ಕೊಟ್ರೇಶ್ ಎಸ್.ಉಪ್ಪಾರ್,
ಬಿಜಿವಿಎಸ್ ಆಲೂರು
ಮೊ-9483470794
ನವಂಬರ್ 10, ಟಿಪ್ಪು ದಿನಾಚರಣೆ ನಿಮಿತ್ತ
‘ಸರಿಯಾರ್ ಟೀಪುವಿನೋಳ್ ಸಮಂತು ಬಗೆಯಲ್ ಸಂಗ್ರಾಮ ಸಮ್ರಾಟರೋಳ್?’
‘ದಾಸ್ಯದಲ್ಲಿ ನೂರು ವರ್ಷ ನಾಯಿಯಂತೆ ಬಾಳುವುದಕ್ಕಿಂತಲೂ ಸ್ವಾತಂತ್ರ್ಯದಲ್ಲಿ ಒಂದು ದಿನ ಹುಲಿಯಂತೆ ಬಾಳುವುದು ಲೇಸು’ ಎನ್ನುವುದರ ಪ್ರತೀಕವಾಗಿ ಒರೆಯಿಂದ ಕತ್ತಿ (ಖಡ್ಗ) ಎಳೆದು ರಣರಂಗಕ್ಕೆ ನುಗ್ಗಿ, ಶತೃಗಳೊಡನೆ ಹೋರಾಡುತ್ತ ಪ್ರಾಣ ತ್ಯಜಿಸಿದ ವೀರ ಸೇನಾನಿ, ನಿಷ್ಠಾವಂತ ದೇಶಭಕ್ತ, ಗಂಡುಗಲಿ ಎಂದರೆ ಟಿಪ್ಪು ಸುಲ್ತಾನ್, ಹಿಂದೂಸ್ತಾನದ ಚರಿತ್ರೆಯಲ್ಲಿ ಟಿಪ್ಪು ಸುಲ್ತಾನನ ಹೆಸರು ಅಮರವಾಗಿ ಅಚ್ಚಳಿಯದೇ ಉಳಿದಿದೆ. ‘ಮೈಸೂರು ಹುಲಿ’ ಎಂದು ಜಗತ್ಪ್ರಸಿದ್ಧಿ ಪಡೆದ ಟಿಪ್ಪು ಸುಲ್ತಾನ್ ಒಬ್ಬ ಅಚ್ಚ ಕನ್ನಡಿಗ.
ಕ್ರಿ.ಶ. 1752 ರಲ್ಲಿ ಕೋಲಾರ ಜಿಲ್ಲೆಯ ದೇವನಹಳ್ಳಿಯಲ್ಲಿ ವೀರಸೇನಾನಿ, ಅಪ್ರತಿಮ ಹೋರಾಟಗಾರ ಹಾಗೂ ರಾಜನಾದ ‘ಹೈದರ್ ಅಲಿ’ಯ ಮಗನಾಗಿ ಟಿಪ್ಪು ಜನ್ಮ ತಾಳಿದನು.
ಟಿಪ್ಪು ನಾಮಕರಣದ ಹಿನ್ನೆಲೆ:
ಹೈದರಾಲಿಯ ಹೆಂಡತಿಯಾದ ‘ಫಾತಿಮಾ ಬೇಗಂ’ ಒಮ್ಮೆ ಆಕೆಯ ತವರೂರಾದ ಅರ್ಕಾಟಿನಲ್ಲಿ ‘ಹಜರತ್ ಟಿಪ್ಪು ಸುಲ್ತಾನೆ ಅವಲಿಯ’ ಎಂಬ ಹೆಸರಿನ ಒಬ್ಬ ಮುಸ್ಲಿಂ ಸಂತರ ಸಮಾಧಿಗೆ ಮದುವೆಯ ಹೊಸದರಲ್ಲಿ ಭೇಟಿ ನೀಡಿದ್ದಳಂತೆ, ನಂತರ ಒಂದು ಗಂಡು ಮಗುವಿಗೆ ಜನ್ಮ ನೀಡಿದಾಗ, ಆ ಗೋರಿಯ ಮುಂದೆ ಪುತ್ರನಿಗಾಗಿ ಹರಕೆ ಹೊತ್ತಿದ್ದನ್ನು ನೆನಪಿಸಿಕೊಂಡು, ಆ ಸಂತರ ಅಭಿಮಾನದಿಂದ ಮಗುವಿಗೆ ‘ಟಿಪ್ಪು ಸುಲ್ತಾನ್’ ಎಂದು ಹೆಸರಿಟ್ಟರು.
ಟಿಪ್ಪು ಸುಲ್ತಾನ್ ಚಿಕ್ಕವಯಸ್ಸಿನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಕಷ್ಟಗಳ ಸಾಗರದಲ್ಲಿ ಈಜಿ ದಡ ಸೇರಿದವನು. ಟಿಪ್ಪು ಸುಲ್ತಾನನ ವಯಸ್ಸು ಹತ್ತು ವರ್ಷವಿದ್ದಾಗ ಒಂದು ಸ್ವಾರಸ್ಯವಾದ ಘಟನೆ ನಡೆಯಿತು.
ಒಂದು ದಿನ ಟಿಪ್ಪು ಶ್ರೀರಂಗಪಟ್ಟಣದ ಒಂದು ಮೈದಾನದಲ್ಲಿ ಆಟವಡುತ್ತಿದ್ದನು. ಆಗ ಒಬ್ಬ ಫಕೀರನು ಅಲ್ಲಿಗೆ ಬಂದನು. ಆಡುತ್ತಿದ್ದ ಟಿಪ್ಪುವನ್ನು ಸ್ವಲ್ಪ ಹೊತ್ತ್ತು ದೃಷ್ಟಿಸಿ ನೋಡಿ, ಬಳಿಗೆ ಬಂದು ಅವನ ಭುಜದ ಮೇಲೆ ಕೈ ಹಾಕಿ ಹೇಳಿದನು.
‘ಮಗು ನಿನ್ನ ಮುಖದಲ್ಲಿ ರಾಜಕಳೆಯಿದೆ. ಒಂದು ವೇಳೆ ನಿನಗೆ ರಾಜ್ಯ ಲಭ್ಯವಾದರೆ ಈ ಸ್ಥಳದಲ್ಲಿ ಒಂದು ಮಸೀದಿಯನ್ನು ಕಟ್ಟಿಸುವೆಯಾ?’ ಬಾಲ ಸಹಜವಾದ ಸಂಕೋಚದಿಂದ ಟಿಪ್ಪು ಉತ್ತರವಿತ್ತನು. ‘ಆಗ ಅಗತ್ಯವಾಗಿ ಮಸೀದಿ ಕಟ್ಟಿಸುವೆ’. ಮುಂದೆ ಫಕೀರನ ಭವುಷ್ಯವಾಣಿ ನಿಜವಾಯಿತು. ಮೈಸೂರ್ ರಾಜ್ಯಕ್ಕೆ ಒಡೆಯನಾದ ಮೇಲೆ ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣದ ಆ ಮೈದಾನದಲ್ಲಿ ಒಂದು ಭವ್ಯವಾದ ಮಸೀದಿಯನ್ನು ಕಟ್ಟಿಸಿದನು. ಎತ್ತರವಾದ ಮಿನಾರತ್ತುಗಳಿಂದ ಶ್ರೀರಂಗಪಟ್ಟಣದಲ್ಲಿ ಈಗಲೂ ರಾಜಾಜಿಸುತ್ತಿರುವ ಭವ್ಯ ಕಟ್ಟಡವೇ ‘ಮಸ್‍ಜಿದ್-ಎ-ಅಲಾ’ ಫಕೀರನಿಗಿತ್ತ ವಾಗ್ದಾನದಂತೆ ಟಿಪ್ಪು ನಡೆದುಕೊಂಡನು.
