಾಲ, ನಿಸರ್ಗ, ಸಂದರ್ಭಗಳ ಸವೆತದಲ್ಲಿ ಹೆಚ್ಚು ಹೆಚ್ಚು ಪ್ರಭುದ್ಧಗೊಳ್ಳುತ್ತಾ ಸಾಗುತ್ತದೆ. ಜ್ಞಾನ ಮತ್ತು ವಿಜ್ಞಾನಕ್ಕೆ ಮಿತಿ, ಎಲ್ಲೆ, ಕ್ಷೇತ್ರಗಳ ಪರಿಮಿತಿ ಇಲ್ಲ.
1.4 ನೈಸರ್ಗಿಕ ತತ್ವಗಳನ್ನು ಅರ್ಥೈಸಿಕೊಂಡು ಅದನ್ನು ಮಾನವ ಜೀವಿಗಳ ಕಲ್ಯಾಣಕ್ಕಾಗಿ ಬಳಸಲು ಆಲೋಚಿಸುವ ಜ್ಞಾನಗಳ ಜ್ಞಾನ ವಿಜ್ಞಾನ ಹಾಗಾಗಿ ಈ ವಿಜ್ಞಾನ ಜ್ಞಾನವನ್ನು ಜಗತ್ತಿನ ಶ್ರೇಷ್ಠ ಸೈದ್ಧಾಂತಿಕ ವಿಜ್ಞಾನಿ ಜೆ.ಡಿ.ಬರ್ನಾಲ್ 5 ಭಾಗಗಳಲ್ಲಿ ನೋಡ ಬೇಕೆಂದು ಸೂಚಿಸಿದ್ದಾರೆ.
1. ಒಂದು ಸಾಂಸ್ಥಿಕ ಸಂರಚನೆಯಾಗಿ
2. ಒಂದು ಪದ್ಧತಿಯಾಗಿ
3. ಪರಂಪರಯಾಗಿ ಜ್ಞಾನವು ಸಂಚಿತವಾಗಿರುವ ಆಗರವಾಗಿ
4. ಉತ್ಪತ್ತಿ ಮಡುವ ಮತ್ತು ಅದನ್ನು ಅಭಿವೃದ್ಧಿಪಡಿಸುವ ಒಂದು ಪ್ರಮುಖ ಅಂಗವಾಗಿ
5. ವಿಶ್ವ ಮತ್ತು ಮಾನವನ ಬಗೆಗಿನ ನಂಬಿಕೆ ಮತ್ತು ಭಾವನೆಗಳನ್ನು ರೂಪಿಸುವ ಪ್ರಬಲ ಪ್ರಭಾವಿ ವಲಯದಂತೆ
ಇವೆಲ್ಲವನ್ನೂ ಒಟ್ಟು ಮಾಡಿದಾಗ ಮೂಡುವ ಒಂದು ಕಲ್ಪನೆಯೇ ವಿಜ್ಞಾನ.
1.5 ನಂಬಿಕೆ ಎಂದರೆ ಮುಗ್ಧತೆ ಮತ್ತು ಭಕ್ತಿ, ಮೂಢ ನಂಬಿಕೆ ಎಂದರೆ ಅಜ್ಞಾನ ಮತ್ತು ಭಯ, ಜ್ಞಾನ ಎಂದರೆ ತಿಳಿವು, ವಿಜ್ಞಾನ ಅಥವ ವಿಜ್ಞಾನದ ಹಾದಿ ಎಂದರೆ ಸತ್ಯ, ವೈಜ್ಞಾನಿಕ ಮನೋಧರ್ಮ ಎಂದರೆ ಪ್ರಯೋಗ
1.6 ಮಾನವನ ವಿಚಾರ ಮತ್ತು ಅನುಭವಗಳಲ್ಲಿ ಬಹುತೇಕವು ವೈಜ್ಞಾನಿಕವಾಗಿ ವಿವರಿಸಲು ಸಾಧ್ಯವಾಗಲಿಲ್ಲ ಅಂತವುಗಳನ್ನು ಅಂತರ್ಬೋದೆ ಮತ್ತು ತತ್ವಜ್ಞಾನದ ದೃಷ್ಠಿಯಲ್ಲಿ ವಿವರಣೆ ನೀಡಲಾಯಿತು. ವೈಜ್ಞಾನಿಕವಾಗಿ ವಿವರಿಸಲಾಗದ್ದಕ್ಕೆ ಪುರಾಣ, ಪವಾಡ, ಮಾಟ, ಅಂಧ ಶೃದ್ಧೆಗಳಲ್ಲಿ ವಿವರಣೆ ಕೊಡಲು ಪಟ್ಟಭದ್ರರು, ಪುರೋಹಿತಶಾಹಿಗಳು ಕಂಕಣಬದ್ಧರಾಗಿ ನಿಂತರು.
1.7 ವೈಜ್ಞಾನಿಕ ಮನೋಧರ್ಮದ ಮೂಲಭೂತ ಲಕ್ಷಣಗಳು
1. ಕುತೂಹಲ ಅಥವ ಅನ್ವೇಷಕ ಬುದ್ಧಿ [ಛಿuಡಿiosiಣಥಿ oಡಿ Iಟಿquisiಣioಟಿ]
2. ವಾಸ್ತವತೆ [ಔbರಿeಛಿಣiviಣಥಿ]
3. ಮುಕ್ತತೆ ಮತ್ತು ಯುಕ್ತತೆ [oಠಿeಟಿ miಟಿಜeಜ & ಛಿoveಡಿeಜ]
4. ಧೃಢತೆ ಅಥವ ಅವಿರತ ಪ್ರಯತ್ನ [Peಡಿseveಡಿಚಿಟಿಛಿe]
5. ನಮೃತೆÀ(ವಿನಯತೆ) [ಊumiಟiಣಥಿ]
6. ಸೋಲೊಪ್ಪಿಕೊಳ್ಳುವ ಔದಾರ್ಯ [ಟoಥಿಚಿಟಣಥಿ ಣo ಚಿಛಿಛಿeಠಿಣಚಿbiಟiಣಥಿ]
7. ಸಂದೇಹ/ಅನುಮಾನತೆ [Sಞeಠಿಣism ]
8. ವೈಚಾರಿಕತೆ [ಖಚಿಣioಟಿಚಿಟism]
1.8 ವಿಜ್ಞಾನ ಅದರ ವಿಕಾಸದ ಮಾರ್ಗ ತಿಳಿಯಹೊರಟರೆ ತಾನಾಗೇ ಹೊಳೆಯುತ್ತದೆ. ಜೀವ ವಿಕಾಸದ ಪ್ರಕ್ರಿಯೆಯಲ್ಲಿ ಮಾನವ 4 ಮಹತ್ವಪೂರ್ಣ ವಿಷಯಗಳಲ್ಲಿ ಪರಿಣಿತಿಗಳಿಸಿದ್ದಾನೆ 1. ಯಂತ್ರ ಸಾಧನಗಳ ತಯಾರಿಕೆ, 2. ಶಬ್ಧ ಸಂಪತ್ತಿನ ಬೆಳವಣಿಗೆ 3. ಸಾಮಾಜಿಕ ವ್ಯವಸ್ಥೆಯ ಅಭಿವೃದ್ಧಿ ಮತ್ತು 4. ತಾರ್ಕಿಕ ಆಲೋಚನಾ ಲಹರಿ. ಇವೆಲ್ಲವೂ ಜ್ಞಾನ ವಿಜ್ಞಾನಗಳ ಸಮರಸ ಬೆಳವಣಿಗೆ ಫಲ.
2. ಸಂಘದ ಹೆಸರು
ಭಾರತ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ಎಂದಿರತಕ್ಕದ್ದು3. ವ್ಯಾಪ್ತಿ
ರಾಜ್ಯದಲ್ಲಿರುವ ಭಾರತೀಯ ಪೌರತ್ವ ಪಡೆದ 18 ವರ್ಷ ಮೀರಿದ ಎಲ್ಲಾ ಜನವಿಭಾಗ.4. ಕಛೇರಿ ಮತ್ತು ವಿಳಾಸ’ಮತ್ತು ವ್ಯವಹಾರದ ವೇಳೆ’’’’’’’’’’
o ಕೇಂದ್ರ ಕಛೇರಿ:ಭಾರತ ಜ್ಞಾನ ವಿಜ್ಞಾನ ಸಮಿತಿ.
ಕೇರ್ ಆಫ್ ಎಲೆಕ್ಟ್ರೋಕೆಮಿಕಲ್ ಸೊಸೈಟಿ ಆಫ್ ಇಂಡಿಯ
ಭಾರತೀಯ ವಿಜ್ಞಾನ ಮಂದಿರದ ಆವರಣ
ಬೆಂಗಳೂರು- 560012
ದೂರವಾಣಿ: 334 2384
o ಎಲ್ಲಾ ಸಂಪರ್ಕವನ್ನು ರಿಜಿಸ್ಟ್ರಾರ್ ರವರು ಈ ಕೆಳಗಿನ ವಿಳಾಸಕ್ಕೆ ವ್ಯವಹಾರಿಸುವುದು.
ಕಾರ್ಯದರ್ಶಿ
ಭಾರತ ಜ್ಞಾನ ವಿಜ್ಞಾನ ಸಮಿತಿ.
ಕೇರ್ ಆಫ್ ಎಲೆಕ್ಟ್ರೋಕೆಮಿಕಲ್ ಸೊಸೈಟಿ ಆಫ್ ಇಂಡಿಯ
ಭಾರತೀಯ ವಿಜ್ಞಾನ ಮಂದಿರದ ಆವರಣ
ಬೆಂಗಳೂರು- 560012
o ಜಿಲ್ಲಾ ಮತ್ತು ತಾಲೋಕು ಸಮಿತಿಗಳು ಸಂಬಂದಿಸಿದ ಜಿಲ್ಲಾ ಮತ್ತು ತಾಲೋಕು ಕೇಂದ್ರಗಳಲ್ಲಿ ಕೇಂದ್ರ ಸಮಿತಿಯನ್ನು ಅನುಕೂಲಕ್ಕೆ ತಕ್ಕಂತೆ ತೆರೆದುಕೊಳ್ಳುವುದು.
o ಕೇಂದ್ರ ಕಚೇರಿಯ ವೇಳೆ: ಕಛೇರಿಯು ಭಾನುವಾರ ಹಾಗೂ ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ.
5. ಗುರಿ
ಭಾರತವನ್ನು ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಮುಕ್ತಗೊಳಿಸಿ ವೈಜ್ಞಾನಿಕ ಮತ್ತು ವೈಚಾರಿಕ ಭಾರತ ಕಟ್ಟುವುದು.6. ಧ್ಯೇಯೋದ್ದೇಶಗÀಳು
6.1 ವಿಜ್ಞಾನವನ್ನು ಜನಗಳಲ್ಲಿ ಪ್ರಸಾರ ಮಾಡಿ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸುವಂತೆ ಪ್ರೇರೇಪಿಸುವುದು.
6.2 ಜನಗಳಲ್ಲಿರುವ ಮೂಢನಂಬಿಕೆಯನ್ನು ದೂರೀಕರಿಸಿ ವೈಜ್ಞಾನಿಕ ಮನೋಧರ್ಮ ಬೆಳೆಸುವಲ್ಲಿ ಶ್ರಮಿಸುವುದು.
6.3 ಜನರ ಸಾಂಸ್ಕøತಿಕ, ಸಾಮಾಜಿಕ, ವೈಜ್ಞಾನಿಕ ಮತ್ತು ವೈಚಾರಿಕ ಮಟ್ಟವನ್ನು ಉನ್ನತೀಕರಿಸುವುದು.
6.4 ಜನರ ವೈಯುಕ್ತಿಕ, ಸಾಮಾಜಿಕ ಮತ್ತು ದೇಶದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಚಿಂತಿಸಿ ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುವ ಜ್ಞಾನ ಬೆಳೆಸುವುದು.
6.5 ಪ್ರಜಾಸತ್ತಾತ್ಮಕ ಹಾಗೂ ಜಾತ್ಯಾತೀತ ಮನೋಧರ್ಮವನ್ನು ಜನತೆಯಲ್ಲಿ ಜಾಗೃತಿಗೊಳಿಸುವುದು.