ಟಿಪ್ಪು ಸುಲ್ತಾನನಿಗೆ ಹನ್ನೆರೆಡು ವರ್ಷ ವಯಸ್ಸಾದಾಗ ಸಮರ ವಿದ್ಯೆಯ ಶಿಕ್ಷಣ ನೀಡಲಾಯಿತು. ‘ಫಾಜೀಖಾನ’ನೆಂಬ ಸರದಾರ ಅವನ ಗುರುವಾದನು. ಗುರುಗಳು ಟಿಪ್ಪುವಿಗೆ ಕುದುರೆ ಸವಾರಿ, ಬಂದೂಕಿನ ಉಪಯೋಗ, ಕತ್ತಿವರಸೆ ಹಾಗೂ ಯುರೋಪಿಯನ್ ಮಾದರಿಯ ಯುದ್ಧ ಕಲೆಯನ್ನು ಕಲಿಸಿದರು. ಇವರು ತನ್ನ ಐದನೇ ವಯಸ್ಸಿಲ್ಲಿಯೇ ಅಕ್ಷರಭ್ಯಾಸವನ್ನು ಕಲಿಯಲು ಪ್ರಾರಂಭಿಸಿದ್ದರು. ಮೊದಲು ಅರಬ್ಬಿ ಭಾಷೆಯನ್ನು ಕಲಿತು ನಂತರ ಕನ್ನಡ ಮತ್ತು ಪರ್ಶಿಯನ್ ಭಾಷೆಯನ್ನು ಕಲಿತಿದ್ದರು.
ಹದಿನಾರು ವರ್ಷ ತುಂಬುವ ಹೊತ್ತಿಗಾಗಲೇ ಒಬ್ಬ ಶಿಸ್ತಿನ ಸಿಪಾಯಿಯಾಗಿದ್ದನು. ಬಾಲ್ಯದಲ್ಲಿಯೇ ಟಿಪ್ಪು ತೋರಿಸಿದ ಸಾಹಸ ಮತ್ತು ಮಿಲಟರಿ ಕೌಶಲಗಳು ‘ನಿಷಾನ್-ಎ-ಹೈದರಿ’ಎಂಬ ಪುಸ್ತಕದಲ್ಲಿ ಸ್ವಾರಸ್ಯವಾಗಿ ವರ್ಣಿತವಾಗಿದೆ.
ಒಂದನೇ ಮೈಸೂರು ಯುದ್ದಕ್ಕೆ ಮುಂಚೆ ಹೈದರಾಬಾದಿನ ನಿಜಾಮನೂ ಹಾಗೂ ಮೈಸೂರಿನ ಹೈದರ್ ಅಲಿ ಇಂಗ್ಲಿಷರ ವಿರುದ್ಧ ಯುದ್ದ ಮಾಡಲು ಒಪ್ಪಂದ ಮಾಡಿಕೊಂಡರು. ಈ ಒಪ್ಪಂದ ಚನ್ನಪಟ್ಟಣ ಬಳಿಯಾಯಿತು. ಆಗ ನಿಜಾಮ ಹೈದರಾಬಾದಿನಿಂದ ಮೈಸೂರು ರಾಜ್ಯಕ್ಕೆ ಬಂದು ಚನ್ನಪಟ್ಟಣದ ಬಳಿ ಬಿಡಾರ ಹೂಡಿದ್ದನು. ಒಪ್ಪಂದಕ್ಕೆ ಸಹಿ ಹಾಕಲು ಹೈದರನು ಹೋಗಲಿಲ್ಲ! ಬದಲಾಗಿ ತನ್ನ ಮಗನಾದ ಟಿಪ್ಪುವನ್ನು ಆ ಕೆಲಸಕ್ಕಾಗಿ ಕಳುಹಿಸಿದ್ದನು.
ಹದಿನಾರು ವರ್ಷದ ಟಿಪ್ಪು ಸುಲ್ತಾನ್ ಮೈಸೂರು ಸೈನ್ಯದ ಸರದಾರರೊಡನೆ ನಿಜಾಮನ ಬಿಡಾರಕ್ಕೆ ಹೋದಾಗ ಅವರೊಡನೆ ಆರು ಸಾವಿರ ಯೋಧರಿದ್ದರು. ನಿಜಾಮನ ಬಿಡಾರ ಸಮೀಪಿಸಿದಾಗ ಟಿಪ್ಪುವಿನ ಅಂಗರಕ್ಷಕ ಸವಾರರು ಬ್ಯಾಂಡ್ ಬಾರಿಸಿದರು. ಕೂಡಲೇ ನಿಜಾಮನು ಬಿಡಾರ ಸಮಿಪಿಸಿದಾಗ ಟಿಪ್ಪುವಿನ ಅಂಗರಕ್ಷಕ ಸವಾರರು ಬ್ಯಾಂಡ್ ಬಾರಿಸಿದರು. ಕೂಡಲೇ ನಿಜಾಮನು ಮತ್ತು ಅವನ ಪರಿವಾರದವರೂ ತಮ್ಮ ಡೇರೆಗಳಿಂದ ಹೊರಕ್ಕೆ ಬಂದು ನೋಡ ತೊಡಗಿದರು. ಅವರು ಕಂಡ ದೃಶ್ಯ ನಿಜಕ್ಕೂ ನಯನ ಮನೋಹರವಾಗಿತ್ತು! ಅಟ್ಟಹಾಸದಿಂದ ಅಶ್ವಾರೂಢನಾಗಿ ಬರುತ್ತಿದ್ದ ಟಿಪ್ಪು ಸುಲ್ತಾನನ ಹಿಂದೆ ಮೈಸೂರು ಸೈನ್ಯದ ಮುಖ್ಯ ಸರದಾರರಿದ್ದರು, ಅವರೆಲ್ಲರೂ ಕುದುರೆ ಸವಾರರಾಗಿದ್ದರು. ಅವರ ಹಿಂದೆ ಸಾಲು ಸಾಲಾಗಿ ಪಾದಾತಿದಳಗಳು ಬರುತ್ತಿದ್ದವು. ಅವರ ನಡಿಗೆ ಬ್ಯಾಂಡ್ ವಾದನಕ್ಕೆ ತಾಳ ಹಾಕಿದಂತಿತ್ತು ಎನ್ನಲಾಗಿದೆ. ತನ್ನ ಡೇರೆಯ ಬಳಿ ಟಿಪ್ಪು ಸುಲ್ತಾನ್ ಬಂದೊಡನೆಯೇ ನಿಜಾಮ ಅವನನ್ನು ಆದರದಿಂದ ಸ್ವಾಗತಿಸಿದನು. ಕುಶಲ ಸಂಭಾಷಣೆಯಾದ ನಂತರ ಟಿಪ್ಪು ಸುಲ್ತಾನನ ದಕ್ಷತೆಗೆ ಮೆಚ್ಚಿ ನಿಜಾಮನು ಅವನಿಗೆ ‘ನಸೀಮದ್ದೀನ್‍ದೌಲ’ ಎಂದು ಖಿಲ್ಲತ್ತು ಕೊಟ್ಟು ಗೌರವಿಸಿದನು. ಹೀಗೆ ಟಿಪ್ಪು ತನ್ನ ಆರಂಭಿಕ ಜೀವನದಲ್ಲಿ ತಂದೆಯ ಯುದ್ಧದಲ್ಲಿ ಅನೇಕ ಸಲ ಹೆಗಲಾಗಿ ನಿಂತು ಆಸರೆ ನೀಡಿದನು. ಅಷ್ಟೆ ವಿಜಯಗಳನ್ನು ತಂದು ಕೊಟ್ಟಿದ್ದಾನೆ.
ಕ್ರಿ.ಶ. 1770 ರಲ್ಲಿ ಮರಾಠರು ಒಂದು ಭಾರಿ ಸೈನ್ಯದೊಡನೆ ಮತ್ತೊಮ್ಮೆ ಮೈಸೂರಿನ ಮೇಲೆ ದಂಡೆತ್ತಿ ಬಂದರು. ಆಗ ಪೇಶ್ವೆಮಾಧವರಾಯನೇ ಆ ಸೈನ್ಯದ ಮಹಾ ದಂಡನಾಯಕನಾಗಿದ್ದನು. ಮೈಸೂರು ರಾಜ್ಯವನ್ನು ಗೆಲ್ಲುವ ಆಕಾಂಕ್ಷೆಯಿಂದಲೇ ಅವನು ಬಂದಿದ್ದನು. ಹೆಸರಾಂತ ಮರಾಠ ದಳವಾಯಿ ತ್ರಿಯಂಭಕನು ಈ ಸೈನ್ಯದ ದ್ವಿತೀಯ ಸೇನಾನಿಯಾಗಿದ್ದನು. ಎರಡೂವರೆ ವರ್ಷ ಪರ್ಯಂತ ಮರಾಠಿಯವರಿಗೂ ಮೈಸೂರಿನವರಿಗೂ ಯುದ್ಧ ನಡೆಯಿತು. ಈ ಅವಧಿಯಲ್ಲಿ ಪೇಶ್ವೆ ಮಾಧವರಾವ್ ಆರು ತಿಂಗಳವರೆಗೂ ಮೈಸೂರು ರಾಜ್ಯದಲ್ಲಿದ್ದನು.
ಆಗ ಟಿಪ್ಪವಿಗೆ ಹದಿನೆಂಟರ ವಯಸ್ಸು, ಆ ವೇಳೆಗಾಗಲೇ ಅವನು ಒಬ್ಬ ಶೂರ ಸರದಾರ ಎನಿಸಿಕೊಂಡಿದ್ದನ್ನು ಹೈದರನು ಅವನನ್ನು ಮರಾಠರೊಡನೆ ಯುದ್ಧ ಮಾಡಲು ಅನೇಕ ಸಲ ಕಳುಹಿಸಿದನು. ಹೋದ ಕಡೆಗಳಲ್ಲೆಲ್ಲಾ ಟಿಪ್ಪು ಅಸಮ ಸಾಮಥ್ರ್ಯ ತೋರಿಸಿದನು.
ಹೀಗೆ ಅನೇಕ ಜಯಗಳೊಂದಿಗೆ ರಾಜ್ಯವನ್ನು ವಿಸ್ತರಿಸಿಕೊಂಡನು ಹಾಗೂ ಶಿಸ್ತುಬದ್ಧ ರಾಜ್ಯಾಡಳಿತವನ್ನು ರೂಢಿಸಿ, ಉತ್ತಮ ನಾಯಕನೆನಿಸಿದನು.
ವಿವಾಹ:
ಇಪ್ಪತ್ತೆರಡು ವರ್ಷದ ಟಿಪ್ಪು ಸುಲ್ತಾನ್ ಮನ್ಮಥನಂತಿದ್ದ. ಮದುವೆಯ ವಯಸ್ಸು ಪ್ರಾರಂಭವಾದ್ದರಿಂದ ತಂದೆ, ತಾಯಿಗಳು ಅವನಿಗೆ ಒಂದು ಹೆಣ್ಣನ್ನು ನಿಶ್ಚಯಿಸಿದರು. ತಾಯಿ ಫಾತಿಮಾ ಬೇಗಂಳ ಬಂಧು ಲಾಲಾಮಿಯ ವರಕೋಲಿಯ ಮಗಳು ರುಖಿಯಾ ಬಾನೋ ಸ್ಪುರದ್ರೂಪಿ ಕನ್ಯೆಯಾಗಿದ್ದಳು. ಅವಳೊಡನೆ ಟಿಪ್ಪುವಿನ ವಿವಾಹವಾಯಿತು. ಸುಮಾರು ಒಂದು ತಿಂಗಳ ಕಾಲ ಶ್ರೀರಂಗ ಪಟ್ಟಣದಲ್ಲಿ ಮದುವೆಯ ಸಡಗರ ಬಹು ವಿಜೃಂಭಣೆಯಿಂದ ನಡೆಯಿತು. ಈ ಮದುವೆಗೆ ಅನೇಕ ಪಾಳೆಗಾರರೂ, ನೆರೆಹೊರೆಯ ರಾಜರ ಪ್ರತಿನಿಧಿಗಳು ಬಂದಿದ್ದರು. ಪಾಂಡಿಚೇರಿಯ ಗವರ್ನರ್ ತನ್ನ ಪ್ರತಿನಿಧಿಯೊಡನೆ ವಧೂವರರಿಗೆ ಉಡುಗೊರೆ ಕಳಿಸಿದ್ದನು. ಕಾಗನೂರಿನಿಂದ ಡಚ್ ರಾಯಭಾರಿ ಬಂದಿದ್ದನು. ನಾನಾಪÀಡ್ನವೀಸನ ವಿಶೇಷ ರಾಯಭಾರಿ ಗಣೇಶ್‍ರಾವ್ ಪುಣೆಯಿಂದ ಮದುವಣಿಗ ಟಿಪ್ಪುವಿಗೆ ಪಾರಿತೋಷಕಗಳನ್ನು ತಂದಿದ್ದನು. ಈ ಎಲ್ಲಾ ಕಾರಣಗಳಿಂದ ಟಿಪ್ಪು ಸುಲ್ತಾನನ ತಂದೆ ತಾಯಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಮದುವೆಯಾದ ನಂತರ ಟಿಪ್ಪುವಿಗೆ ರಾಜ್ಯಾಡಳಿತ ಶಿಕ್ಷಣ ನೀಡಲಾಯಿತು. ಆ ಶಿಕ್ಷಣ ಪಡೆಯಲು ಅವನು ರಾಜ್ಯದ ಅನೇಕ ಭಾಗಗಳಿಗೆ ಹೋಗಬೇಕಾಯಿತು. ಟಿಪ್ಪುವನ್ನು ಕಂಡರೆ ರಾಜ್ಯದ ಪ್ರಜೆಗಳಿಗೆ ಅಪಾರ ಪ್ರೀತಿ, ಅವನ ರೂಪ ಎಲ್ಲರನ್ನು ಆಕರ್ಷಿಸುತ್ತಿತ್ತು.