7. ಲಾಂಛನ
ತ್ರಿವರ್ಣ ಧ್ವಜರೂಪದ ಅಂಡಾಕಾರದ ಮೊಟ್ಟೆಯ ಮೇಲೆ ಕೈಯೆತ್ತಿ ನಿಂತ ಜನರ ರೇಖಾ ವರ್ಣ ಚಿತ್ರ, ಮೊಟ್ಟೆಯ ನಡುವೆ ಬಿಳಿದೇಹ ಹಾಗೂ ಕಪ್ಪು ರೇಖಾ ಚಿತ್ರವುಳ್ಳ 5 ಜನರ ಮಾನವಾಕೃತಿ ಪರಮಾಣು ರಚನೆಯನ್ನು ಹೊತ್ತೊಯ್ಯುತ್ತಿರುವುದು, ಮೊಟ್ಟೆಯ ಎಡ ಕೆಳಭಾಗದಲ್ಲಿ ಕಪ್ಪು ಮಾನವ ತಲೆಯ ಮೇಲೆ ತೆರೆದ ಪುಸ್ತಕ ಹೊತ್ತಿರುವುದು ಮತ್ತು ಪಕ್ಕದಲ್ಲಿ ಬಿಜಿವಿಎಸ್ ಎಂದು ಇಂಗ್ಲೀಷಿನಲ್ಲಿ ಬರೆದಿರುವುದು.ಹಾಗೂ ಮೊಟ್ಟೆಯ ಕೆಳ ಬದಿಯಲ್ಲಿ ಅದಕ್ಕೆ ಅಂಟಿಕೊಂಡು ಜನತೆಗಾಗಿ ವಿಜ್ಞಾನ, ಪ್ರಗತಿಗಾಗಿ ವಿಜ್ಞಾನ ಹಾಗೂ ಶಾಂತಿಗಾಗಿ ವಿಜ್ಞಾನ ಎಂದು ಕನ್ನಡದಲ್ಲಿ ಬರೆದಿರುವುದು.
ಸಂಕೇತ:
1. ಅಂಡಾಕಾರದ ತ್ರಿವರ್ಣ ಮೊಟ್ಟೆ:ಭಾರತದ ಸಂವಿಧಾನದ ಮೂಲಭೂತ ಕರ್ತವ್ಯಗಳು ಭಾಗ 4ಎ, ಆರ್ಟಿಕಲ್ 51 ಂ(ಊ)
2. ಕೈಎತ್ತಿ ನಿಂತ ಜನ: ಜನವಿಜ್ಞಾನ ಚಳುವಳಿಯಲ್ಲಿ ಪಾಲುದಾರಿಕೆ
3. ಪರಮಾಣು ಹೊತ್ತ 5 ಜನ: ವಿಜ್ಞಾನ ಪ್ರಸಾರ
4. ಪುಸ್ತಕಹೊತ್ತ ಕಪ್ಪು ಮನುಷ್ಯ: ಸಾಕ್ಷರತೆ ಹಾಗೂ ಜ್ಞಾನಾಭಿವೃದ್ಧಿ
5. ಕೆಳಗಿನ ಅಕ್ಷರ: ಬಿಜಿವಿಎಸ್ ಧ್ಯೇಯ ಮತ್ತು ಗುರಿ ಹಾಗೂ ಸಂಘಟನೆ ಹೃಸ್ವ ಸ್ವರೂಪ
8. ಕಾರ್ಯಕ್ರಮ/ಚಟುವಟಿಕೆ
8.1 ರಾಜ್ಯಾದ್ಯಾಂತ ಸಾಕ್ಷರತೆ ಮತ್ತು ಸಾಕ್ಷರೋತ್ತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಶ್ರಮಿಸುವುದು.
8.2 ಜನಪರ ವಿಜ್ಞಾನದ ಮತ್ತು ವೈಜ್ಞಾನಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
8.3 ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ, ಸಾಂಸ್ಕøತಿಕ ಮತ್ತು ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು
8.4 ಪ್ರಾಥಮಿಕ ಶಿಕ್ಷಣದ ಬಲವರ್ಧನೆಗಾಗಿ ಶಿಕ್ಷಕರಿಗೆ ತರಬೇತಿ ಶಿಬಿರ, ಹಾಗೂ ಮಕ್ಕಳಿಗಾಗಿ ಶಿಬಿರ ಹಮ್ಮಿಕೊಳ್ಳುವುದು.
8.5 ಸ್ವಾವಲಂಬನೆ, ಅಭಿವೃದ್ದಿ, ಪಂಚಾಯತ್‍ರಾಜ್ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವ ಯೋಜನೆಗಳನ್ನು ನಡೆಸುವುದು.
8.6 ಸಂಪನ್ಮೂಲ ಕೇಂದ್ರ ಹಾಗೂ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವುದು.
8.7 ಮಹಿಳಾ ಸಶಕ್ತತಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
8.8 ಪರಿಸರ ಶಿಕ್ಷಣವನ್ನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ನಡುವೆ ಹಮ್ಮಿಕೊಳ್ಳುವುದು.
8.9 ಜನರಲ್ಲಿ ಮೂಢನಂಬಿಕೆಗಳನ್ನು ದೂರಮಾಡಲು ಕಲಾಜಾಥ, ಪವಾಡರಹಸ್ಯ ಬಯಲು ಚಟುವಟಿಕೆ ಹಮ್ಮಿಕೊಳ್ಳುವುದು.
8.10 ಗ್ರಾಮೀಣ ತಂತ್ರಜ್ಞಾನ ಹಾಗೂ ಜನರ ಜೀವನಮಟ್ಟವನ್ನು ಸುಧಾರಿಸಲು ಪೂರಕವಾಗುವು ಅಭಿವೃದ್ದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
8.11 ಜನರಲ್ಲಿ ಓದುವ ಹವ್ಯಾಸ ಬೆಳೆಸುವ ಹಾಗೂ ಸಾಂಸ್ಕøತಿಕ ಪ್ರಜ್ಞೆಯನ್ನು ಪರಿಚಯಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
8.12 ಮಾತೃಭಾಷೆಯಲ್ಲಿ ಜ್ಞಾನವಿಜ್ಞಾನದ ಪುಸ್ತಕವನ್ನು ಜನಸಾಮಾನ್ಯರಿಗೆ ಅರ್ಥವಾಗುವ ಮಾದರಿಯಲ್ಲಿ ಪ್ರಕಟಿಸಿ ಪ್ರಚಾರ ಮಾಡುವುದು.
8.13 ಆರೋಗ್ಯ ಹಾಗೂ ನೈರ್ಮಲ್ಯ ಕುರಿತ ಚಟುವಟಿಕೆಗಳನ್ನು ಜನಸಾಮಾನ್ಯರ ನಡುವೆ ಹಮ್ಮಿಕೊಳ್ಳುವುದು.
8.14 ವೈಚಾರಿಕತೆ ಬೆಳೆಸುವ ಪ್ರಜಾಪ್ರಭೂತ್ವೀಯ ಮೌಲ್ಯಗಳನ್ನು ಎತ್ತಿಹಿಡಿಯುವ, ಕೋಮುಸಾಮರಸ್ಯ ಕಾಪಾಡುವ ಹಾಗೂ ವೈಜ್ಞಾನಿಕ ಮನೋಧರ್ಮ ಬಿತ್ತುವ ಯಾವುದೇ ಚಟುವಟಿಕೆಗಳನ್ನ ನಡೆಸುವುದು.
9. ಸದಸ್ಯತ್ವ
9.1 ಕರ್ನಾಟಕ ರಾಜ್ಯದಲ್ಲಿರುವ ಭಾರತೀಯ ಪೌರತ್ವ ಪಡೆದ 18 ವರ್ಷ ಮೀರಿದ ಯಾವುದೇ ಪ್ರಜೆಯು ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂವಿಧಾನ ಹಾಗೂ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಕೆಲಸ ಮಾಡಲಿಚ್ಚಿಸುವ ಪುರುಷ ಮತ್ತು ಮಹಿಳೆಯರು ಸದಸ್ಯರಾಗಲು ಅರ್ಹರಾಗಿರುತ್ತಾರೆ, ಸದಸ್ಯತ್ವ ಬಯಸುವ ಜನ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕಗಳನ್ನ ಪಾವತಿ ಮಾಡತಕ್ಕದ್ದು ಹಾಗೂ ಸಮಿತಿಯು ಕಾಲ ಕಾಲಕ್ಕೆ ಜಾರಿಗೊಳಿಸುವ ನಿರ್ಣಯಗಳಿಗೆ ಬದ್ಧನಾ(ಳಾ)ಗಿರತಕ್ಕದ್ದು.
9.2 ಸದಸ್ಯತ್ವ ನೊಂದಣಿಯನ್ನು ರಾಜ್ಯ ಸಮಿತಿಯ ಪರವಾಗಿ ಘಟಕ ಸಮಿತಿಗಳು ತಮ್ಮ ಮೇಲಿನ ಸಮಿತಿಯ ಉಸ್ತುವಾರಿಕೆಯಲ್ಲಿ ನೊಂದಾಯಿಸುವುದು.
9.3 ವಾರ್ಷಿಕ ಸದಸ್ಯತ್ವವು ಪ್ರತಿ ಆರ್ಥಿಕ ವರ್ಷದ ಆರಂಭದ ತಿಂಗಳಿನಿಂದ ಆರಂಭಗೊಂಡು ಸದರಿ ಆರ್ಥಿಕ ವರ್ಷದ ಅಂತ್ಯದ ಅವಧಿಯೊಳಗೆ ಮಾತ್ರ ಚಾಲ್ತಿಯಲ್ಲಿರುವುದು.
9.4 ಹಾಲಿ ಇರುವ ಸದಸ್ಯರ ಸದಸ್ಯತ್ವದ ನವೀಕರಣ ಪ್ರಕ್ರಿಯೆಗೆ ಕಾಲಮಿತಿಯನ್ನು ರಾಜ್ಯ ಸಮಿತಿ ನಿಗದಿಗೊಳಿಸುವುದು, ರಾಜ್ಯ ಸಮಿತಿಯು ನಿಗದಿಗೊಳಿಸಿದ ಅವಧಿಯೊಳಗೆ ಸದಸ್ಯತ್ವ ನವೀಕರಿಸಿಕೊಳ್ಳತಕ್ಕದ್ದು.
9.5 ಹಾಲಿ ಸದಸ್ಯ ರಾಜ್ಯಸಮಿತಿ ನಿಗದಿ ಪಡಿಸಿದÀ ಕಾಲಮಿತಿಯೊಳಗೆ ಸದಸ್ಯತ್ವ ನವೀಕರಿಸಿಕೊಳ್ಳದಿದ್ದರೆ ಸದಸ್ಯತ್ವದ ಜೇಷ್ಠತೆ ಕೊನೆಗೊಳ್ಳತ್ತದೆ ಹಾಗೂ ಆ ಸದಸ್ಯ ನೂತನವಾಗಿ ಸದಸ್ಯತ್ವವನ್ನು ನೊಂದಾಯಿಸಿಕೊಳ್ಳುವುದು.
9.6 ಸದಸ್ಯತ್ವ ಶುಲ್ಕ/ನವೀಕರಣದ ಶುಲ್ಕ 10.00 ರೂಗಳು ವಾರ್ಷಿಕ ಎಂದು ನಿಗದಿಪಡಿಸಿದೆ.
9.7 ಸದಸ್ಯತ್ವದ ಶುಲ್ಕzಲ್ಲಿ ಬದಲಾವಣೆ ಬೇಕಿದ್ದಲ್ಲಿ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದು.
9.8 ಸದಸ್ಯತ್ವದ ಪುಸ್ತಕವನ್ನು ಮುದ್ರಿಸಿ ವಿತರಿಸುವ ಅಧಿಕಾರ ಕೇವಲ ರಾಜ್ಯ ಸಮಿತಿಯದ್ದಾಗಿರುತ್ತದೆ. ಸದಸ್ಯತ್ವದ ಪುಸ್ತಕದಲ್ಲಿ ಸದಸ್ಯನ ಹೆಸರು, ವಯಸ್ಸು, ವಿಳಾಸ ಮತ್ತು ಇತರೆ ಅಗತ್ಯ ಮಾಹಿತಿಗಳನ್ನು ಮುದ್ರಸಿರಬೇಕು.