ಟಿಪ್ಪುವಿನದು ಎತ್ತರದ ನಿಲುವು, ದಷ್ಟಪುಷ್ಟವಾದ ಮೈಕಟ್ಟು, ಅಗಲವಾದ ಎದೆ, ದಪ್ಪನೆಯ ಕತ್ತು, ಕಂದು ಬಣ್ಣ, ನೀಳ ಮೂಗಿಗೆ ಒಪ್ಪುವ ದೊಡ್ಡ ಕಣ್ಣುಗಳು, ಗಾಂಭೀರ್ಯದಿಂದ ಕೂಡಿದ ಮುಖದಲ್ಲಿ ತೀಡಿನಿಂತ ಹುರಿಮೀಸೆ, ಮುತ್ತಿನ ಸಾಲುಗಳಂತ ದಂತ ಪಂಕ್ತಿ, ಧೈರ್ಯ ಅವನ ಹುಟ್ಟು ಗುಣ, ಸಾಹಸ ಅವನ ರಕ್ತದಲ್ಲಿಯೇ ಮಿಲನಗೊಂಡಿತ್ತು.
ಮೈಸೂರು ಹುಲಿ:
ಟಿಪ್ಪು ಇಪ್ಪತೈದು ವರ್ಷದವನಿದ್ದಾಗ ಅವನ ಜೀವನದಲ್ಲಿ ಒಂದು ಮಹತ್ವ ಪೂರ್ಣ ಘಟನೆ ನಡೆಯಿತು. ಒಂದು ದಿನ ಒಬ್ಬ ಫ್ರೆಂಚ್ ಕಪ್ತಾನನೂ ಹಾಗೂ ಟಿಪ್ಪುವೂ ಹುಲಿಯ ಬೇಟೆಗಾಗಿ ಕಾಡಿಗೆ ಹೋಗಿದ್ದರು. ಎಷ್ಟು ಹೊತ್ತಾದರೂ ಬೇಟೆ ಸಿಗಲಿಲ್ಲ. ಕಾದು ಕಾದು ಬೇಸತ್ತರು. ಸಾಯಂಕಾಲವಾಗುತ್ತಾ ಬಂದಿತು. ಇನ್ನು ಕಾಡಿನಲ್ಲಿ ಕಾಲ ಕಳೆಯುವುದು ಒಳ್ಳೆಯದಲ್ಲವೆಂದು ಯೋಚಿಸಿ ಅವರು ಶ್ರೀರಂಗಪಟ್ಟಣಕ್ಕೆ ಹಿಂದಿರುಗುತ್ತಿದ್ದರು. ಆಗ ಎದುರಿದ್ದ ಪೊದೆಯಲ್ಲಿ ಸರ್ರನೆಯ ಶಬ್ದವಾಯಿತು. ಅತ್ತ ನೋಡುತ್ತಾರೆ. ಕೆಂಡದಂತಹ ಕಣ್ಣುಗಳ ಒಂದು ಹುಲಿ ಇವರನ್ನೇ ನೋಡುತ್ತಾ ಹೊಂಚು ಹಾಕಿ ನಿಂತಿದೆ. ಹುಲಿಯನ್ನು ಕಂಡ ತಕ್ಷಣವೇ ಫ್ರೇಂಚ್ ಕಪ್ತಾನನು ತನ್ನ ಬಂದೂಕನ್ನು ಎತ್ತಿ ಅದರ ಕಡೆ ಗುರಿ ಹಿಡಿದನು. ಆಗ ಅವನÀನ್ನು ತಡೆದು ಟಿಪ್ಪು ಸುಲ್ತಾನ್ ಹೀಗೆ ಹೇಳಿದನು. ‘ಹುಲಿಯ ಬೇಟೆಯಾಡುವುದು ಹಾಗಲ್ಲ ಮಸ್ಸೆಯರ್’ ಈ ಮಾತನ್ನು ಅವನು ಹೇಳುತ್ತಿದ್ದಂತೆಯೇ ಹುಲಿ ಅವರ ಮೇಲೆ ಎರಗಿತು. ಅರೆಕ್ಷಣದಲ್ಲಿಯೇ ಟಿಪ್ಪು ಒರೆಯಿಂದ ಕತ್ತಿಯನ್ನೆಳೆದು ಮೇಲೆ ಬೀಳುತ್ತಿದ್ದ ಹುಲಿಯೆದೆಗೆ ಬಲವಾಗಿ ತಿವಿದನು. ಹುಲಿಯು ಘರ್ಜಿಸುತ್ತಾ ಕೆಳಕ್ಕೆ ಬಿದ್ದಿತು. ಆದರೆ ರೆಪ್ಪೆ ಹೊಡೆದು ಕಣ್ಣು ತೆರೆದು ನೋಡುವಷ್ಟರಲ್ಲಿಯೇ ಅದು ಮೇಲೆದ್ದು ಹೌಹಾರಿ ಅವರ ಮೇಲೆ ಬಿದ್ದಿತು. ಟಿಪ್ಪು ಕತ್ತಿಯಿಂದ ಅದರ ಮುಖಕ್ಕೆ ಬಲವಾಗಿ ಹೊಡೆದನು ಛಂಗನೆ ಹಾರಿ ಬಂದು ಟಿಪ್ಪುವನ್ನು ಅಪ್ಪಳಿಸಿತು. ಟಿಪ್ಪು ಕೆಳಕ್ಕೆ ಬಿದ್ದನು. ಹುಲಿಯು ಘರ್ಜಿಸುತ್ತಾ ಅವನ ಮೇಲೇರಿತು. ಅವನನ್ನು ಕಚ್ಚಿತು, ಪರಚಿತು, ಟಿಪ್ಪು ಈಗ ಸಾವಿನ ದವಡೆಯಲ್ಲಿದ್ದನು.
ಧೈರ್ಯವಂತ ಟಿಪ್ಪು ಎದೆಗುಂದಲಿಲ್ಲ, ಸರ್ರನೆ ಪಕ್ಕಕ್ಕೆ ಉರುಳಿ, ಎದುರು ಮಂಡಿಯೂರಿ ಕತ್ತಿಯಿಂದ ಬಲವಾಗಿ ಮತ್ತೊಮ್ಮೆ ಅದರ ಮುಖಕ್ಕೆ ಹೊಡೆದನು. ಹುಲಿ ಘರ್ಜಿಸುತ್ತಾ ಮುನ್ನುಗ್ಗಿ ಮುಂಗಾಲಿನಿಂದ ಅವನನ್ನು ಜಾಡಿಸಿತು. ಅದರ ಪೆಟ್ಟಿನ ರಭಸಕ್ಕೆ ಟಿಪ್ಪುವಿನ ಕೈಯಲ್ಲಿದ್ದ ಕತ್ತಿ ಕೆಳಗೆ ಬಿದ್ದು ಹೋಯಿತು. ಟಿಪ್ಪು ನಿಶಸ್ತ್ರನಾದನು. ಎರಡು ಹೆಜ್ಜೆ ಹಿಂದೆ ಸರಿದನು. ಹುಲಿ ಆರ್ಭಟಿಸುತ್ತಾ ಅವನ ಕಡೆಯೇ ಬರುತ್ತಿತ್ತು. ಸಮಯ ಕಾಯುತ್ತಿದ್ದ ಟಿಪ್ಪು ಅದರ ದವಡೆಯಲ್ಲಿ ಎಡಗೈಯನ್ನು ಒಡ್ಡಿ ಬಲ ಮುಷ್ಠಿಯಿಂದ ಬಲವಾಗಿ ಕಣ್ಣಿಗೆ ಹೊಡೆದನು. ಹುಲಿ ಘರ್ಜಿಸುತ್ತಾ ಮತ್ತೆ ಅವನ ಮೇಲೆ ಬಿದ್ದಿತು. ಅವನ ಮೈಯನ್ನೆಲ್ಲಾ ಗಾಯಗೊಳಿಸಿತು. ಆವೇಶ ಭರಿತನಾದ ಟಿಪ್ಪು ಈಗ ತನ್ನ ಎರಡೂ ಕೈಗಳಿಂದ ಅದರ ದವಡೆಗಳನ್ನು ಸೀಳಲು ಪ್ರಯತ್ನಿಸಿದನು. ಈ ವೇಳೆಗಾಗಲೇ ಹುಲಿ ನಿಶ್ಯಕ್ತವಾಗಿತ್ತು. ಅದು ಕೆಳಕ್ಕೆ ಬಿದ್ದು ಒದ್ದಾಡಿ ಪ್ರಾಣಬಿಟ್ಟಿತು. ಅಷ್ಟೊತ್ತಿಗಾಗಲೇ ಟಿಪ್ಪು ಸುಲ್ತಾನ್ ರಕ್ತದಿಂದ ತೋಯ್ದು ಹೋಗಿದ್ದನು. ಫ್ರೆಂಚ್ ಕಪ್ತಾನನು ಈ ದೃಶ್ಯವನ್ನು ಉಗುಳು ನುಂಗುತ್ತಾ ದಂಗುಬಡಿದು ನೋಡುತ್ತಿದ್ದನು.
ಮಾರನೆ ದಿನ ಹುಲಿಯ ಕಳೇ ಬರವನ್ನು ಎರಡೆತ್ತಿನ ಬಂಡಿಯ ಮೇಲೆ ಏರಿಸಿ ಶ್ರೀರಂಗಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಜನರು ನಿಬ್ಬೆರಗಾಗಿ ಹುಲಿಯನ್ನು ನೋಡಿದರು. ಆಗ ಜನರು ಟಿಪ್ಪುವನ್ನು ‘ಮೈಸೂರು ಹುಲಿ’ ಎಂದು ಕರೆದರು. ಆ ಹೆಸರು ಟಿಪ್ಪುವಿನ ಜೀವನ ಪರ್ಯಂತವೂ ಅವನಿಗೆ ಅಂಟಿಕೊಂಡಿತು. ಹುಲಿಯೊಡನೆ ಈ ರೀತಿ ಸೆಣಸಾಡಿದ ಅನುಭವ ಟಿಪ್ಪುವಿನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು. ಅವನು ತನ್ನ ಜೀವಮಾನವೆಲ್ಲಾ ಹುಲಿಯ ಆರಾಧಕನಾದನು. ಮಹಲಿನ ಎಲ್ಲಾ ಗೋಡೆಗಳ ಮೇಲೂ ಹುಲಿಯ ಲಾಂಛನವಿಟ್ಟನು. ಹಳದಿ ಬಣ್ಣದ ಹುಲಿಯ ಪಟ್ಟೆಗಳು ಎಲ್ಲೆಲ್ಲೂ ಕಂಡು ಬಂದವು. ತನ್ನ ಸಿಂಹಾಸನದ ಹಿಂಬದಿಯಲ್ಲಿ ಎದ್ದು ನಿಂತ ಹುಲಿಯ ಮೂರ್ತಿಯನ್ನು ನಿರ್ಮಿಸಿದನು. ಮೈಸೂರು ಸೈನ್ಯದ ತೋಪುಗಳ ಮುಖಕ್ಕೆ ಹುಲಿಯ ಬಾಯಿಯ ಆಕಾರವಿಟ್ಟನು. ಹುಲಿಯ ಚಿತ್ರವನ್ನು ಕಂಡರೆ ಟಿಪ್ಪುವಿಗೆ ಅಪಾರ ಆನಂದವಾಗುತ್ತಿತ್ತು. ತನ್ನ ಜೀವನ, ಹುಲಿಯ ಜೀವನದ ಪ್ರತೀಕವೆಂದು ಭಾವಿಸಿದ ಅವನು ಹುಲಿಯಂತೆ ಬಾಳಿದನು.