9.9 ಸದಸ್ಯತ್ವದ ಸಂಪೂರ್ಣ ವಿವರವನ್ನು ಸಂಬಂದಿಸಿದ ದಾಖಲಾತಿ ಪುಸ್ತಕದಲ್ಲಿ ದಾಖಲಿಸಿ ಸಂಬಂದಿಸಿದ ಎಲ್ಲಾ ಸಮಿತಿಗಳು ಹಾಗೂ ರಾಜ್ಯ ಸಮಿತಿ ಇಟ್ಟುಕೊಳ್ಳತಕ್ಕದ್ದು.
9.10 ಸದಸ್ಯತ್ವದ ಕೌಂಟರ್ ಫಾಯಿಲ್ ಮತ್ತು ನಿಗದಿತ ನಮೂನೆಯ ಮೂಲ ಪ್ರತಿಯನ್ನು ರಾಜ್ಯ ಸಮಿತಿಯ ಬಳಿಯೇ ಇರತಕ್ಕದ್ದು. ಜೆóರಾಕ್ಸ್ ಪ್ರತಿಯನ್ನು ಸಂಬಂದಿಸಿದ ಸಮಿತಿಗಳು ಅಂದರೆ (ಘಟಕ, ತಾಲೋಕು ಮತ್ತು ಜಿಲ್ಲಾ ಸಮಿತಿಗಳು) ಪ್ರತ್ಯೇಕವಾಗಿ ಇಟ್ಟು ಕೊಳ್ಳುವುದು.
10. ಸದಸ್ಯg/ಪದಾಧಿಕಾರಿಗಳÀ ಅನರ್ಹತೆ
10.1 ಈ ಕೆಳಕಂಡ ಕಾರಣಗಳಿಗಾಗಿ ಸದಸ್ಯನು/ಳು ಸದಸ್ಯತ್ವವನ್ನು ಕಳೆದುಕೊಳ್ಳುವರು1. ಸದಸ್ಯರು ಮರಣಹೊಂದಿದರೆ
2. ಸದಸ್ಯರು ಮತಿಹೀನ ಅಥವ ಬುದ್ಧಿಬ್ರಮಣೆಯಾದಾಗ
3. ಸದಸ್ಯರು ರಾಜೀನಾಮೆ ಸಲ್ಲಿಸಿದಾಗ
4. ಸದಸ್ಯರನ್ನು ಸದಸ್ಯತ್ವದಿಂದ ವಜಾಗೊಳಿಸಿದಾಗ
5. ಸದಸ್ಯತ್ವವನ್ನು ನವೀಕರಿಸದೇ ಇದ್ದಾಗ
11. ಶಿಸ್ತುಕ್ರಮ
11.1 ಸಮಿತಿಯ ಕುರಿತು ಅಥವ ಕಾರ್ಯಕಾರಿ ಸಮಿತಿಯ ನಿರ್ಣಯ ಅಥವ ಸಮಿತಿಯ ಇತರೆ ಸದಸ್ಯರು ಹಾಗೂ ಪದಾಧಿಕಾರಿಗಳ ಕುರಿತು ಯಾವುದೇ ನಿರಾಧಾರ ಆರೋಪ ಮಾಡುವುದನ್ನು ನಿಷೇಧಿಸಲಾಗಿದೆ. ಒಂದುವೇಳೆ ಅಂತಹ ಆಪಾದನೆಗಳೇನಾದರೂ ಕಂಡು ಬಂದರೆ ಸದಸ್ಯತ್ವ ನೊಂದಾವಣೆಯಾಗಿರುವ ಕಾರ್ಯವ್ಯಾಪ್ತಿಯಲ್ಲಿಯ ಕಾರ್ಯಕಾರಿ ಸಮಿತಿಯ ಗಮನಕ್ಕೆ ಲಿಖಿತವಾಗಿ ತರುವುದು. ಇದನ್ನು ಮೀರಿ ಸಾರ್ವಜನಿಕವಾಗಿ ನಿಂದನೆ, ಆರೋಪ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡಿದಾಗ ಕಾರ್ಯಕಾರಿ ಸಮಿತಿ ಸೂಕ್ತ ತಿಳುವಳಿಕಾ ನೋಟೀಸು ನೀಡಬಹುದು ಅದನ್ನು ಮೀರಿದರೆ ತುರ್ತು ಸಭೆ ಕರೆದು ಅಮಾನತ್ತಿನಲ್ಲಿಟ್ಟು ಸೂಕ್ತ ಶಿಸ್ತುಕ್ರಮ ಕೈಗೊಳ್ಳುವುದು.
11.2 ಶಿಸ್ತಿನ ಆರೋಪಗಳನ್ನು ಎದುರಿಸುತ್ತಿರುವ ಸದಸ್ಯರು ಸಂಬಂದಿಸಿದ ಸಮಿತಿಯ ಮುಂದೆ ತಮ್ಮ ಆರೋಪಗಳ ಕುರಿತ ಸಮಜಾಯಶಿ ಅಥವ ವಿವರಣೆ ನೀಡುವ ಹಕ್ಕನ್ನು ಹೊಂದಿರುತ್ತಾರೆ.
11.3 ಸದಸ್ಯರ ಉಚ್ಚಾಟನೆಯ ಕ್ರಮಕ್ಕೆ ತನ್ನ ನಂತರದ ಮೇಲ್ಸಮಿತಿಯ ಒಪ್ಪಿಗೆ ಪಡೆಯಬೇಕು. ಉಚ್ಛಾಟಿತಗೊಂಡ ಅಥವ ಶಿಸ್ತುಕ್ರಮ ಎದುರಿಸುತ್ತಿರುವ ಸದಸ್ಯರು ಮೇಲಿನ ಸಮಿತಿ ಹಾಗೂ ಅಂತಿಮವಾಗಿ ರಾಜ್ಯ ಮಹಾಸಭೆ(ಉeಟಿeಡಿಚಿಟ ಛಿouಟಿseಟ)ಯವರೆಗೂ ಮನವಿ ಮಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.e
11.4 ಸಂಘಟನೆಯ ಹಿತಾಸಕ್ತಿಗೆ ಹೊಂದಿಕೊಳ್ಳದ ಹಾಗೂ ಸಂಘಟನೆಯ ಗುರಿ ಮತ್ತು ಧ್ಯೇಯಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ಯಾವುದೇ ಘಟಕ, ಜಿಲ್ಲೆ ಅಥವ ತಾಲೋಕು ಸಮಿತಿಗಳನ್ನು ರಾಜ್ಯ ಸಮಿತಿಯು ರದ್ದುಪಡಿಸಬಹುದು. ತಮ್ಮ ಕೆಳಗಿನ ಘಟಕಗಳ ಮೇಲೆ ಜಿಲ್ಲಾ ಹಾಗೂ ತಾಲೋಕು ಸಮಿತಿಗಳು ಇಂತಹದ್ದೇ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಇದರಲ್ಲಿ ಕೆಳ ಸಮಿತಿಗಳು ರಾಜ್ಯಸಮಿತಿಗೆ ಮನವಿಮಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತವೆ.
11.5 ರಾಜ್ಯ ಕಾರ್ಯಕಾರಿ ಸಮಿತಿಯು ಯಾವುದೇ ಜಿಲ್ಲಾ ಸಮಿತಿಗಳ ಮೇಲೆ ಕ್ರಮ ಕೈಗೊಳ್ಳಬೇಕಾದ್ದಲ್ಲಿ ಸಂಬಂದಿಸಿದ ಸಮಿತಿಯನ್ನು ಅಮಾನತ್ತಿನಲ್ಲಿಟ್ಟು ಶಿಸ್ತುಕ್ರಮದ ಶಿಫಾರಸ್ಸನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಬಹುದು. ಶಿಸ್ತುಕ್ರಮಕ್ಕೆ ಒಳಪಡಿಸಿದ ಬಗ್ಗೆ ರಾಜ್ಯ ಮಹಾ ಸಭೆಯಲ್ಲಿ ಅಂಗೀಕಾರಕ್ಕೆ ಮಂಡಿಸಲೇ ಬೇಕು.
12. ಸಮಿತಿಯ ಸದಸ್ಯರ ಹಕ್ಕುಗಳು ಮತ್ತು ಜವಾಬ್ದಾರಿಗಳು.
12.1 ಸಮಿತಿಯ ಲೆಕ್ಕ ಪತ್ರ ಮತ್ತಿತರ ದಾಖಲೆಗಳನ್ನು ಏಳು ದಿನ ಮುಂಚಿತವಾಗಿ ನೋಟಿಸ್ ನೀಡಿ ಸಂಘದ ಕಛೇರಿ ಅವಧಿಯಲ್ಲಿ ಪರಿಶೀಲಿಸಲು ಅವಕಾಶವಿರುತ್ತದೆ.
12.2 ಸಮಿತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಹಾಗೂ ಇತರರಲ್ಲಿ ಸಮಿತಿಯ ಧ್ಯೇಯೋದ್ದೇಶಗಳನ್ನು ಪ್ರಚಾರಮಾಡಿ ಸಮಿತಿಗೆ ಸೇರ್ಪಡೆಗೊಳಿಸಲು ಶಿಫಾರಸ್ಸು ಮಾಡುವುದು.
13. ವಾರ್ಷಿಕ ಮಹಾಸಭೆ ಮತ್ತು ಅದರ ಜವಾಬ್ದಾರಿ
13.1 ವಾರ್ಷಿಕ ಮಹಾಸಭೆಯು ವರ್ಷಕ್ಕೊಮ್ಮೆ ನಡೆಯಲಿದೆ. ಈ ಮಹಾಸಭೆಯು ಹಣಕಾಸು ವರ್ಷ ಪೂರ್ಣಗೊಂಡ ಮೂರು ತಿಂಗಳೊಳಗೆ ನಡೆಯಬೇಕು. ಸದಸ್ಯತ್ವದ ಆಧಾರದ ಮೇಲೆ ಕೇಂದ್ರ ಸಮಿತಿಯು ನಿಗದಿಪಡಿಸಿದ ಜಿಲ್ಲೆಗಳಿಂದ ಆಯ್ಕೆಯಾದ ಸದಸ್ಯರು ಮತ್ತು ರಾಜ್ಯ ಸಮಿತಿ ಸದಸ್ಯರು ಮಾತ್ರವೇ ಭಾಗವಹಿಸÀತಕ್ಕದ್ದು.
13.2 ಈ ಸಭೆಯು ಲೆಕ್ಖ ಪತ್ರ, ವಾರ್ಷಿಕ ವರದಿಯ ಮೌಲ್ಯಮಾಪನ, ಹಾಗೂ ಸಂವಿಧಾನ ತಿದ್ದುಪಡಿಗಳನ್ನು ಹಾಗೂ ಕ್ರಿಯಾ ಯೋಜನೆಯ ನಿರ್ಣಯಗಳನ್ನು ಕೈಗೊಳ್ಳುವುದು ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಲಿದೆ.
13.3 ಕಾರ್ಯದರ್ಶಿಯು ವಾರ್ಷಿಕ ಮಹಾಸಭೆ ಅಥವ ವಿಶÉೀಷ ಮಹಾಸಭೆಯನ್ನು ಕರೆಯುವ ಸಂದರ್ಬದಲ್ಲಿ ಸೂಚನಾ ಪತ್ರದಲ್ಲಿ ಸಭೆ ಸೇರುವ ದಿನಾಂಕ, ವೇಳೆ ಹಾಗೂ ಸ್ಥಳಗಳನ್ನು ನಮೂದಿಸಿರಬೇಕು ಹಾಗೂ ಸದಸ್ಯರ ಸರ್ಟಿಫಿಕೆಟ್ ಆಫ್ ಪೋಸ್ಟಿಂಗ್ ಮೂಲಕ ಪ್ರತಿಯೊಬ್ಬ ಮಹಾಸಭೆಗೆ ಭಾಗಿಯಾಗುವ ಸದಸ್ಯನ ವಿಳಾಸಕ್ಕೆ ಮಹಾಸಭೆಯು ಸೇರುವ ದಿನಾಂಕಕ್ಕೆ 21ದಿನಗಳಿಗೆ ಕಡಿಮೆ ಇಲ್ಲದಷ್ಟು ಅವಧಿಯಷ್ಟು ಮುಂಚಿತವಾಗಿ ಸೂಚನಾ ಪತ್ರವನ್ನು ಕಳುಹಿಸತಕ್ಕದ್ದು.
13.4 ಬಿಜಿವಿಎಸ್‍ನ ಮಹಾಸಭೆಗಳ ಅಧ್ಯಕ್ಷತೆಯನ್ನು ಬಿಜಿವಿಎಸ್‍ನ ಹಾಲಿ ಅಧ್ಯಕ್ಷರು ವಹಿಸತಕ್ಕದ್ದು ಅವರ ಗೈರುಹಾಜರಿಯಲ್ಲಿ ಸರದಿಯೋಪಾದಿಯಲ್ಲಿ ಹಿರಿಯ ಉಪಾದ್ಯಕ್ಷರು ಅಧ್ಯಕ್ಷತೆ ವಹಿಸತಕ್ಕದ್ದು. ಅಧ್ಯಕ್ಷರು ಹಾಗೂ ಉಪಾದ್ಯಕ್ಷರುಗಳ ಗೈರು ಹಾಜರಿಯಲ್ಲಿ ಸಭೆಯಲ್ಲಿ ಹಾಜರಿದ್ದ ಹಿರಿಯ ಸದಸ್ಯರುಗಳಲ್ಲಿ ಒಬ್ಬರು ಅಧ್ಯಕ್ಷತೆ ವಹಿಸುವರು.
13.5 ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಎರೆಡು ವರ್ಷಗಳಿಗೊಮ್ಮೆ ನಡೆಯುತ್ತದೆ ಸರ್ವ ಸದಸ್ಯರು ನೂತನ ಕಾರ್ಯಕಾರಿ ಸಮಿತಿಯನ್ನು ಈ ಸಭೆಯಲ್ಲಿ ಚುನಾಯಿಸುವರು. ಆಯ್ಕೆಗೊಂಡ ಕಾರ್ಯಕಾರಿ ಸಮಿತಿ ತನ್ನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.
13.6 ರಾಜ್ಯ ಮಹಾಸಭೆಯು 25ಕ್ಕೆ ಮೀರದಂತೆ ರಾಜ್ಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆಮಾಡತಕ್ಕದ್ದು.
13.7 ಜಿಲ್ಲೆಯ ಒಟ್ಟು ಸದಸ್ಯರಲ್ಲಿ ಐದನೇ ಒಂದರಷ್ಟು ಸದಸ್ಯರನ್ನು ವಾರ್ಷಿಕ ಮಹಾಸಭೆಗೆ ಆಯ್ಕೆಮಾಡಬೇಕು.
13.8 "ರಾಜ್ಯ ಕಾರ್ಯಕಾರಿ ಸಮಿತಿ" ಆಯ್ಕೆಯ ವಿಧಾನ : ಹಾಲಿ ಕಾರ್ಯದರ್ಶಿಗಳು ಚುನಾವಣಾ ಪೂರ್ವ ವಿಷೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘಟನೆಯ ಚಟುವಟಿಕೆಗಳ ಆಧಾರದಲ್ಲಿ ಚರ್ಚಿತವಾಗಿ ಒಪ್ಪಿಗೆ ಪಡೆದ ತಾತ್ಕಾಲಿಕ ಸಂಭಾವ್ಯ ಪಟ್ಟಿಯನ್ನು ವಾರ್ಷಿಕ ಮಹಾಸಭೆಯ ಮುಂದೆ ಚರ್ಚೆಗಾಗಿ ಮಂಡಿಸುತ್ತಾರೆ. ವಾರ್ಷಿಕ ಮಹಾಸಭೆಯು ಪ್ರತಿಯೊಬ್ಬ ಮಂಡಿತ ಸಂಭಾವ್ಯ ಸದಸ್ಯನ ಬಗ್ಗೆ ಚರ್ಚಿಸಿ ಬಹುಮತದ ತೀರ್ಮಾನದಂತೆ ಆರಿಸುತ್ತದೆ.
14. ವಿಶೇಷ ಮಹಾಸಭೆ
14.1 ವಾರ್ಷಿಕ ಮಹಾಸಭೆ ಅಲ್ಲದೆ ರಾಜ್ಯಸಮಿತಿಯ ಅನುಮತಿಯ ಮೇರೆಗೆ ಅಗತ್ಯವಿದ್ದಲ್ಲಿ ವಿಶೆಷ ಮಹಾಸಭೆ ಆಗಾಗ್ಗೆ ಸೇರಬಹುದು.
14.2 ಪ್ರಸಕ್ತ ಸಾಲಿನ ಒಟ್ಟು ಸದಸ್ಯರ ಸಂಖ್ಯೆಯ ಐದನೇ ಒಂದು ಭಾಗದಷ್ಟು ಸದಸ್ಯರು ಅಧ್ಯಕ್ಷರಿಗೆ ಲಿಖಿತವಾಗಿ ಬರೆದು ತಿಳಿಸಿದಲ್ಲಿ ಅವರ ಕೋರಿಕೆಯ ಮೇರೆಗೆ ವಿಷೇಶ ಮಹಾಸಭೆಯನ್ನು ಕರೆಯತಕ್ಕದ್ದು. ಈ ಮಹಾಸಭೆಯನ್ನು ಕರೆಯುವಾಗ ಯಾವ ಉದ್ದೇಶಕ್ಕಾಗಿ ಸಭೆ ಕರೆಯಲಾಗುವುದೆಂಬುದನ್ನು ಕಾರ್ಯದರ್ಶಿಗೆ ಸ್ಪಷ್ಠ ಪಡಿಸಬೇಕು.
14.3 ವಿಶೇಷ ಮಹಾಸಭೆಗಳ ಅಧ್ಯಕ್ಷತೆಯನ್ನು ಬಿಜಿವಿಎಸ್‍ನ ಹಾಲಿ ಅಧ್ಯಕ್ಷರು ವಹಿಸತಕ್ಕದ್ದು ಅವರ ಗೈರುಹಾಜರಿಯಲ್ಲಿ ಸರದಿಯೋಪಾದಿಯಲ್ಲಿ ಹಿರಿಯ ಉಪಾದ್ಯಕ್ಷರು ಅಧ್ಯಕ್ಷತೆ ವಹಿಸತಕ್ಕದ್ದು. ಅಧ್ಯಕ್ಷರು ಹಾಗೂ ಉಪಾದ್ಯಕ್ಷರುಗಳ ಗೈರು ಹಾಜರಿಯಲ್ಲಿ ಸಭೆಯಲ್ಲಿ ಹಾಜರಿದ್ದ ಹಿರಿಯ ಸದಸ್ಯರುಗಳಲ್ಲಿ ಒಬ್ಬರು ಅಧ್ಯಕ್ಷತೆ ವಹಿಸುವರು.
15. ಚುನಾವಣೆಗೆ ಸ್ಪರ್ಧೆ ಹಾಗೂ ಮತದಾನ
15.1 ಚುನಾವಣೆ ನಡೆಯಲಿರುವ ಮಹಾಸಭೆಯಲಿ ಭಾಗವಹಿಸಿದ್ದ ಸದಸ್ಯರು ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ.
15.2 ಸಭಾಧ್ಯಕ್ಷರು ಮತದಾನ ಸಮ ಸಮ ಆದಾಗ ಮಾತ್ರ ತಮ್ಮ ಮತವನ್ನು ಚಲಾಯಿಸಬಹುದು.
15.3 ಸಭಾಧ್ಯಕ್ಷರು ಚುನಾವಣಾ ಫಲಿತಾಂಶಗಳನ್ನು ಘೋಷಿಸಿದ ಮೇಲೆ ಆ ಚುನಾವಣೆ ಸಿಂಧು ಆಗುವುದು.
16. ಸಾಂದರ್ಬಿಕ ಖಾಲಿ ಹುದ್ದೆಗಳ ಭರ್ತಿ
14.1 ಸಮಿತಿಯ ಚುನಾವಣೆಗಳ ನಂತರ ಪದಾಧಿಕಾರಿ/ಕಾರ್ಯಕಾರಿ ಸಮಿತಿ ಸದಸ್ಯರ ಹುದ್ದೆ ವಿವಿಧ ಕಾರಣಗಳಿಗಾಗಿ ಖಾಲಿ ಆದಲ್ಲಿ ಅಂತಹ ಖಾಲಿ ಹುದ್ದೆಗಳಿಗೆ ಸೂಕ್ತ ಸದಸ್ಯರನ್ನ ಭರ್ತಿಮಾಡಲು ಕಾರ್ಯಕಾರಿ ಸಮಿತಿಗೆ ಅಧಿಕಾರವಿರುತ್ತದೆ. ಖಾಲಿ ಹುದ್ದೆಯಲ್ಲಿ ಭರ್ತಿಮಾಡಲಾದ ಹುದ್ದೆಗಳು ಮುಂದಿನ ಚುನಾವಣೆಯವರೆಗೆ ಮಾತ್ರ ಮುಂದುವರೆಯಲಿದೆ.
17. ಕಾರ್ಯಕಾರಿ ಸಮಿತಿ ಮತ್ತು ಅದರ ಜವಾಬ್ದಾರಿ
17.1 ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿಯಲ್ಲಿರುವ ಸದಸ್ಯರ ಅಥವ ನಿರ್ದೇಶಕರ ಸಂಖ್ಯೆಯನ್ನು ಸರ್ವಸದಸ್ಯರ ಸಭೆಯಲ್ಲಿ ನಿಗದಿ ಪಡಿಸುವುದು ಹಾಗೂ ಬದಲಾವಣೆಯನ್ನು ಮಾಡುವ ತೀರ್ಮಾನವೂ ಸಹ ಸರ್ವಸದಸ್ಯರ ಸಭೆಗೆ ಮಾತ್ರ ಇರುತ್ತದೆ.
17.2 ಕಾರ್ಯಕಾರಿ ಸಮಿತಿಯ ಗರಿಷ್ಠ ಮೂರನೆ ಒಂದು ಭಾಗದಷ್ಠು ಮಾತ್ರವೇ ಪದಾಧಿಕಾರಿಗಳು ಇರುತ್ತಾರೆ ಹಾಗೂ ಕಾರ್ಯಸೂಚಿಯನ್ನು ಕಾರ್ಯಕಾರಿ ಸಮಿತಿಯೇ ನಿರ್ಧರಿಸುತ್ತದೆ ಅದರ ತೀರ್ಮಾನಗಳನ್ನು ಜಾರಿಗೊಳಿಸುವ ನಾಯಕತ್ವ ಮಾತ್ರ ಪದಾಧಿಕಾರಿಗಳದ್ದು.
17.3 ಕಾರ್ಯಕಾರಿ ಸಮಿತಿ ಸಭೆ ಕನಿಷ್ಠ 3 ತಿಂಗಳಿಗೊಮ್ಮೆ ನಡೆಯಲೇಬೇಕು ಹಾಗೂ ಪಧಾಧಿಕಾರಿಗಳ ಸಭೆ ಕನಿಷ್ಠ ತಿಂಗಳಿಗೊಮ್ಮೆ ನಡೆಯಬೇಕು.
17.4 ಕಾರ್ಯಕಾರಿ ಸಮಿತಿಯ ಕಾರ್ಯಕಲಾಪಗಳಿಗೆ ಅನುಕೂಲವಾಗುವಂತೆ ಅಗತ್ಯ ಉಪಸಮಿತಿಗಳನ್ನು, ಸಂಚಾಲಕರುಗಳನ್ನು ಹಾಗೂ ಕಾರ್ಯಸೂಚಿಯನ್ನು ಆಯ್ಕೆಮಾಡುವ ಅಧಿಕಾರ ಹೊಂದಿರುತ್ತದೆ.
18. ಸಂಘಟನೆಯ ಸ್ವರೂಪ :
18.1 ಸಮಿತಿಯು ಈ ಕೆಳಕಂಡಂತೆ ಸಂಘಟನೆಯನ್ನು ಹೊಂದಿರುತ್ತದೆ.
18.2 4 ಹಂತಗಳಲ್ಲಿ ಸಮಿತಿಯು ಅಸ್ತಿತ್ವ ಹೊಂದಿರುತ್ತದೆ 1. ರಾಜ್ಯ ಅಥವ ಕೇಂದ್ರ ಸಮಿತಿ, 2. ಜಿಲ್ಲಾ ಸಮಿತಿ,
3. ತಾಲೋಕು ಸಮಿತಿ, ಹಾಗೂ 4. ಘಟಕ ಸಮಿತಿ ಎಂದು
18.3 ರಾಜ್ಯ ಮಟ್ಟದಲ್ಲಿ ಮಾತ್ರ ಸಮಿತಿಯು ಸರ್ಕಾರಿ ನಿಯಮಾವಳಿಗಳಂತೆ ನೊಂದಣಿಯಾಗಿರುತ್ತದೆ. ಜಿಲ್ಲಾ, ತಾಲೋಕು ಮತ್ತು ಘಟಕವಾರು ನೊಂದಣಿಯ ಅಗತ್ಯವಿರುವುದಿಲ್ಲ
18.4 ಘಟಕ ಸಮಿತಿ
18.4.1 ಕನಿಷ್ಠ 25 ಸದಸ್ಯತ್ವವನ್ನು ಹೊಂದಿದ ಯಾವುದೇ ನಗರ, ಬೀದಿ, ಶಾಲೆ, ಕಾಲೇಜು, ಹಳ್ಳಿ, ಕ್ಲಸ್ಟರ್ ಒಂದು ಘಟಕ ಎನಿಸಿಕೊಳ್ಳುತ್ತದೆ.
18.4.2 ಘಟಕದÀ ವ್ಯಾಪ್ತಿಯಲ್ಲಿ ಸದಸ್ಯತ್ವ ಹೊಂದಿರುವ ಎಲ್ಲರೂ ಘಟಕ ಸಮಿತಿಯ ಸರ್ವಸಭೆಯ ಸದಸ್ಯರಾಗಿರುತ್ತಾರೆ.
18.4.3 ತಾಲೋಕು ಸಮಿತಿಯ ಸೂಚನೆಯಂತೆ ತಾಲೋಕು ವಾರ್ಷಿಕ ಸಾಮಾನ್ಯ ಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತದೆ.
18.4.4 ಘಟಕದÀ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 9 ಜನರ ತಾಲೋಕು ಕಾರ್ಯಕಾರಿ ಸಮಿತಿಯನ್ನು ಆಯ್ಕೆಮಾಡಬೇಕು.
18.4.5 ಕಾರ್ಯಾಕಾರಿ ಸಮಿತಿಯು ಈ ಕೆಳಕಂಡಂತೆ ಪದಾದಿಕಾರಿಗಳನ್ನು ಹೊಂದಿರುತ್ತದೆ.1 ಅಧ್ಯಕ್ಷರು, 1 ಉಪಾದ್ಯೆಕ್ಷರು, 1 ಕಾರ್ಯದರ್ಶಿ, 1 ಸಹಕಾರ್ಯದರ್ಶಿ, 1 ಖಜಾಂಜಿ, ಹಾಗೂ 4 ಸದಸ್ಯರು
18.4.6 ಘಟಕ ಸಮಿತಿಯು ತಾಲೋಕು ಅಥವ ತನ್ನ ಸಮೀಪದ ಮೇಲಿನ ಸಮಿತಿಯು ತೀರ್ಮಾನಿಸಿದ ಅಥವ ವಹಿಸಿದ ಚಟುವಟಿಕೆಗಳನ್ನು ಜಾರಿಗೊಳಿಸಬೇಕು.
18.4.7 ಸ್ಥಳಿಯ ಅವಶ್ಯಕತೆಗಳಿಗೆ ಅನುಕೂಲವಾಗಿ ವಾರ್ಷಿಕ ಕನಿಷ್ಠ 2 ಚಟುವಟಿಕೆಗಳನ್ನಾದರೂ ಘಟಕ ಸಮಿತಿ ಸಂಘಟಿಸಬೇಕು.
18.5 ತಾಲೋಕು ಸಮಿತಿ
18.5.1 ತಾಲೋಕು ಸಮಿತಿ ಹೊಂದಲು ಆಯಾ ಕಂದಾಯ ತಾಲೋಕಿನ ವ್ಯಾಪ್ತಿಯಲ್ಲಿ ಕನಿಷ್ಟ 100 ಸದಸ್ಯತ್ವ ಹೊಂದಿರಬೇಕು. ಅಥವ ಕನಿಷ್ಠ 3 ಘಟಕಗಳನ್ನು ಹೊಂದಿರಬೇಕು. ತಾಲೋಕಿನ ವ್ಯಾಪ್ತಿಯಲ್ಲಿ ಸದಸ್ಯತ್ವ ಹೊಂದಿರುವ ಎಲ್ಲರೂ ಸಮಿತಿಯ ತಾಲೋಕಿನ ವಾರ್ಷಿಕ ಸಾಮಾನ್ಯಸಭೆಯ ಸದಸ್ಯರಾಗಿರುತ್ತಾರೆ ಅಥವ ತಾಲೋಕಿನಲ್ಲಿರುವ ಘಟಕಗಳ ಸಂಖ್ಯೆಯ ಬಲ ಅವಲಂಬಿಸಿ ಪ್ರತಿನಿಧಿಗಳನ್ನು ತಾಲೋಕು ಸಾಮಾನ್ಯ ಸಭೆಗೆ ಆಯ್ಕೆಮಾಡಬಹುದು.
18.5.2 ತಾಲೋಕಿನ ಸಾಮಾನ್ಯಸಭೆಯಲ್ಲಿ 11 ಜನರ ತಾಲೋಕು ಕಾರ್ಯಕಾರಿ ಸಮಿತಿಯನ್ನು ಆಯ್ಕೆಮಾಡಬೇಕು.
18.5.3 ಕಾರ್ಯಾಕಾರಿ ಸಮಿತಿಯು ಈ ಕೆಳಕಂಡಂತೆ ಪದಾದಿಕಾರಿಗಳನ್ನು ಹೊಂದಿರುತ್ತದೆ.1 ಅಧ್ಯಕ್ಷರು, 1 ಉಪಾದ್ಯೆಕ್ಷರು, 1 ಕಾರ್ಯದರ್ಶಿ, 1 ಸಹಕಾರ್ಯದರ್ಶಿ, 1 ಖಜಾಂಜಿ, ಹಾಗೂ 6 ಸದಸ್ಯರು
18.5.4 ತಾಲೋಕಿನ ಒಟ್ಟು ಸದಸ್ಯರಲ್ಲಿ ಐದನೇ ಒಂದರಷ್ಟು ಸದಸ್ಯರನ್ನು ಜಿಲ್ಲಾ ಸಾಮಾನ್ಯ ಸಭೆಗೆ ಆಯ್ಕೆಮಾಡಬೇಕು.
18.5.5 ತಾಲೋಕು ಸಮಿತಿಯು ಜಿಲ್ಲಾ ಸಮಿತಿಯು ತೀರ್ಮಾನಿಸಿದ ಅಥವ ವಹಿಸಿದ ಚಟುವಟಿಕೆಗಳನ್ನು ಜಾರಿಗೊಳಿಸತಕ್ಕದ್ದು.
18.5.6 ಘಟಕ ಸಮಿತಿಗಳಿಗೆ ಕಾರ್ಯಕ್ರಮ ಮಾಡುವಲ್ಲಿ ಸೂಕ್ತ ಮಾರ್ಗದರ್ಶನ ನೀಡುವುದು.
18.5.7 ಸ್ಥಳಿಯ ಅವಶ್ಯಕತೆಗಳಿಗೆ ಅನುಕೂಲವಾಗಿ ವಾರ್ಷಿಕ ಕನಿಷ್ಠ 2 ಚಟುವಟಿಕೆಗಳನ್ನು ತಾಲೋಕು ಸಮಿತಿ ಸ್ವತಂತ್ರವಾಗಿ ಸಂಘಟಿಸಬೇಕು.
18.6 ಜಿಲ್ಲಾ ಸಮಿತಿ
18.6.1 ಜಿಲ್ಲಾ ಸಮಿತಿಯನ್ನು ಹೊಂದಲು ಕನಿಷ್ಠ ಮೂರು(3) ತಾಲೋಕು ಸಮಿತಿಗಳು ಅಸ್ತಿತ್ವದಲ್ಲಿ ಇರಬೇಕು.
18.6.2 ತಾಲೂಕುಗಳಿಂದÀ ಆಯ್ಕೆಗೊಂಡ ಪ್ರತಿನಿಧಿಗಳು ಜಿಲ್ಲಾ ವಾರ್ಷಿಕ ಸಾಮಾನ್ಯ ಸಭೆಯ ಸದಸ್ಯರಾಗುತ್ತಾರೆ.
18.6.3 ಜಿಲ್ಲೆಯ ಸಾಮಾನ್ಯಸಭೆಯಲ್ಲಿ 13 ಜನರ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ಆಯ್ಕೆಮಾಡಬೇಕು.
18.6.4 ಕಾರ್ಯಾಕಾರಿ ಸಮಿತಿಯು ಈ ಕೆಳಕಂಡಂತೆ ಪದಾದಿಕಾರಿಗಳನ್ನು ಹೊಂದಿರುತ್ತದೆ. 1 ಅಧ್ಯಕ್ಷರು, 2 ಉಪಾದ್ಯೆಕ್ಷರು, 1 ಕಾರ್ಯದರ್ಶಿ, 2 ಸಹಕಾರ್ಯದರ್ಶಿ, 1 ಖಜಾಂಜಿ, 6 ಸದಸ್ಯರು
18.6.5 ಜಿಲ್ಲೆಯ ಒಟ್ಟು ಸದಸ್ಯರಲ್ಲಿ ಐದನೇ ಒಂದರಷ್ಟು ಸದಸ್ಯರನ್ನು ರಾಜ್ಯ ಸಾಮಾನ್ಯ ಸಭೆಗೆ ಆಯ್ಕೆಮಾಡಬೇಕು.
18.6.6 ಜಿಲ್ಲಾ ಸಮಿತಿಯು ರಾಜ್ಯ ಸಮಿತಿಯು ತೀರ್ಮಾನಿಸಿದ ಅಥವ ವಹಿಸಿದ ಚಟುವಟಿಕೆಗಳನ್ನು ಜಾರಿಗೊಳಿಸತಕ್ಕದ್ದು.
18.6.7 ತಾಲೋಕು ಸಮಿತಿಗಳಿಗೆ ಕಾರ್ಯಕ್ರಮ ಮಾಡುವಲ್ಲಿ ಸೂಕ್ತ ಮಾರ್ಗದರ್ಶನ ನೀಡುವುದು.
18.6.8 ಸ್ಥಳಿಯ ಅವಶ್ಯಕತೆಗಳಿಗೆ ಅನುಕೂಲವಾಗಿ ವಾರ್ಷಿಕ ಕನಿಷ್ಠ 2 ಚಟುವಟಿಕೆಗಳನ್ನು ಜಿಲ್ಲಾ ಸಮಿತಿ ಸಂಘಟಿಸಬೇಕು.
18.7 ರಾಜ್ಯ ಸಮಿತಿ.
18.8 ರಾಜ್ಯ ಸಮಿತಿಯನ್ನು ಹೊಂದಲು ಕನಿಷ್ಠ ಮೂರು(3) ಜಿಲ್ಲಾ ಸಮಿತಿಗಳು ಅಸ್ತಿತ್ವದಲ್ಲಿ ಇರಬೇಕು.
18.9 ರಾಜ್ಯ ಕಾರ್ಯಕಾರಿ ಸಮಿತಿ: ಸದರಿ ಮಹಾಸಭೆಯು ಸದರಿ ಸಾಲಿನ ಸಂಘಟನೆಯ ಬಲಾಬಲದ
ಆಧಾರದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯನ್ನು ಚುನಾಯಿಸುತ್ತದೆ.
18.10 ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳಿರುತ್ತಾರೆ; ಅಧ್ಯಕ್ಷರು-1, ಉಪಾಧ್ಯಕ್ಷರು-4,
ಕಾರ್ಯದರ್ಶಿ-1, ಸಹಕಾರ್ಯದರ್ಶಿ-4, ಖಜಾಂಚಿ-1.
18.11 ರಾಜ್ಯ ಸಮಿತಿಯ ಕರ್ತವ್ಯ ಮತ್ತು ಅಧಿಕಾರ
1. ಕಾಲ ಕಾಲಕ್ಕೆ ಸರಿಯಾಗಿ ನಿಯಮದಂತೆ ಸಭೆ ಸೇರುವುದು.