‘ನಾಲ್ಕನೇ ಮೈಸೂರು ಯುದ್ಧ’
ಟಿಪ್ಪು ಸುಲ್ತಾನನು ಅಪ್ಘಾನಿಸ್ಥಾನದ ಅಮೀಂನೊಡನೆಯೂ ಮತ್ತು ನೆಪೋಲಿಯನ್ ಬೋನಾಪಾರ್ಟೆಯೊಡನೆಯೂ ಮಾಡಿಕೊಂಡ ಸಂಧಾನಗಳಿಂದ ಇಂಗ್ಲೀಷರು ಗಾಬರಿಗೊಂಡರು. ಅವರು ಕೂಡಲೇ ಮದ್ರಾಸಿನಲ್ಲಿ ಒಂದು ದೊಡ್ಡ ಇಂಗ್ಲೀಷ್ ಸೈನ್ಯವನ್ನು ಕೂಡಿಸಿದರು. ಆ ಸೈನ್ಯಕ್ಕೆ ಜನರಲ್ ಹ್ಯಾರಿಸ್ ದಂಡ ನಾಯಕನಾಗಿದ್ದನು. ಮತ್ತೊಂದು ಇಂಗ್ಲೀಷ್ ಸೈನ್ಯ ಬೊಂಬಾಯಿಯಿಂದ ಮಂಗಳೂರಿನ ಕಡೆ ಬಂದಿತು. ಹೈದರಾಬಾದಿನ ನಿಜಾಮನೂ ಇಂಗ್ಲೀಷರೊಂದಿಗೆ ಸೇರಿಕೊಂಡನು, ಇಂಗ್ಲೀಷರು ಮರಾಠೆಯರನ್ನೂ ಯುದ್ಧಕ್ಕೆ ಎಳೆಯುವ ಪ್ರಯತ್ನ ಮಾಡಿದರು. ಅವರು ಒಪ್ಪಲಿಲ್ಲ.
‘ವೀರ ಮರಣದ ಹಾದಿಯಲ್ಲಿ’ :
ಎಲ್ಲಾ ಸಿದ್ಧತೆಗಳು ಮುಗಿದ ಮೇಲೆ 1799 ಫೆಬ್ರವರಿ ತಿಂಗಳಲ್ಲಿ ಇಂಗ್ಲೀಷರೂ ಮತ್ತು ನಿಜಾಮನೂ ಮೈಸೂರು ರಾಜ್ಯದ ಮೇಲೆ ದಾಳಿಗಳನ್ನು ನಡೆಸಿದರು. ರಾಯಕೋಟೆ ಅವರ ವಶವಾಯಿತು. ಮೀರ್ ಸಾದಕ್ ಮತ್ತು ಗುಲಾರಿ ಅಲಿಯಾರಂಥಾ ರಾಷ್ಟ್ರ ದ್ರೋಹಿಗಳ ಒಳಸಂಚಿನಿಂದ ಮೈಸೂರು ರಾಜ್ಯದ ಅನೇಕ ಭಾಗಗಳನ್ನು ಶತೃಗಳು ಒಳಪಡಿಸಿಕೊಂಡರು. ಮಂಗಳೂರಿನಿಂದ ಬರುತ್ತಿದ್ದ ಇಂಗ್ಲೀಷ್ ಸೈನ್ಯವನ್ನು ತಡೆಗಟ್ಟಲು ಟಿಪ್ಪು ಮೊದಲ ಪ್ರಯತ್ನ ಪಟ್ಟನು. ಕೊಡಗು ಸಮೀಪಿಸಿದಾಗ ಸಿದ್ದೇಶ್ವರ ಬಳಿ ಮೈಸೂರು ಸೈನ್ಯ ಇಂಗ್ಲೀಷರನ್ನು ಎದುರಿಸಿತು. ಯುದ್ದ ನಡೆಯಿತು. ಆದರೆ ಆ ಯುದ್ಧದಲ್ಲಿ ಮೈಸೂರಿನವರಿಗೆ ಸೋಲಾಯಿತು. ಟಿಪ್ಪು ಸುಲ್ತಾನನು ಹಿಂಜರಿಯಬೇಕಾಯಿತು. ಬೆಂಗಳೂರಿನ ಮಾರ್ಗವಾಗಿ ಶ್ರೀರಂಗಪಟ್ಟಣದ ಕಡೆ ಬರುತ್ತಿದ್ದ ಜನರಲ್ ಹ್ಯಾರಿಸ್ಸಿನ ಸೈನ್ಯವನ್ನು ಮಳವಳ್ಳಿಯ ಬಳಿ ತಡೆಯಲು ಪ್ರಯತ್ನಪಟ್ಟನು. ಮಳವಳ್ಳಿಯಲ್ಲಿ ಘೋರ ಕಾಳಗವಾಯಿತು. ಮೈಸೂರು ಯೋಧರು ವೀರಾವೇಶದಿಂದ ಕಾದಾಡಿದರು. ಅದೃಷ್ಟ ಅವರ ಕಡೆ ಒಲಿಯಲಿಲ್ಲ. ಯುದ್ಧ ರಂಗದಿಂದ ಹಿಮ್ಮೆಟ್ಟಿ ಅವರು ಶ್ರೀರಂಗಪಟ್ಟಣಕ್ಕೆ ಹಿಂತುರಿಗಿ ಬರಬೇಕಾಯಿತು.
ಕೂಡಲೇ ಇಂಗ್ಲೀಷ್ ಮತ್ತು ಹೈದರಾಬಾದ್ ಸೈನ್ಯಗಳು ಶ್ರೀರಂಗಪಟ್ಟಣವನ್ನು ಮುತ್ತಿದವು. ಶ್ರೀರಂಗಪಟ್ಟಣದಲ್ಲಿ ದೇಶ ದ್ರೋಹಿಗಳ ಪಿತೂರಿ ಬಲವಾಗಿ ನಡೆದಿತ್ತು. ಸುಲ್ತಾನನ ಮಹಲಿದ್ದ ಕಡೆಯ ಕೋಟೆಯ ಭಾಗವೂ, ಈಶಾನ್ಯ ದಿಕ್ಕಿನಲ್ಲಿದ್ದ ಬಾವುಟದ ಬತೇರಿಯ ಭಾಗವೂ, ಅಷ್ಟು ಸುರಕ್ಷಿತವಾಗಿರಲಿಲ್ಲ. ರಾಷ್ಟ್ರ ದ್ರೋಹಿಗಳ ಸಹಾಯದಿಂದ ಕೋಟೆಯ ಗೋಡೆಗಳನ್ನು ಒಡೆಯಲು ಇಂಗ್ಲೀಷರು ಈ ಎರಡು ಭಾಗಗಳನ್ನೇ ಆರಿಸಿಕೊಂಡರು. ಬಲವಾದ ದಾಳಿಗಳನ್ನು ನಡೆಸಿದರು. ಮಹಲಿನ ಸಮೀಪದ ಉತ್ತರದ ಗೋಡೆಯ ಭಾಗದಲ್ಲಿ ಟಿಪ್ಪು ಸುಲ್ತಾನನೇ ಕಾದಾಡುತ್ತಿದ್ದನು. ಸುಲ್ತಾನನು ಅಲ್ಲಿರುವುದನ್ನು ಗೂಢಾಚಾರದಿಂದ ತಿಳಿದ ಇಂಗ್ಲೀಷರು ಅತ್ತಕಡೆ ಗೋಲಿಬಾರ್ ಮಾಡಿದರು. ಬಾವುಟದ ಬತೇರಿಯ ಎದುರಿನಲ್ಲಿ ಇಂಗ್ಲೀಷರ ಸೈನ್ಯಗಳು ಕಂದಕಗಳನ್ನು ತೋಡಿ ಅಲ್ಲಿ ಸೈನಿಕರನ್ನು ತುಂಬಿದರು. ಅಲ್ಲಿಂದ ಬಲವಾಗಿ ಕೋಟೆಯ ಮೇಲೆ ತೋಪುಗಳಿಂದ ಗುಂಡಿನ ಮಳೆಗರೆದರು. ಇಲ್ಲಿ ವೀರ ಸರದಾರ ಸೈಯದ್ ಗಫಾರನು ಹೋರಾಡುತ್ತಿದ್ದನು. ಶತೃಗಳ ದಾಳಿಗಳಿಂದ ಕೋಟೆಯ ಗೋಡೆ ಎರಡೂ ಕಡೆ ಬಿರುಕು ಬಿಟ್ಟಿತು. ಕೂಡಲೇ ಬಿರುಕುಗಳನ್ನು ಅಗಲಮಾಡಿ ಕೋಟೆಯೊಳಕ್ಕೆ ನುಗ್ಗಲು ದಾರಿ ಮಾಡಲಾಯಿತು. ಆಗ 1799ರ ಮೇ ತಿಂಗಳ 4ನೇ ತಾರೀಖು ಇಂಗ್ಲೀಷರು ರಾತ್ರಿ ದಾಳಿ ನಡೆಸುವ ಸೂಚನೆಗಳು ಕಂಡು ಬಂದವು. ಆ ದಿನ ಸುಲ್ತಾನನು ಬೆಳಗ್ಗೆಯಿಂದ ಒಂದೇ ಸಮನೇ ಕುದುರೆಯ ಮೇಲೆ ಇದ್ದು ಇಂಗ್ಲೀಷರ ತೋಪುಗಳ ಮೇಲೆ ದಾಳಿ ನಡೆಸುತ್ತಿದ್ದನು. ಮೈಸೂರು ಸೈನಿಕರನ್ನು ಹುರಿದುಂಬಿಸುತ್ತಿದ್ದನು. ಮಧ್ಯಾಹ್ನವಾಯಿತು. ಸುಲ್ತಾನನು ಅಲ್ಲಿಂದ ಮಾವಿನ ಮರದ ಕೆಳಗೆಕುಳಿತು ಮೂರು ನಾಲ್ಕು ತುತ್ತು ಅನ್ನ ಊಟ ಮಾಡಿದ್ದನು. ಆಗ ಕೆಲ ಸೈನಿಕರು ಓಡಿ ಬಂದು ಸೈಯದ್ ಗಫಾರನ ಮರಣಾವಾರ್ತೆಯನ್ನು ತಿಳಿಸಿದರು. ಸುಲ್ತಾನನು ಉಳಿದ ಅನ್ನವನ್ನು ತಟ್ಟೆಯಲ್ಲೇ ಬಿಟ್ಟು ತಕ್ಷಣ ಮೇಲೆದ್ದು ರಣರಂಗಕ್ಕೆ ಧಾವಿಸಿದನು.
ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಇಂಗ್ಲೀಷರು ಬಿರುಕು ಬಿಟ್ಟಿದ್ದ ಕೋಟೆ ಭಾಗಗಳಿಂದ ಒಳಕ್ಕೆ ನುಗ್ಗಿದರು. ಜನರಲ್ ಬೆಯಾರ್ಡ್ ಅವರ ನಾಯಕನಾಗಿದ್ದನು. ಶತೃಗಳು ಎರಡು ಕಡೆಗಳಿಂದ ಮುನ್ನುಗಿದರು. ಯುದ್ಧ ಬಿರುಸಾಯಿತು. ಎರಡೂ ಕಡೆಯೂ ಸಾವಿರಾರು ಜನರು ಸತ್ತು ಬಿದ್ದರು. ಒಳ ನುಗ್ಗಿದ ಇಂಗ್ಲೀಷ್ ಸೈನ್ಯ ಕೋಟೆಯ ದಕ್ಷಿಣ ಭಾಗವನ್ನು ಮತ್ತು ಪಶ್ಚಿಮದ ಕೋಟೆಯ ಬಾಗಿಲನ್ನು ವಶಪಡಿಸಿಕೊಂಡಿತು. ಆಗ ಸುಲ್ತಾನನು ಕೋಟೆಯ ಎರಡು ಗೋಡೆಗಳ ಮಧ್ಯೆ ಕಾದಾಡುತ್ತಿದ್ದನು. ಇಂಗ್ಲೀಷ್ ಸೈನ್ಯ ಮುಂದುವರೆಯುತ್ತಿದ್ದರಿಂದ ಅವನು ಹಿಮ್ಮೆಟ್ಟಬೇಕಾಯಿತು. ಹಿಮ್ಮೆಟ್ಟುತ್ತಾ ಅವನು ದಿಡ್ಡಿಯ ಬಾಗಿಲಿಗೆ ಬಂದನು. ಸುಲ್ತಾನನು ತಪ್ಪಿಸಿಕೊಂಡು ಹೋದಾನೆಂದು ದ್ರೋಹಿಗಳು ಈ ಬಾಗಿಲನ್ನು ಮುಚ್ಚಿ ಬಿಟ್ಟಿದ್ದರು. ಆದ್ದರಿಂದ ಅವನು ಅಲ್ಲೇ ಕಾದಾಡಬೇಕಾಯಿತು. ಹಾಗೆ ಅವನು ಕಾದಾಡುತ್ತಿದ್ದಾಗ ಅವನ ಕುದುರೆಗೆ ಗುಂಡು ತಾಗಿ ಕೂಡಲೇ ಅದು ಕುಸಿಯಿತು. ಸುಲ್ತಾನನು ನಿಂತೇ ಯುದ್ಧ ಮಾಡಬೇಕಾಯಿತು. ಆಗ ಅವನ ಶತೃಗಳ ಗುಂಡಿನ ಮಳೆಗೆ ಎದುರಾದನು. ಒಂದು ಗುಂಡು ಅವನ ಬಲಭುಜಕ್ಕೆ ತಾಗಿತು. ಅದನ್ನು ಲೆಕ್ಕಿಸದೆ ಸುಲ್ತಾನನು ಮುನ್ನುಗ್ಗಿದನು. ಅವನ ಸುತ್ತಲೂ ಸ್ವಾಮಿ ನಿಷ್ಠೆಯ ಸೈನಿಕರು ವೀರಾವೇಶದಿಂದ ಕಾದಾಡುತ್ತಿದ್ದರು, ಅವನಿಗೆ ಬಾಯಾರಿಕೆಯಾಗಿತ್ತು. ನೀರು ಕೇಳಿದನು, ಅಲ್ಲಿ ನೀರು ಸಿಗಲಿಲ್ಲ, ಆದರೂ ಸುಲ್ತಾನನು ಕಾದಾಡುತ್ತಾ ಮುಂದುವರೆÀದನು. ಅವನು ದಿಡ್ಡಿ ಬಾಗಿಲು ಸಮೀಪಿಸಿದಾಗ ಮತ್ತೊಂದು ಗುಂಡು ಅವನ ಎದೆಗೆ ತಗುಲಿತು. ಅವನು ನಿಶ್ಯಕ್ತನಾಗಿ ಕೆಳಕ್ಕೆ ಉರುಳಿದನು. ಕೂಡಲೇ ಅವನ ಸ್ವಾಮಿ ನಿಷ್ಠೆ ಸೈನಿಕರು ಅವನನ್ನು ಪಲ್ಲಕ್ಕಿಯಲ್ಲಿ ಒರಗಿಸಿ ಕುಳ್ಳರಿಸಿ ಅದನ್ನು ದಿಡ್ಡಿಯ ಬಾಗಿಲ ಒಂದು ಕಮಾನಿನ ಕೆಳಗೆ ಇಟ್ಟರು. ಈ ವೇಳೆಗೆ ಶತೃ ಸೈನ್ಯ ದಿಡ್ಡಿ ಬಾಗಿಲ ಕಡೆ ಮುನ್ನುಗ್ಗುತ್ತಿತ್ತು. ಆಗ ಒಬ್ಬ ಇಂಗ್ಲೀಷ್ ಸೈನಿಕನು ಸುಲ್ತಾನನ ಸೊಂಟದಲ್ಲಿದ್ದ ವಜ್ರದ ಕತ್ತಿಯ ಪಟ್ಟಿಯನ್ನು ಕಂಡು ಅದನ್ನು ಕಸಿದುಕೊಳ್ಳಲು ಪ್ರಯತ್ನಿಸಿದ. ಇದರಿಂದ ತನ್ನ ಆತ್ಮ ಗೌರವಕ್ಕೆ ಕುಂದಾಯಿತೆಂದು ಕುದಿದೆದ್ದ ಟಿಪ್ಪು ಆ ಇಂಗ್ಲೀಷ್ ಸೈನಿಕನಿಗೆ ಬಲವಾಗಿ ಹೊಡೆದನು. ಆಗ ಅವನು ಗುಂಡಿಕ್ಕಿ ಸುಲ್ತಾನನ್ನು ಕೊಂದನು. ‘ಮೈಸೂರು ಹುಲಿ’ಯ ಮರಣ ಈ ರೀತಿ ಸಂಭವಿಸಿತು. ಆಗ ಸುಲ್ತಾನನಿಗೆ 48 ವರ್ಷ ವಯಸ್ಸಾಗಿತ್ತು. ಸುಲ್ತಾನನನ್ನು ಗುಂಡಿಕ್ಕಿ ಕೊಂದ ಇಂಗ್ಲೀಷ್ ಸೈನಿಕನಿಗೆ ಅವನು ಸುಲ್ತಾನನೆಂದು ತಿಳಿದಿರಲಿಲ್ಲ.
ರಾತ್ರಿ ಬಹಳ ಹೊತ್ತು ಹುಡುಕಿದ ಮೇಲೆ ಟಿಪ್ಪು ಸುಲ್ತಾನನ ಶವ ಸಿಕ್ಕಿತು. ಈ ಸುದ್ದಿಯನ್ನು ಜನರಲ್ ಹ್ಯಾರಿಸ್ಸನಿಗೆ ತಿಳಿಸಿದಾಗ ಅವನು ಬಹಳ ಸಂತುಷ್ಟನಾಗಿ ಹೇಳಿದನು. ‘ಹಿಂದೂಸ್ಥಾನ ಈಗ ನಮ್ಮದಾಗಿದೆ!’ ಮಾರನೆಯ ದಿನ ಸುಲ್ತಾನನ ಶವದ ಸಂಸ್ಕಾರ ನಡೆಯಿತು. ಅವನ ಕಳೇ ಬರ ಶ್ರೀರಂಗಪಟ್ಟಣದ ಬೀದಿಗಳಲ್ಲಿ ಹೋಗುತ್ತಿದ್ದಾಗ ಪ್ರಜೆಗಳ ನಯನಗಳೆಲ್ಲಾ ತೋಯ್ದು ಮಂಕಾಗಿದ್ದವು. ಜನರ ಅಳುವಿನ ಆಕ್ರಂದನ ಮುಗಿಲು ಮುಟ್ಟಿತು. ಗಂಜಾಮಿನರಲ್ಲಿರುವ ಹೈದರ್ ಆಲಿಯ ಗೋರಿಯ ಪಕ್ಕದಲ್ಲಿ ಟಿಪ್ಪು ಸುಲ್ತಾನನ ಸಮಾಧಿ ಮಾಡಲಾಯಿತು.
ಗೆಲುವಿನಲ್ಲಿ ತೋರುವ ಧೈರ್ಯಕ್ಕೂ ಸೋಲಿನಲ್ಲಿ ತೋರುವ ಧೈರ್ಯಕ್ಕೂ ಬಹಳ ವ್ಯತ್ಯಾಸವಿದೆ. ಟಿಪ್ಪು ಸುಲ್ತಾನನ ವೀರ ಮರಣದ ವಾರ್ತೆಯನ್ನು ಕೇಳಿದ ಇತರ ದೇಶೀಯ ರಾಜರು ಅವನನ್ನು ಕೊಂಡಾಡಿದರು. ನಾಡ ಜನರು ಅವರ ಬಗ್ಗೆ ಲಾವಣಿ ಕಟ್ಟಿ ಹಾಡಿದರು. ಒಬ್ಬ ಕನ್ನಡ ಕವಿ ಟಿಪ್ಪುವನ್ನು ಹೊಗಳಿ ಹೀಗೆ ಬರೆದನು.
‘ಸರಿಯಾರ್ ಟೀಪುವಿನೋಳ್ ಸಮಂತು ಬಗೆಯಲ್ ಸಂಗ್ರಾಮ ಸಮ್ರಾಟರೋಳ್?’ ನಿಜ, ಹಿಂದೆ ಆಗಿ ಹೋದ ಸಂಗ್ರಾಮ ಸಾಮ್ರಾಟರ ಶ್ರೇಣಿಯಲ್ಲಿ ಟಿಪ್ಪು ಸುಲ್ತಾನನ ಹೆಸರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಟಿಪ್ಪು ಕನ್ನಡ ನಾಡಿನ ‘ಧೃವತಾರೆ’ಯಾಗಿ ಎಲ್ಲಾ ಕನ್ನಡಿಗರಲ್ಲದೇ, ಇಡೀ ವಿಶ್ವದ ಜನರಿಗೆ ಅಭಿನಂದನಾರ್ಹವಾಗಿ ತಮ್ಮ ಹೃದಯ ಕಮಲದಲ್ಲಿ ಸ್ಥಾನ ನೀಡಿದ್ದಾರೆ.

No comments:
Post a Comment