2. ಮಹಾ ಸಭೆಯ ನಿರ್ಣಯಗಳಿಗೆ ಸೂಕ್ತ ಕಾರ್ಯಸೂಚಿ ಸಿದ್ಧ ಪಡಿಸುವುದು.
3. ಕೆಳ ಸಮಿತಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ವಿಚಾರ ಮಾಹಿತಿ ಮತ್ತು ತರಬೇತಿ ನೀಡುವುದು.
4. ಸಂಘಟನೆಯ ವಿಸ್ತಾರ ಮತ್ತು ಬಲವರ್ಧನೆಗಾಗಿ ಅಗತ್ಯ ಉಪಸಮಿತಿಗಳನ್ನು ಹಾಗೂ ಆ ಸಮಿತಿಗಳಿಗೆ ಕಾರ್ಯ ಜವಾಬ್ದಾರಿ ನೀಡುವುದು ಮತು ಉಪಸಮಿತಿಗಳಿಗೆ ಸದಸ್ಯರನ್ನು ಆರಿಸುವ ಅಧಿಕಾರ ಕಾರ್ಯಕಾರಿ ಸಮಿತಿಗೆ ಇರುತ್ತದೆ.
5. ಸಮಿತಿಗೆ ಸೂಕ್ತ ಲೆಕ್ಕ ಪರಿಶೋಧಕರನ್ನು ನೇಮಿಸುವುದು.
19. ರಾಜ್ಯ ಪದಾಧಿಕಾರಿಗಳ ಮಾನದಂಡ ಹಾಗೂ ಕರ್ತವ್ಯಗಳು
19.1 ಅಧ್ಯಕ್ಷರು :
19.1.1 ಸಂಘದ ಮುಖ್ಯಸ್ಥನಾಗಿದ್ದು ಸಮಿತಿಯ ಕಾರ್ಯಕಲಾಪಗಳನ್ನು ನಡೆಸುವ ಜವಾಬ್ದಾರಿ ಹೊಂದಿರುತ್ತಾರೆ. ಸಮಿತಿಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸುವುದು.
19.1.2 ಕಾರ್ಯಕಾರಿ ಸಮಿತಿಯಲ್ಲಿ ಪ್ರಜಾಸತ್ತಾತ್ಮಕವಾಗಿ ತೆಗೆದುಕೊಂಡ ಬಹುಮತದ ತೀರ್ಮಾನಗಳಿಗೆ ಸಹಿಹಾಕುವುದು.
19.1.3 ಸಮಿತಿಯು ನಡೆಸುವ ಎಲ್ಲಾ ಸಾರ್ವಜನಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವುದು.
19.1.4 ಮಾಹೆಯಾನ ಕೆಲಸ ನಿರ್ವಹಿಸಿದ ರಿಪೋರ್ಟನ್ನು [ತಿoಡಿಞ ಜoಟಿe sಣಚಿಣemeಟಿಣ] ಸಿದ್ಧಪಡಿಸಿ ಸಭೆಯ ಮುಂದಿಡುವುದು ಹಾಗೂ ಕಚೇರಿಗೆ ದಾಖಲಿಸಲು ಕೊಡುವುದು.
19.2 ಉಪಾಧ್ಯಕ್ಷರು :
19.2.1 ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮಿತಿಯ ಸಭೆಗಳ/ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸುವುದು. ಉಳಿದಂತೆ ಕಾರ್ಯಕಾರಿ ಸಮಿತಿಯು ತೀರ್ಮಾನಿಸಿದ ಜವಾಬ್ದಾರಿಯನ್ನು ನಿರ್ವಹಿಸುವುದು.
19.2.2 ಮಾಹೆಯಾನ ಕೆಲಸ ನಿರ್ವಹಿಸಿದ ರಿಪೋರ್ಟನ್ನು [ತಿoಡಿಞ ಜoಟಿe sಣಚಿಣemeಟಿಣ] ಸಿದ್ಧಪಡಿಸಿ ಸಭೆಯ ಮುಂದಿಡುವುದು ಹಾಗೂ ಕಚೇರಿಗೆ ದಾಖಲಿಸಲು ಕೊಡುವುದು.
19.3 ಕಾರ್ಯದರ್ಶಿ:
19.3.1 ಸಮಿತಿಯ ಎಲ್ಲಾ ವ್ಯವಹಾರಗಳನ್ನು ನಡೆಸುವ ಅಧಿಕಾರ ಹೊಂದಿರುತ್ತಾರೆ. ಸಮಿತಿಯ ದಸ್ತಾವೇಜು, ಒಪ್ಪಂದಗಳು, ಸಭೆ ಕರೆಯುವುದು, ಕಾನೂನಾತ್ಮಕ ವಿಚಾರಗಳು, ಪ್ರಕಟಣೆ, ಆರ್ಥಿಕ ವಿಚಾರಗಳ ನಿರ್ವಹಣೆ ಹಾಗೂ ಕಾರ್ಯಕಾರಿ ಸಮಿತಿ ತೀರ್ಮಾನಿಸಿದ ವಿಷಯಗಳ ಕಾರ್ಯಾನುಷ್ಠಾನ ಮಾಡುವುದು ಹಾಗೂ ಕೆಳ ಸಮಿತಿಗಳಿಗೆ ಮಾಹಿತಿ ರವಾನೆ ಮತ್ತು ಸೂಚನೆ ನೀಡುವುದು ಕಾರ್ಯದರ್ಶಿಯ ಗುರುತರ ಜವಾಬ್ದಾರಿಯಾಗಿರುತ್ತದೆ.
19.3.2 ಸಿಬ್ಬಂಧಿಗಳನ್ನು ನೇಮಕ ಮಾಡಿಕೊಳ್ಳುವುದು ಹಾಗು ಅವರ ಕೆಲಸದ ಮೇಲುಸ್ತುವಾರಿಕೆ ನಡೆಸುವುದು, ಕೆಲಸದ ಹಂಚಿಕೆ ಮಾಡುವುದು, ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಜೊತೆ ಸಮಾಲೋಚಿಸಿ ಅಗತ್ಯ ಶಿಸ್ತುಕ್ರಮ ಜರುಗಿಸುವುದು ಮತ್ತು ಸಿಬ್ಬಂಧಿಗಳ ಸಂಬಳ ಮತ್ತು ರಜೆ ಮಂಜೂರು ಮಾಡುವುದು.
19.3.3 ಮಾಹೆಯಾನ ಕೆಲಸ ನಿರ್ವಹಿಸಿದ ರಿಪೋರ್ಟನ್ನು[ತಿoಡಿಞ ಜoಟಿe sಣಚಿಣemeಟಿಣ]ಸಿದ್ಧಪಡಿಸಿ ಸಭೆಯ ಮುಂದಿಡುವುದು ಹಾಗೂ ಕಚೇರಿಗೆ ದಾಖಲಿಸಲು ಕೊಡುವುದು.
19.4 ಸಹ ಕಾರ್ಯದರ್ಶಿ:
19.4.1 ವಿಭಾಗವಾರು ಹಾಗೂ ಜಿಲ್ಲಾವಾರು ಸಂಘಟನೆಯನ್ನು ವಿಸ್ತರಿಸುವ, ಸದಸ್ಯತ್ವ ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಹಾಗೂ ಕಾರ್ಯಕಾರಿ ಸಮಿತಿಯು ತೀರ್ಮಾನಿಸಿದ ಜವಾಬ್ದಾರಿಯನ್ನು ನಿರ್ವಹಿಸಲು ಕಾರ್ಯದರ್ಶಿಗೆ ಸಹಕರಿಸುವುದು. ಹಾಗೂ ಕಾರ್ಯದರ್ಶಿಯ ಅನುಪಸ್ಥಿತಿಯಲ್ಲಿ ಅವರ ಜವಾಬ್ದಾರಿ ನಿರ್ವಹಿಸುವುದು.
19.4.2 ಮಾಹೆಯಾನ ಕೆಲಸ ನಿರ್ವಹಿಸಿದ ರಿಪೋರ್ಟನ್ನು[ತಿoಡಿಞ ಜoಟಿe sಣಚಿಣemeಟಿಣ]ಸಿದ್ಧಪಡಿಸಿ ಸಭೆಯ ಮುಂದಿಡುವುದು ಹಾಗೂ ಕಚೇರಿಗೆ ದಾಖಲಿಸಲು ಕೊಡುವುದು.
19.5 ಖಜಾಂಚಿ;
19.5.1 ಸಮಿತಿಯ ಆರ್ಥಿಕ ವ್ಯವಹಾರವನ್ನು ಜವಾಬ್ದಾರಿಯಿಂದ ನಿರ್ವಹಿಸುವುದು. ಆರ್ಥಿಕ ವ್ಯವಹಾರಗಳಿಗೆ ಸಂಬಂದಿಸಿದ ಲೆಕ್ಕ ಪತ್ರಗಳನ್ನು ನಿಯಮಾನುಸಾರ ಬರೆದಿಡುವುದು.
19.5.2 ಕಾರ್ಯದರ್ಶಿಯ ಅನುಮತಿ ಮೇರೆಗೆ ಖರ್ಚು-ವೆಚ್ಚಗÀಳನ್ನು ಭರಿಸುವುದು. ಕಾರ್ಯಕಾರಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಆರ್ಥಿಕ ವರದಿ ಮಂಡಿಸಿ ಅನುಮೋದನೆ ಪಡೆಯುವುದು.
19.5.3 ಬ್ಯಾಂಕ್ ಚೆಕ್ಕಿಗೆ ಮೊದಲ ಸಹಿ ಹಾಕುವ ಅಧಿಕಾರ ಹೊಂದಿರುತ್ತಾರೆ. ಎರಡನೆ ಸಹಿ ಕಾರ್ಯದರ್ಶಿಯವರು ಹಾಕಿದ ನಂತರವೇ ಚೆಕ್ಕು ಮೌಲ್ಯ ಪಡೆಯುತ್ತದೆ.
19.5.4 ಮಾಹೆಯಾನ ಕೆಲಸನಿರ್ವಹಿಸಿದ ರಿಪೋರ್ಟನ್ನು[ತಿoಡಿಞ ಜoಟಿe sಣಚಿಣemeಟಿಣ]ಸಿದ್ಧಪಡಿಸಿ ಸಭೆಯ ಮುಂದಿಡುವುದು ಹಾಗೂ ಕಚೇರಿಗೆ ದಾಖಲಿಸಲು ಕೊಡುವುದು.
20. ಕಾರ್ಯಕಾರಿಣಿ ಸಮಿತಿ ಸದಸ್ಯರು.
20.1 ಪ್ರತಿಯೊಬ್ಬ ಕಾರ್ಯಕಾರಿಣಿ ಸದಸ್ಯರು ಕಾರ್ಯಕಾರಿ ಸಮಿತಿ ಸಭೆಗೆ ಹಾಜರಾಗಿ ನಡಾವಳಿಗಳನ್ನು ಚರ್ಚಿಸಿ ತೀರ್ಮಾನ ಕೈಗೊಂಡು ಕಾರ್ಯಾನುಷ್ಠಾನಗೊಳಿಸಲು ಕಾರ್ಯಪ್ರವೃತ್ತರಾಗುವುದು ಹಾಗೂ ಸಮಿತಿ ತೀರ್ಮಾನಿಸಿದ ಜವಾಬ್ದಾರಿಯನ್ನು ನಿರ್ವಹಿಸುವುದು.
20.2 ಮಾಹೆಯಾನ ಕೆಲಸನಿರ್ವಹಿಸಿದ ರಿಪೋರ್ಟನ್ನು[ತಿoಡಿಞ ಜoಟಿe sಣಚಿಣemeಟಿಣ]ಸಿದ್ಧಪಡಿಸಿ ಸಭೆಯ ಮುಂದಿಡುವುದು ಹಾಗೂ ಕಚೇರಿಗೆ ದಾಖಲಿಸಲು ಕೊಡುವುದು.
21. ಜಿಲ್ಲಾ ಪದಾಧಿಕಾರಿಗಳ ಕರ್ತವ್ಯಗಳು
21.1 ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಕರ್ತವ್ಯಗಳು ರಾಜ್ಯ ಸಮಿತಿ ಪದಾಧಿಕಾರಿಗಳ ಸ್ವರೂಪದ ಕರ್ತವ್ಯಗಳೆ ಆಗಿರುತ್ತದೆ. ತಮ್ಮ ತಮ್ಮ ಜಿಲ್ಲೆ ವ್ಯಾಪ್ತಿಯಲ್ಲಿ ಅದೇ ಮಾದರಿಯಲ್ಲಿ ಕೆಲಸ ನಿರ್ವಹಿಸುವುದು.
21.2 ಸಹ-ಕಾರ್ಯದರ್ಶಿ: ತಾಲೋಕುವಾರು ಸಂಘಟನೆಯನ್ನು ವಿಸ್ತರಿಸುವ, ಸದಸ್ಯತ್ವ ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಹಾಗೂ ಕಾರ್ಯಕಾರಿ ಸಮಿತಿಯು ತೀರ್ಮಾನಿಸಿದ ಜವಾಬ್ದಾರಿಯನ್ನು ನಿರ್ವಹಿಸುವುದು ಮತ್ತು ಮಾಹೆಯಾನ ಕೆಲಸ ನಿರ್ವಹಿಸಿದ ರಿಪೋರ್ಟನ್ನು[ತಿoಡಿಞ ಜoಟಿe sಣಚಿಣemeಟಿಣ]ಸಿದ್ಧಪಡಿಸಿ ಸಭೆಯ ಮುಂದಿಡುವುದು ಹಾಗೂ ಕಚೇರಿಗೆ ದಾಖಲಿಸಲು ಕೊಡುವುದು.
21.3 ತಾಲೋಕು ಮತ್ತು ಘಟಕ ಪದಾಧಿಕಾರಿಗಳ ಕೆಲಸ ಸರಿಸುಮಾರು ಜಿಲ್ಲಾ ಸಮಿತಿ ಪದಾಧಿಕಾರಿಗಳ ಮಾದರಿಯಲ್ಲೇ ಇರುತ್ತದೆ.
22. ಕಾÀರ್ಯಕಾರಿ ಸಮಿತಿ ಸಭೆ ಮತ್ತು ಕಾರ್ಯನಿರ್ವಹಣೆ
22.1 ಸಭೆ:
22.1.1 ಕಾರ್ಯಕಾರಿ ಸಮಿತಿ ಸದಸ್ಯರು ಮಾತ್ರ ಭಾಗವಹಿಸಬೇಕು. ಕಾರ್ಯದರ್ಶಿ ಮಂಡಿಸಿದ ವಿಷಯಗಳ ಕುರಿತು ಚರ್ಚಿಸಿ ಮತದಾನ ಮಾಡುವ ಅಧಿಕಾರ ಸಮಿತಿ ಸದಸ್ಯರಿಗೆ ಇರುತ್ತದೆ. ಹಾಗೂ ಬಹುಮತದ ತೀರ್ಮಾನಕ್ಕೆ ಬದ್ಧರಾಗಿ ಕಾರ್ಯಾನುಷ್ಠಾನಗೊಳಿಸುವುದು.
22.1.2 ಸಭೆ ಕರೆಯುವ ಅಧಿಕಾರ ಕಾರ್ಯದರ್ಶಿಯದ್ದಾಗಿರುತ್ತದೆ. ಸದಸ್ಯರು ಅಥವ ಇತರೆ ಪದಾಧಿಕಾರಿಗಳು ಸಭಾ ಆಹ್ವಾನದ ಕುರಿತು ಕಾರ್ಯದರ್ಶಿಯವರಿಗೆ ಸಲಹೆ, ಸೂಚನೆ, ನೀಡಬಹುದು.
22.1.3 ಅಧ್ಯಕ್ಷರೊಂದಿಗೆ ಚರ್ಚಿಸಿ ಕಾರ್ಯದರ್ಶಿ ಸಭೆಯ ಅಜೆಂಡ ನಿರ್ಧರಿಸುತ್ತಾರೆ ನೋಟಿಸಿನಲ್ಲಿ ಅಜೆಂಡ ನಮೂದಿಸಿರಬೇಕು. ಯಾವುದಾರೂ ಅಜೆಂಡ ಸಭೆಯಲ್ಲಿ ಚರ್ಚಿಸಲು ಇತರೇ ಸದಸ್ಯರು ಬಯಸಿದರೆ ಲಿಖಿತವಾಗಿ ಮೊದಲೇ ಕಾರ್ಯದರ್ಶಿಗೆ ತಿಳಿಸಿರಬೇಕು ಅಥವ ಸಭೆ ನಡೆಯುವ ಮುನ್ನ ಸಭಾಧ್ಯಕ್ಷರ ಅನುಮತಿ ಮೇರೆಗೆ ಇತರೆ ಅಜೆಂಡದ ಅಡಿಯಲ್ಲಿ ಸಮಯಾವಕಾಶವಿದ್ದರೆ ಚರ್ಚಿಸಬಹುದು.
22.1.4 ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಕನಿಷ್ಠ 3 ತಿಂಗಳಿಗೊಮ್ಮೆ ನಡೆಯತಕ್ಕದ್ದು.
22.1.5 ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯನ್ನು ಕನಿಷ್ಠ 2 ತಿಂಗಳಿಗೊಮ್ಮೆ ನಡೆಯತಕ್ಕದ್ದು.
22.1.6 ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಭೆ ಕನಿಷ್ಠ ತಿಂಗಳಿಗೊಮ್ಮೆ ನಡೆಯತಕ್ಕದ್ದು.
22.1.7 ತಾಲೋಕು ಮತ್ತು ಘಟಕ ಸಮಿತಿ ಸಭೆಯನ್ನು ಕನಿಷ್ಠ ತಿಂಗಳಿಗೊಂದು ಬಾರಿ ನಡೆÉಯಬೇಕು.
22.2 ಸಾಮಾನ್ಯ ಸಭೆ [ದೈನಂದಿನ ಚಟುವಟಿಕೆ/ಸರ್ವಸದಸ್ಯರ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಗಳ ಕಾರ್ಯಾನುಷ್ಠಾನ] ಕರೆಯಲು ಕನಿಷ್ಠ ಒಂದು ವಾರ ಮೊದಲೇ ಲಿಖಿತ ನೋಟೀಸ್ ಜಾರಿಮಾಡುವುದು.
22.3 ವಿಶೇಷ ಸಭೆ [ದೈನಂದಿನ ಚಟುವಟಿಕೆ/ಸರ್ವಸದಸ್ಯರ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಗಳ ಕಾರ್ಯಾನುಷ್ಠಾನ ಹೊರತು ಪಡಿಸಿ ಆ ಕ್ಷಣದ ಅನಿವಾರ್ಯ ಚಟುವಟಿಕೆ ನಡೆಸಬೇಕೆಂದಿದ್ದರೆ] ಕನಿಷ್ಠ 3 ದಿನ ಮೊದಲು ತಿಳಿಸಬೇಕು.
22.4 ತುರ್ತು ಸಭೆ [ಅನಿವಾರ್ಯ ಹಾಗೂ ಸಂವಿಧಾನಾತ್ಮಕ ಬಿಕ್ಕಟ್ಟು ಹಾಗೂ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ] 24 ಗಂಟೆ ಮೊದಲೇ ಯಾವುದಾದರೂ ಮಾಧ್ಯಮದ[ದೂರವಾಣಿ, ಟೆಲೆಗ್ರಾಂ, ಈಮೇಲ್, ಪತ್ರ] ಮೂಲಕ ವಿಷಯ ತಿಳಿಸುವುದು.
22.5 ಕೋರಂ :
22.5.1 ಸಾಮಾನ್ಯ ಸಭೆ ನಡೆಸಲು ಕನಿಷ್ಠ ಮೂರನೇ ಒಂದು ಸದಸ್ಯರು ಹಾಜರಾತಿ ಕಡ್ಡಾಯ, ವಿಶೇಷ ಹಾಗೂ ತುರ್ತು ಸಭೆಗೆ ಕನಿಷ್ಠ ನಾಲ್ಕನೇ ಒಂದು ಭಾಗ ಸದಸ್ಯರ ಹಾಜರಿ ಕಡ್ಡಾಯ.
22.5.2 ಸಾಮಾನ್ಯ ಹಾಗೂ ವಿಶೇಷ ಸಭೆಗೆ ಕೋರಂಗಾಗಿ ಕಾಯಲು 30 ನಿಮಿಷಗಳ ಸಮಯ ಸಡಿಲಿಕೆ ಇರುತ್ತದೆ ಹಾಗೂ ಈ ಸಡಿಲಿಕೆ ಹೊರತಾಗೂ ಕೋರಂ ಇರದಿದ್ದರೆ ಸಭೆಯನ್ನು ರೆಕಾರ್ಡ್ ಮಾಡಿ ಮುಂದೂಡುವುದು. ಆದರೆ ತುರ್ತು ಸಭೆಗೆ ಮೇಲ್ಕಾಣಿಸಿದಷ್ಠೇ ಸಮಯ ನೀಡಿ ನಂತರ ಕೋರಂ ಇಲ್ಲದಿದ್ದರೂ ಸಹ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬಹುದು ಇದ್ದ ಸದಸ್ಯರಲ್ಲಿ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿರಬೇಕು.
22.5.3 ಪದಾಧಿಕಾರಿಗಳು ಕನಿಷ್ಠ 3ಜನರಿದ್ದರೆ ಪದಾಧಿಕಾರಿಗಳ ಸಭೆ ನಡೆಸಬಹುದು.
22.5.4 ಮಹಾಧಿವೇಶನ/ಮಹಾ ಸಭೆಗೆ ಆಹ್ವಾನಿತ ಸದಸ್ಯರ ಸಂಖ್ಯೆಯ ಮೂರನೇ ಒಂದು ಭಾಗದಷ್ಟು ಸದಸ್ಯರ ಸಂಖ್ಯೆಯಷ್ಟು ಹಾಜರಿದ್ದರೆ ಕೋರಂ ಆಗುತ್ತದೆ. ಒಂದು ವೇಳೆ ನಿಗದಿತ ಸಂಖ್ಯೆಯಲ್ಲಿ ಸದಸ್ಯರು ಹಾಜರಿರದಿದ್ದರೆ ಸಭೆಯನ್ನು ಅರ್ಧ ಗಂಟೆ ಕಾಲ ಮುಂದೂಡಿ ನಂತರ ಸಭೆಯನ್ನು ನಡೆಸಬೇಕು ಆಗ ಕೋರಂ ಪ್ರಶ್ನೆ ಉದ್ಭವಿಸುವುದಿಲ್ಲ.
22.6 ತೀರ್ಮಾನಗಳು
22.6.1 ಯಾವುದೇ ತೀರ್ಮಾನ ಬಹುಮತದ ತೀರ್ಮಾನವಾಗಿರುತ್ತದೆ.
22.6.2 ಸಾಮಾನ್ಯ ಸಭೆಯ ವಿಷಯಗಳಿಗೆ ಹಾಜರಿದ್ದ ಸದಸ್ಯರ ಸಂಖ್ಯೆಯ ಅರ್ಧಕ್ಕಿಂತ ಒಂದು ಅಧಿಕ ಮತ ಬಂದರೆ(50%+1 ಮತ) ಅದೇ ತೀರ್ಮಾನವನ್ನು ಎಲ್ಲರೂ ಅಂಗೀಕರಿಸತಕ್ಕದ್ದು.
22.6.3 ವಿಶೇಷ ಸಭೆಯ ವಿಷಯಗಳಿಗೆ ಅಂದರೆ ಪದಾಧಿಕಾರಿಗಳನ್ನು ತೆಗೆದುಹಾಕುವ ಅಥವ ಸಂಘಟನಾ ಸಂವಿಧಾನಾತ್ಮಕ ಬಿಕ್ಕಟಿನ ವಿಷಯವಾಗಿದ್ದಾಗ ಸಭೆಯ ಹಾಜರಾತಿ ಒಟ್ಟು ಸಮಿತಿ ಸದಸ್ಯರ ಅರ್ಧಕ್ಕಿಂತ ಹೆಚ್ಚಿರಬೇಕು ಹಾಗೂ ತೀರ್ಮಾನ ಮೂರನೇ ಎರೆಡು ಬಹುಮತದಲ್ಲಿರಬೇಕು.
22.6.4 ಸಭಾಧ್ಯಕ್ಷರ ಮತಕಾಯ್ದಿರಿಸಿದ್ದು ಮತದಾನವು ಸಮ ಆದಾಗ ತಮ್ಮ ಮತ ಚಲಾಯಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಇರುತ್ತದೆ.
22.6.5 ಯಾರ ವಿರುದ್ಧ ವಿಶ್ವಾಸದ ಗೊತ್ತುವಳಿ ಮೇಲೆ ಮತದಾನ ನಡೆಯುತ್ತಿದ್ದರೆ ಆರೋಪಿತ ಸದಸ್ಯರು ಮತದಾನದಲ್ಲಿ ಭಾಗವಹಿಸುವಂತಿಲ್ಲ.
23. ಸದಸ್ಯರ ಮತ್ತು ಪದಾಧಿಕಾರಿಗಳ ಅಧಿಕಾರವಧಿ
23.1 ಎಲ್ಲಾ ಸ್ಥರದ (ರಾಜ್ಯ, ಜಿಲ್ಲೆ, ತಾಲೋಕು ಮತ್ತು ಘಟಕ) "ಕಾರ್ಯಕಾರಿ ಸಮಿತಿ"ಯ ಅಧಿಕಾರವಧಿ ಎರೆಡು ವರ್ಷ ಅವಧಿಯದ್ದಾಗಿರುತ್ತದೆ.
23.2 ರಾಜ್ಯ ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸತತವಾಗಿ 2ಅವಧಿಯವರೆಗೆ ಮಾತ್ರ ಅದೇ ಹುದ್ದೆಯಲ್ಲಿ ಇರಬಹುದು. ಈ ನಿಬಂಧನೆ ಕೆಳ ಸಮಿತಿಗಳಿಗೆ ಅನ್ವಯಿಸುವುದಿಲ್ಲ.
24. ಸಮಿತಿಯ ವಿಸರ್ಜನೆ
23.1 ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಶೇಖಡ 75 ರಷ್ಟು ಸದಸ್ಯರ ಒಪ್ಪಿಗೆಯೊಂದಿಗೆ ಸಮಿತಿಯನ್ನು ವಿಸರ್ಜಿಸಬಹುದು. ವಿಸರ್ಜನೆ ಮಾಡಿದ ಸಂದರ್ಬದಲ್ಲಿ ಸಮಿತಿಯ ಸ್ಥಿರ, ಚರ ಆಸ್ತಿಗಳನ್ನ ಸಭೆ ತೀರ್ಮಾನಿಸಿದ ಇತರೆ ಸಮಾನ ಮನಸ್ಕ ಮತ್ತು ಸಮಾನ ಧ್ಯೇಯೋದ್ದೇಶಗಳನ್ನು ಹೊಂದಿರುವ ಸಂಘಟನೆಗಳಿಗೆ ವರ್ಗಾಯಿಸುವುದು.
25. ಆರ್ಥಿಕ ವರ್ಷ ಮತ್ತು ಲೆಕ್ಕ-ಪತ್ರ
25.1 ಸಮಿತಿಯ ಆರ್ಥಿಕ ವರ್ಷ ರಾಷ್ಟ್ರೀಯ ಆರ್ಥಿಕ ವರ್ಷವಾದ ಏಪ್ರಿಲ್ 1ರಿಂದ ಮಾರ್ಚ್31 ರವರಗೆ ಇರುತ್ತದೆ.
25.2 ಲೆಕ್ಕ ಪರಿಶೋಧಕರನ್ನು ಕೇಂದ್ರ ಕಾರ್ಯಕಾರಿ ಸಮಿತಿಯು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಹೊಂದಿರುತ್ತದೆ. ಆಯ್ಕೆಯಾಗುವ ಲೆಕ್ಕ ಪರಿಶೋಧಕ ಕಾರ್ಯಕಾರಿ ಸಮಿತಿ ಸದಸ್ಯನಾಗಿರಬಾರದು.
25.3 ಲೆಕ್ಕ ಪರಿಶೋಧಕ ಸಮಿತಿಯ ಖರ್ಚು-ವೆಚ್ಚದ, ಆಯವ್ಯಯದ, ವಿವರಣೆಗಳನ್ನು ಆರ್ಥಿಕ ಕಂಡಿಕೆಗೆ ಅನುಗುಣವಾಗಿ ಸಿದ್ದಪಡಿಸಿ ಮಹಾಸಭೆಯಲ್ಲಿ ಮಂಡಿಸಬೇಕು.
25.4 ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಭಾರತ ಜ್ಞಾನ ವಿಜ್ಞಾ ಸಮಿತಿಯ ಹೆಸರಿನಲ್ಲೇ ತೆರೆಯಬೇಕು.
25.5 ವ್ಯವಹಾರ ಜಂಟಿ ನಿರ್ವಹಣೆಯಾಗಿರುತ್ತದೆ. ಕಾರ್ಯದರ್ಶಿ ಹಾಗೂ ಖಜಾಂಚಿ ಜಂಟಿಯಾಗಿ ಹಣಕಾಸಿನ ವ್ಯವಹಾರ ಹಾಗೂ ಚೆಕ್ಕುಗಳಿಗೆ ಸಹಿಹಾಕುವ ಅಧಿಕಾರ ಹೊಂದಿರುತ್ತಾರೆ.
25.6 ಯಾವುದೇ ಸದಸ್ಯ ಯಾವುದೇ ವಿಧದ ಆರ್ಥಿಕ ವಿವರಣೆಯನ್ನು ಕಾರ್ಯದರ್ಶಿ ಅಥವ ಅಧ್ಯಕ್ಷರ ಮೂಲಕ ಮಾತ್ರವೇ ಪಡೆದುಕೊಳ್ಳಬಹುದು.
25.7 ಸಮಿತಿಯ ಆರ್ಥಿಕ ವ್ಯವಹಾರಕ್ಕೆ ಆಂತರಿಕ ಲೆಕ್ಕಪರಿಶೋಧನಾಸಮಿತಿಯನ್ನು ನೇಮಕ ಮಾಡಬಹುದು ಹಾಗೂ ಸೂಕ್ತ ಹಣಕಾಸು ಮ್ಯಾನುಯಲ್ಗಳನ್ನು ಸಿದ್ಧಪಡಿಸಿಕೊಳ್ಳಬಹುದು ಆದರೆ ಕಾರ್ಯಕಾರಿ ಸಮಿತಿಯಲ್ಲಿ ಇವಕ್ಕೆ ಅನುಮೋದನೆ ಪಡೆಯಬೇಕು.
26. ದಾಖಲಾತಿ ಪುಸ್ತಕ ಹಾಗೂ ಪ್ರಪತ್ರಗಳು(ನಮೂನೆ)
25.1 ಸಮಿತಿಯು ಅಗತ್ಯ ಕಂಡ ದಾಖಲಾತಿ ಪುಸ್ತಕ ಹಾಗೂ ಪ್ರಪತ್ರಗಳನ್ನು ಕಾರ್ಯಾಲಯದಲ್ಲಿ ನಿರ್ವಹಿಸುವುದು.[ಸದಸ್ಯತ್ವ ದಾಖಲಾತಿ, ಹಾಜರಾತಿ, ಲೆಕ್ಕಪತ್ರ ದಾಖಲಾತಿ, ಸ್ಥಿರ-ಚರ ಆಸ್ತಿವಹಿ, ಸಭಾ ನಡಾವಳಿ, ಇಂಡೆಂಟ್ ಪುಸ್ತಕ, ಸಭಾಸೀನ ಸದಸ್ಯರ ಸಹಿ ಸಂಗ್ರಹ, ಸಿಬ್ಬಂದಿ ನೇಮಕಾತಿ ವಹಿ, ಇತ್ಯಾದಿ]
26 ಸಂವಿಧಾನದಲ್ಲಿ ಬದಲಾವಣೆ.
26.1 ಕಾರ್ಯಕ್ರಮ ಮತ್ತು ಸಂವಿಧಾನವನ್ನು ರಾಜ್ಯ ವಿಶೇಷ ಮಹಾಸಭೆ ಮಾತ್ರ ಬದಲಾವಣೆ ಮಾಡುತ್ತದೆ.
26.2 ಯಾವುದೇ ಸದಸ್ಯ ಅಥವ ಘಟಕ/ತಾಲೋಕು/ಜಿಲ್ಲೆ ಅಥವ ಕೇಂದ್ರ ಕಾರ್ಯಕಾರಿ ಸಮಿತಿ ಸಂವಿಧಾನಕ್ಕೆ ತಿದ್ದುಪಡಿ ಬಯಸಿದಲ್ಲಿ, ಮಹಾಸಭೆ ನಡೆಯುವ ಕನಿಷ್ಠ 2ತಿಂಗಳು ಮೊದಲು ಸಂವಿಧಾನಕ್ಕೆ ಸೂಚಿತ ತಿದ್ದುಪಡಿಯ ನೋಟೀಸನ್ನು ಲಿಖಿತವಾಗಿ ರಾಜ್ಯ ಸಮಿತಿಗೆ ನೀಡಬೇಕು. ಇದನ್ನು 1 ತಿಂಗಳು ಮುಂಚಿತವಾಗಿ ಕೇಂದ್ರ ಸಮಿತಿಯು ತನ್ನ ನಂತರದ ಕೆಳ ಸಮಿತಿಗಳಿಗೆ ಅ ಸಮಿತಿಗಳು ತನ್ನ ನಂತರದ ಸಮಿತಿಗಳಿಗೆ ತಲುಪಿಸಬೇಕು.
26.3 ಕಾರ್ಯಕ್ರಮ ಮತ್ತು ಸಂವಿಧಾನಕ್ಕೆ ಸೂಚಿತವಾದ ಎಲ್ಲಾ ತಿದ್ದುಪಡಿಗಳನ್ನು ಸಮ್ಮೇಳನದಲ್ಲಿ ಭಾಗವಹಿಸಿದ ಮೂರರಲ್ಲಿ ಎರೆಡರಷ್ಟು ಬಹುಮತದ ಅಂಗೀಕಾರ ಪಡೆಯಬೇಕು.
27. ಘೋಷಣೆ:
ಸಮಿತಿಯ ಈ ಮೇಲ್ಕಂಡ ಎಲ್ಲಾ ನಿಬಂಧನೆಗಳನ್ನು ಓದಿ ತಿಳಿದುಕೊಂಡು ಅದರಂತೆ ನಾನು/ನಾವೆಲ್ಲರೂ ನಡೆದುಕೊಳ್ಳುವುದಾಗಿ ಪ್ರಮಾಣ ಪೂರ್ವಕವಾಗಿ ಘೋಷಿಸುತ್ತೇವೆ. ಹಾಗೂ ಭಾರತ ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಮತ್ತು ಅದರ ಪ್ರಜಾತಾಂತ್ರಿಕ ಮೌಲ್ಯಗಳನ್ನು ರಕ್ಷಿಸಲು ನಾನು/ನಾವು ಸದಾ ಸಿದ್ಧನಿದ್ದೇನೆ(ವೆ) ಅಲ್ಲದೆ ಜಾತ್ಯಾತೀತ ಮನೋಧರ್ಮ, ಧರ್ಮ ನಿರಪೇಕ್ಷ ತತ್ವಗಳನ್ನು ಸ್ವತಹಃ ಅಳವಡಿಸಿಕೊಂಡು ಮೂಢನಂಬಿಕೆಯಿಂದ ಜನತೆಯನ್ನು ಹೊರತರಲು ಆ ಮೂಲಕ ಜನತೆಯಲ್ಲಿ ವಿಜ್ಞಾನವನ್ನು ಪ್ರಸಾರ ಮಾಡಿ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಕೊಳ್ಳುವಂತೆ ಪ್ರೇರೇಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ/ನೆ ಮತ್ತು ಯಾವುದೇ ಘಟನೆಗಳನ್ನು ಭಾವನಾತ್ಮಕವಾಗಿ ಪ್ರತಿಕ್ರಿಯಿಸದೆ ಐತಿಹಾಸಿಕ ಹಿನ್ನಲೆಯಲ್ಲಿ ವೈಜ್ಞಾನಿಕ ಧೃಷ್ಠಿಕೋನದಿಂದ ಪ್ರತಿಕ್ರಿಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ/ವೆ ಎಂದು ಪ್ರಮಾಣೀಕರಿಸುತ್ತೇನೆ/ವೆ.

No comments:
Post a Comment